

ಬೆಂಗಳೂರು: ಬಿಜೆಪಿ ಮುಖಂಡ ವೆಂಕಟೇಶ್ ಮೌರ್ಯ ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು 38 ವರ್ಷದ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ.
ಉಪ್ಪಾರ ಪೇಟೆಯಲ್ಲಿ ದೂರು ದಾಖಲಿಸಿರುವ ಮಹಿಳೆ, ತಾವು ನಡೆಸುತ್ತಿರುವ ಎನ್ ಜಿಒ ಗೆ ಸರ್ಕಾರದಿಂದ ಅನುದಾನ ಕೊಡಿಸುವುದಾಗಿ ಭರವಸೆ ನೀಡಿ ತನಗೆ ವಂಚಿಸಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ.
ಎಸ್ಸಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಮಾಜಿ ಸದಸ್ಯ ರಾಗಿರುವ ವೆಂಕಟೇಶ್ ಮೌರ್ಯ 2010 ರಲ್ಲಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ, ಹೀಗಾಗಿ ವೆಂಕಟೇಶ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಕೆ ಮನವಿ ಮಾಡಿದ್ದಾರೆ. ಘಟನೆ ನಡೆದು ಆರು ವರ್ಷವಾಗಿದೆ. ಆದರೆ ಇಷ್ಟು ತಡವಾಗಿ ಏಕೆ ದೂರು ದಾಖಲಿಸಿದ್ದಾರೆ ಎಂದು ಆಕೆ ತಿಳಿಸಿಲ್ಲ. ಹೀಗಾಗಿ ಸೂಕ್ತ ಸಾಕ್ಷಿ ಸಿಕ್ಕರೆ ಅವರನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.