

ಮೈಸೂರು: ಪ್ರೀತಿಗೆ ಅಡ್ಡಿಪಡಿಸಿದ ತಂದೆ ಮಗನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಪೊಲೀಸರು ಪ್ರಮುಖ ಆರೋಪಿ ಮೋನಿಷಾ (21) ಳನ್ನು ಬಂಧಿಸಿದ್ದಾರೆ.
ಮುಕ್ತರ್ ಸಂಬಂಧಿ ಸಿರಾಜ್ ನನ್ನು ಮೋನಿಷಾ ಪ್ರೀತಿಸುತ್ತಿದ್ದಳು. ಕಳೆದ ಒಂದು ವರ್ಷದಿಂದ ಇಬ್ಬರು ಪರಸ್ಪರ ಪ್ರೇಮಿಸುತ್ತಿದ್ದರು. ಆದರೆ ಸಿರಾಜ್ ಪೊಷಕರು ಇದಕ್ಕೆ ವಿರೋಧ ವ್ಯಕ್ತ ಪಡಿಸಿದ್ದರು.
ಒಂದು ದಿನ ಮನೆಗೆ ಬಂದ ಮೋನಿಷಾ ಸಿರಾಜ್ ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಮನಯಲ್ಲಿ ವಾಗ್ವಾಗ ನಡೆದು ಸಿರಾಜ್ ತಂದೆ ಮೋಯಿನ್ ಮೋನಿಷಾ ಕಪಾಳಕ್ಕೆ ಹೊಡೆದಿದ್ದಾರೆ. ಇದರಿಂದ ಅವಮಾನಿತಳಾದ ಮೋನಿಷಾ ಅವರ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದಾಳೆ.
ತನ್ನ ತಂದೆಯ ಜೊತೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಶಿವಕುಮಾರ್ ಎಂಬಾತನ ಸಹಾಯ
ಪಡೆದ ಮೋನಿಷಾ ತಂದೆ ಮಗನ ಮೇಲೆ ಹಲ್ಲೆ ಮಾಡಲು ನಿರ್ಧರಿಸಿದ್ದಾಳೆ. ಶಿವಕುಮಾರ್ ತನ್ನ ಸ್ನೇಹಿತರಾದ ರಾಘವೇಂದ್ರ ಮತ್ತು ಗೌತಮ್ ರೊಡಗೊಡಿ ಮೊಯಿನ್ ಮತ್ತು ಶಿರಾಜ್ ಮೇಲೆ ಹಲ್ಲೆ ನಡೆಸಿದ್ದಾರೆ.
ಆರೋಪಿಗಳು ಸುಮಾರು 18 ಕಡೆ ಚುಚ್ಚಿದ್ದು ಇಬ್ಬರು ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎನ್ ಆರ್ ಮೊಹಲ್ಲಾ ಇನ್ಸ್ ಪೆಕ್ಟರ್ ಅಶೋಕ್ ಕುಮಾರ್ ತಿಳಿಸಿದ್ದಾರೆ.
ಸಿರಾಜ್ ಗಾಗಿ ಪೊಲೀಸರು ಲುಕ್ ಔಟ್ ನೋಟ್ ಜಾರಿ ಮಾಡಿದ್ದು, ಪ್ರೀತಿಗಾಗಿ ಮೋನಿಷಾ ಈ ಕೃತ್ಯ ನಡೆಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.