ಕಾವೇರಿ ವಿವಾದ: ಬೆಂಗಳೂರಿನಲ್ಲಿ ಈಗ 'ಮೋದಿಮೋಸ' ಟ್ರೆಂಡಿಂಗ್ ಟಾಪಿಕ್

ಕಾವೇರಿ ವಿಚಾರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮೌನ ಹಾಗೂ ರಾಜ್ಯ ಬಿಜೆಪಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು...
ಮೋದಿ
ಮೋದಿ
ಬೆಂಗಳೂರು: ಕಾವೇರಿ ವಿಚಾರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮೌನ ಹಾಗೂ ರಾಜ್ಯ ಬಿಜೆಪಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು ಟ್ವೀಟರ್ ನಲ್ಲಿ ಮೋದಿಮೋಸ ಟ್ರೆಂಡಿಂಗ್ ಟಾಪಿಕ್ ಆಗಿದೆ. 
ಸರ್ವಪಕ್ಷ ಸಭೆಗೆ ಬಿಜೆಪಿ ಗೈರು ಹಾಜರು, ಕಾವೇರಿ ವಿಚಾರದಲ್ಲಿ ಮೋದಿ ಮೌನ, ತಮಿಳುನಾಡಿನಲ್ಲಿ ಬಿಜೆಪಿ ನಾಯಕರ ಹೇಳಿಕೆಯನ್ನು ಟ್ವೀಟರಿಗರು ಟೀಕಿಸಿದ್ದಾರೆ. 
ಟ್ವಿಟ್ಟರ್‌ನಲ್ಲಿ #ಮೋದಿಮೋಸ (#modimosa) ಎಂಬ ಹ್ಯಾಶ್‌ ಟ್ಯಾಗ್‌ ಹಾಕಿ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಶೇಷವಾಗಿ ಬಿಜೆಪಿ ಪರ ಇರುವ ವ್ಯಕ್ತಿಗಳೇ ಕರ್ನಾಟಕದ ಬಿಜೆಪಿಯನ್ನು ಟೀಕಿಸಿ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com