2022ರ ವೇಳೆಗೆ ಬೆಂಗಳೂರಿನಲ್ಲಿ 1 ಕೋಟಿ ವಾಹನಗಳು?

ಸಿಲಿಕಾನ್ ಸಿಟಿಯಲ್ಲಿ ಉದ್ಯೋಗ ಮಾಡುವವರ ದಿನದ ಬಹುತೇಕ ಸಮಯವನ್ನು ಟ್ರಾಫಿಕ್ ನುಂಗಿ ಹಾಕುತ್ತದೆ. ಇದಕ್ಕೆ ಕಾರಣ ಏನು ಎಂದರೇ ಉತ್ತರ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಉದ್ಯೋಗ ಮಾಡುವವರ ದಿನದ ಬಹುತೇಕ ಸಮಯವನ್ನು ಟ್ರಾಫಿಕ್ ನುಂಗಿ ಹಾಕುತ್ತದೆ. ಇದಕ್ಕೆ ಕಾರಣ ಏನು ಎಂದರೇ ಉತ್ತರ ವಾಹನಗಳು.

ಹೌದು, 2009 ರಲ್ಲಿ 449 ಬಿಎಂಟಿಸಿ ಬಸ್ ಗಳಿದ್ದವು. ಇದೇ ವೇಳೆ 22.37 ಲಕ್ಷ ದ್ವಿಚಕ್ರ ವಾಹನಗಳು, 6 ಲಕ್ಷ ಕಾರುಗಳಿದ್ದವು. 2009-10 ರಲ್ಲಿ 34.90 ಲಕ್ಷ ವಾಹನಗಳು ಹೆಚ್ಚು ಕಡಿಮೆ ದುಪ್ಪಟ್ಟಾಗಿವೆ, ಅಂದರೆ ಪ್ರಸಕ್ತ ಬೆಂಗಳೂರಲ್ಲಿ 67.22 ಲಕ್ಷ ವಾಹನಗಳಿವೆ.

ಮೆಟ್ರೋ ರೈಲು ಯೋಜನೆ ಇನ್ನೂ ತೆವಳುತ್ತಾ ಸಾಗಿದೆ, ಭೂಮಿಸ್ವಾಧೀನ ಪ್ರಕ್ರಿಯೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಸಬ್ ಅರ್ಬನ್ ರೈಲು ಯೋಜನೆ ಇನ್ನೂ ಆರಂಭವಾಗಿಯೇ ಇಲ್ಲ.  ಹೀಗಾಗಿ ಬಿಎಂಟಿಸಿ ಬಸ್ ಸೇವೆ ಹೆಚ್ಚಿಸಬೇಕು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಒಂದು ಕುಟುಂಬಕ್ಕೆ ಒಂದೇ ಕಾರು ಎಂಬ ನಿಯಮಗಳನ್ನು ಜಾರಿಗೆ ತರುವುದರಿಂದ ಖಾಸಗಿ ವಾಹನಗಳ ಸಂಖ್ಯೆ ಹೆಚ್ಚಾಗುವುದನ್ನು ತಪ್ಪಿಸಬಹುದಾಗಿದೆ.

ಬೆಂಗಳೂರಿನಲ್ಲಿ ಈಗಾಗಲೇ ಶೇ.70 ರಷ್ಟು ವಾಹನಗಳು ನೋಂದಣಿಯಾಗಿವೆ. ಅದರಲ್ಲಿ ಶೇ, 20 ರಷ್ಟು ಕಾರುಗಳಾಗಿವೆ. 2011ರ ಗಣತಿಯ ಪ್ರಕಾರ ಬೆಂಗಳೂರಿನಲ್ಲಿ 84.43 ಲಕ್ಷ  ಇದ್ದ ಜನಸಂಖ್ಯೆ 1 ಕೋಟಿಗೆ ತಲುಪಿದೆ. ಬೆಂಗಳೂರಲ್ಲಿ 6,207 ಬಿಎಂಟಿಸಿ ಬಸ್ ಗಳಿವೆ, ಆದರೆ ಸದ್ಯ ಸಿಲಿಕಾನ್ ಸಿಟಿಗೆ 12 ಸಾವಿರದಿಂದ 14 ಸಾವಿರ ಬಸ್ ಗಳ ಅವಶ್ಯಕತೆಯಿದೆ.

ಪ್ರತಿ ವರ್ಷ ಶೇ.10 ರಷ್ಟು ವಾಹನಗಳ ಸಂಖ್ಯೆ ಏರುತ್ತಿದೆ. ಹೀಗಾಗಿ ವಾಹನಗಳ ಸಂಖ್ಯೆ 1.08 ಕೋಟಿಗೆ ತಲುಪಲಿದೆ, 2021-22ರ ವೇಳೆಗೆ 74.95 ಬೈಕ್ ಗಳು, 20.96 ಲಕ್ಷ ಸಂಖ್ಯೆ ಕಾರುಗಳಾಗುತ್ತವೆ. ಬೆಂಗಳೂರಲ್ಲಿ ಪ್ರಸಕ್ತ 11 ಮಲ್ಟಿ ಲೆವೆಲ್ ಪಾರ್ಕಿಂಗ್  ಮಳಿಗೆಗಳಿವೆ, 2016 ರಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ತಪ್ಪು ಪಾರ್ಕಿಂಗ್ ಗಾಗಿ 22.01 ಲಕ್ಷ ಕೇಸ್ ಗಳು ದಾಖಲಾಗಿವೆ.

ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಅಭಿವೃದ್ಧಿಗೊಳಿಸುವುದು, ಮೇಲ್ಸೇತುವೆ, ರಸ್ತೆಗಳ ಅಗಲೀಕರಣ, ರಸ್ತೆಯಲ್ಲಿ ಪಾರ್ಕಿಂಗ್ ಮಾಡುವುದನ್ನು ತಪ್ಪಿಸಿ, ನಡಿಗೆಗೆ ಹೆಚ್ಚು ಪ್ರೋತ್ಸಾಹ, ಜೊತೆಗೆ ಸೈಕಲ್ ಬಳಸುವುದರಿಂದ ವಾಹನಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ರಸ್ತೆ ತಜ್ಞ ರೋಶನ್ ತೋಶ್ನಿವಾಲ್ ಅಭಿಪ್ರಾಯ ಪಡುತ್ತಾರೆ.

ಬಹಳ ಸುಲಭವಾಗಿ ವಾಹನಗಳಿಗೆ ಸಾಲ ಸಿಗುತ್ತಿರುವುದರಿಂದ, ಸಾರ್ವಜನಿಕ ಸಾರಿಗೆ ಬಳಸಲು ನಾಗರಿಕರು ಹಿಂದೇಟು ಹಾಕುತ್ತಿದ್ದು, ಸ್ವಂತ ವಾಹನಗಳನ್ನು ಬಳಸಲು ಮುಂದಾಗುತ್ತಿರುವುದು ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಏರಿಕೆಯಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com