ಮಂಗಳೂರು: ತಪ್ಪಿಸಿಕೊಳ್ಳಲು ಯತ್ನಿಸಿ 4ನೇ ಮಹಡಿಯಿಂದ ಜಿಗಿದ ಹೆಡ್ ಕಾನ್ ಸ್ಟೆಬಲ್ ಸಾವು

ಪೊಕ್ಸೋ ಕಾಯ್ದೆಯಡಿ ಬಂಧಿತ ಬಜ್ಪೆ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌, ನ್ಯಾಯಾಲಯದ ನಾಲ್ಕನೇ ಮಹಡಿಯಿಂದ ಜಿಗಿದು..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮಂಗಳೂರು: ಪೊಕ್ಸೋ ಕಾಯ್ದೆಯಡಿ ಬಂಧಿತ ಬಜ್ಪೆ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌, ನ್ಯಾಯಾಲಯದ ನಾಲ್ಕನೇ ಮಹಡಿಯಿಂದ ಜಿಗಿದು ಸಾವನ್ನಪ್ಪಿದ್ದಾರೆ.
 
ಪ್ರವೀಣ್ ಮೃತ ಕಾನ್‌ಸ್ಟೆಬಲ್‌. ಇವರನ್ನು ಪೊಕ್ಸೋ ಕಾಯ್ದೆಯಡಿ ಬಂಧಿಸಲಾಗಿತ್ತು.  ತನ್ನ ನೆರೆಮನೆಯ ಬಾಲಕಿ ಸ್ನಾನ ಮಾಡುವುದನ್ನು ವಿಡಿಯೋ ತೆಗಯುತ್ತಿದ್ದ ವೇಳೆ ಬಾಲಕಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದ. ನಂತರ ಬಾಲಕಿ ಆತನನ್ನು ಹಿಡಿದುಕೊಂಡು ತನ್ನ ತಾಯಿಯ ಬಳಿ ಕರೆತಂದಿದ್ದಳು. ಈ ಸಂಬಂಧ ಬಾಲಕಿ ತಾಯಿ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

ವಿಚಾರಣೆಗಾಗಿ  ನಗರದ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತರಲಾಗಿತ್ತು. ಈ ಸಂದರ್ಭದಲ್ಲಿ ನ್ಯಾಯಾಲಯದ 4 ನೇ ಮಹಡಿಯಿಂದ 2 ನೇ ಮಹಡಿಗೆ ಜಿಗಿದಿರುವ ಪ್ರವೀಣ್‌ ತೀವ್ರ ಗಾಯಗೊಂಡಿದ್ದರು, ನಂತರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com