ಮತದಾರರು ಗುರುತಿನ ಚೀಟಿ ಇಲ್ಲದಿದ್ದರೂ ಮತಪತ್ರದಲ್ಲಿ ತಮ್ಮ ಹೆಸರು ಇದ್ದರೆ 12 ದಾಖಲೆಗಳ ಪೈಕಿ ಒಂದನ್ನು ತೋರಿಸಿ ಮತದಾನ ಮಾಡಬಹುದು. ಪಾಸ್ಪೋರ್ಟ್, ಚಾಲನಾ ಪರವಾನಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಅರೆ ಸರ್ಕಾರ, ಸಾರ್ವಜನಿಕ ಸ್ವಾಮ್ಯದ ಕಂಪನಿಗಳು ನೀಡಿರುವ ಗುರುತಿನ ಚೀಟಿ, ಬ್ಯಾಂಕ್, ಅಂಚೆ ಕಚೇರಿಯ ಫೋಟೋ ಸಹಿತ ಪಾಸ್ ಪುಸ್ತಕ, ಪಾನ್ ಕಾರ್ಡ್, ಸ್ಮಾರ್ಟ್ಕಾರ್ಡ್, ನರೇಗಾ ಜಾಬ್ ಕಾರ್ಡ್, ಕಾರ್ವಿುಕರ ಸಚಿವಾಲಯ ಯೋಜನೆಯಡಿ ನೀಡಿರುವ ಆರೋಗ್ಯ ಕಾರ್ಡ್, ಫೋಟೋವುಳ್ಳ ಪಿಂಚಣಿ ದಾಖಲೆ, ಚುನಾವಣಾ ಆಯೋಗದಿಂದ ನೀಡಿರುವ ದೃಢೀಕೃತ ಫೋಟೋ ವೋಚರ್ ಸ್ಲಿಪ್ಸ್, ಸಂಸದರು, ವಿಧಾನಸಭೆ, ಪರಿಷತ್ತಿನ ಸದಸ್ಯರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ, ಅಧಾರ್ ಕಾರ್ಡ್ಗಳನ್ನು ಬಳಸಬಹುದು.