ಬೆಂಗಳೂರು: ಹಳ್ಳಕ್ಕೆ ಬಿದ್ದ ಟ್ರಕ್, ದೆಹಲಿ ಮೂಲದ ಇಂಜಿನಿಯರ್ ಸಾವು

ಬೆಂಗಳೂರಿನಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿಗಾಗಿ ತೊಡಲಾಗಿದ್ದ ಹಳ್ಳದಲ್ಲಿ ಟ್ರಕ್ ಉರುಳಿದ್ದ ಪರಿಣಾಮ ಇಂಜಿನಿಯರ್ ಒಬ್ಬ ಮೃತಪಟ್ಟ ಘಟನೆ ನಡೆದಿದೆ.
ಬೆಂಗಳೂರು: ಹಳ್ಳಕ್ಕೆ ಬಿದ್ದ ಟ್ರಕ್, ದೆಹಲಿ ಮೂಲದ ಇಂಜಿನಿಯರ್ ಸಾವು
ಬೆಂಗಳೂರು: ಹಳ್ಳಕ್ಕೆ ಬಿದ್ದ ಟ್ರಕ್, ದೆಹಲಿ ಮೂಲದ ಇಂಜಿನಿಯರ್ ಸಾವು
Updated on
ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ಮೆಟ್ರೋ ಕಾಮಗಾರಿಗಾಗಿ ತೊಡಲಾಗಿದ್ದ ಹಳ್ಳದಲ್ಲಿ ಟ್ರಕ್ ಉರುಳಿದ್ದ ಪರಿಣಾಮ ಇಂಜಿನಿಯರ್ ಒಬ್ಬ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಸೋನು ಸಿಂಗ್‌ (31) ಎಂದು ಗುರುತಿಸಲಾಗಿದೆ.
ದೆಹಲಿ ಮೂಲದ ಇಂಜಿನಿಯರ್ ಆಗಿದ್ದ ಸೋನು ಮೆಟ್ರೋ ಕಾಮಗಾರಿಗಾಗಿ ಬಳಸುವ ಜನರೇಟರ್ ನಿರ್ವಹಣೆಗಾಗಿ ಬೆಂಗಳೂರಿಗೆ ಆಗಮಿಸಿದ್ದರು.
ಟಿನ್ ಫ್ಯಾಕ್ಟರಿ ಬಳಿ ನಡೆಯುತ್ತಿದ್ದ ಕಾಮಗಾರಿಯ ವೇಳೆ ಹಳ್ಳದಲ್ಲಿದ್ದ ಕಂಟೇನರ್‌ನಲ್ಲಿ ಮಲಗಿದ್ದ ಇಂಜಿನಿಯರ್ ಮೇಲೆ ಹೊಸಕೋಟೆ ಕಡೆಯಿಂದ ಮರಳು ತುಂಬಿಸಿಕೊಂಡು ಬರುತ್ತಿದ್ದ ಟ್ರಕ್ ಬಿದ್ದಿದೆ. ನಿನ್ನೆ(ಶನಿವಾರ) ಬೆಳಗ್ಗೆ 4.30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು ಮೊದಲು ಬ್ಯಾರಿಕೇಡ್ ಗೆ ಗುದ್ದಿದ ಟ್ರಕ್ ನಂತರ ಹಳ್ಳದಲ್ಲಿದ್ದ ಕಂಟೇನರ್ ಮೇಲೆ ಉರುಳಿದೆ. ಕ್ರೇನ್ ಮೂಲಕ ಟ್ರಕ್ ನ್ನು ಮೇಲೆತ್ತಲಾಗಿ ಕಂಟೇನರ್ ಒಳಗೆ ಮಲಗಿದ್ದ ಇಂಜಿನಿಯರ್ ಮೃತಪಟ್ಟಿರುವುದು ತಿಳಿದಿದೆ.
ಚಾಲಕನ ನಿರ್ಲಕ್ಷ್ಯ: ಟ್ರಕ್ ಚಾಲಕನ ನಿರ್ಲಕ್ಷ್ಯವೇ ಈ ದುರ್ಘಟನೆಗೆ ಕಾರಣವಾಗಿದ್ದು ಚಾಲಕ ಸಹ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಕಂಟೇನರ್ ನಲ್ಲಿದ್ದ ಓರ್ವ ಕಾರ್ಮಿಕನನ್ನು ರಕ್ಷಿಸಲಾಗಿದೆ ಎಂದು ಕೆಆರ್ ಪುರಂ ಸಂಚಾರಿ ಪೋಲೀಸರು ಮಾಹಿತಿ ನೀಡೀದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com