1952ರ ಬಳಿಕ ಕರ್ನಾಟಕದಲ್ಲಿ ದಾಖಲೆ ಪ್ರಮಾಣದ ಗರಿಷ್ಠ ಮತದಾನ: ಚುನಾವಣಾ ಆಯೋಗ

ಹಾಲಿ ವಿಧಾನಸಭಾ ಚುನಾವಣೆ ಹಲವು ದಾಖಲೆಗಳನ್ನು ಬರೆದಿದ್ದು, 1952ರ ಬಳಿಕ ಕರ್ನಾಟಕದಲ್ಲಿ ಗರಿಷ್ಠ ಪ್ರಮಾಣದ ಮತದಾನವಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಬೆಂಗಳೂರು: ಹಾಲಿ ವಿಧಾನಸಭಾ ಚುನಾವಣೆ ಹಲವು ದಾಖಲೆಗಳನ್ನು ಬರೆದಿದ್ದು, 1952ರ ಬಳಿಕ ಕರ್ನಾಟಕದಲ್ಲಿ ಗರಿಷ್ಠ ಪ್ರಮಾಣದ ಮತದಾನವಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು, ವಿಧಾನಸಭಾ ಚುನಾವಣೆಯಲ್ಲಿ ಶೇ.72.13 ರಷ್ಟು ಮತದಾನ ನಡೆಯವ ಮೂಲಕ ಕರ್ನಾಟಕದಲ್ಲಿ ದಾಖಲೆ ನಿರ್ಮಾಣವಾಗಿದೆ ಎಂದು ಹೇಳಿದರು. 
ಕರ್ನಾಟಕದಲ್ಲಿ ನಡೆದ ಕಳೆದ 6 ವಿಧಾನಸಭೆ ಚುನಾವಣೆಗೆ ಹೋಲಿಕೆ ಮಾಡಿದರೆ, ಈ ಬಾರಿ ದಾಖಲೆ ಪ್ರಮಾಣದ ಗರಿಷ್ಟ ಮತದಾನವಾಗಿದೆ. ಈ ಹಿಂದೆ ಅತೀ ಹೆಚ್ಚಿನ ಪ್ರಮಾಣದ ಮತದಾನವೆಂದರೆ 2013ರಲ್ಲಿ ನಡೆದ ಚುನವಣೆ. ಅಂದು ರಾಜ್ಯದಲ್ಲಿ ಶೇ.71.45ರಷ್ಟು ಮತದಾನವಾಗಿತ್ತು ಎಂದು  ತಿಳಿದುಬಂದಿದೆ. ಅಂತೆಯೇ 2004 ಮತ್ತು 2008ರಲ್ಲಿ ಶೇ.65ರಷ್ಟು ಮತ್ತು 1989 ಮತ್ತು 1994ರಲ್ಲಿ ಶೇ.69ರಷ್ಟು ಮತದಾನವಾಗಿತ್ತು. 
ಈ ಬಾರಿ ಅವೆಲ್ಲವನ್ನೂ ಮೀರಿಸುವಷ್ಟು ಅಂದರೆ ಶೇ.72.13ರಷ್ಟು ಮತದಾನವಾಗಿದೆ. ಅಂತೆಯೇ ಈ ಬಾರಿ 2,65,731 ಪೋಸ್ಟಲ್ ಮತದಾನ ನಡೆದಿದೆ ಎಂದು ಆಯೋಗ ಮಾಹಿತಿ ನೀಡಿದೆ. 
ಇನ್ನು ಹಾಲಿ ಚುನಾವಣೆಯಲ್ಲಿ ರಾಜ್ಯದ ವತಿಯಿಂದ ನಟ ಪುನೀತ್ ರಾಜ್ ಕುಮಾರ್, ನಟಿ ಪ್ರಣೀತಾ ಅವರು ಚುನಾವಣಾ ಆಯೋಗದ ರಾಯಭಾರಿಯಾಗಿದ್ದರು. ಕೇಂದ್ರ ಆಯೋಗದಿಂದ ಸಿಎನ್ ಆರ್ ರಾವ್, ರಾಹುಲ್ ದ್ರಾವಿಡ್, ಸಾಹಿತಿ ಚಂದ್ರಶೇಖರ ಕಂಬಾರ ಮತ್ತಿತರನ್ನು ರಾಯಭಾರಿಗಳಾಗಿ ಬಳಸಿಕೊಳ್ಳಲಾಗಿತ್ತು. ಇದೇ ವೇಳೆ ಮತದಾನದಲ್ಲಿ ಕಾರ್ಯನಿರ್ವಹಣೆ ಮಾಡಿದ ಚುನಾವಣಾ ಸಿಬ್ಬಂದಿ ಮತ್ತು ಪೊಲೀಸರಿಗೆ ಸಂಜೀವ್ ಕುಮಾರ್ ಅಭಿನಂದನೆಯನ್ನು ಸಲ್ಲಿಸಿದರು.
222 ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ನಡೆದಿದೆ. ಎರಡು ಕ್ಷೇತ್ರದಲ್ಲಿ ಮತದಾನ ನಡೆದಿಲ್ಲ. ಜಯನಗರ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಮುಂದೂಡಲಾಗಿದೆ. ಜಯನಗರ ಕ್ಷೇತ್ರದ ಮತದಾನದ ದಿನಾಂಕವನ್ನು ತಕ್ಷಣವೇ ತಿಳಿಸಲಾಗುವುದು ಎಂದು ಹೇಳಿದರು. 57,416 ಮತದಾನ ಕೇಂದ್ರಗಳಲ್ಲಿ ಮತದಾನ ನಡೆದಿದೆ. 57,786 ವಿವಿ ಪ್ಯಾಟ್ ಗಳನ್ನು ಬಳಸಲಾಗಿದೆ. 698 ವಿವಿ ಪ್ಯಾಟ್ ಗಳನ್ನು ವಾಪಸ್ಸು ಪಡೆಯಲಾಗಿದೆ. 186 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com