ಮಧ್ಯರಾತ್ರಿ 12 ಗಂಟೆಯವರೆಗೂ ಮೆಟ್ರೋ ರೈಲು ಸೇವೆ , ಭಾನುವಾರ ವೇಳಾಪಟ್ಟಿ ಪರಿಷ್ಕರಣೆ ಸಾಧ್ಯತೆ

ಕೆಂಪೇಗೌಡ ಮೇಟ್ರೋ ನಿಲ್ದಾಣದಿಂದ 11-30 ಕ್ಕೆ ನಿರ್ಗಮಿಸುವ ಕೊನೆಯ ರೈಲಿನ ವೇಳಾಪಟ್ಟಿ ಅರ್ಧ ಗಂಟೆ ವಿಸ್ತರಣೆಯಾಗುವ ಸಾಧ್ಯತೆ ಇದೆ. ತಡರಾತ್ರಿಯೂ ಪ್ರಯಾಣಿಕರಿಗೆ ನೆರವಾಗುವ ನಿಟ್ಟಿನಲ್ಲಿ ಬಿಎಂಆರ್ ಸಿಎಲ್ ಚಿಂತನೆ ನಡೆಸಿದೆ.
ಮೆಟ್ರೋ ರೈಲು
ಮೆಟ್ರೋ ರೈಲು
Updated on: 

ಬೆಂಗಳೂರು:  ಕೆಂಪೇಗೌಡ  ಮೇಟ್ರೋ ನಿಲ್ದಾಣದಿಂದ 11-30 ಕ್ಕೆ ನಿರ್ಗಮಿಸುವ ಕೊನೆಯ ರೈಲಿನ ವೇಳಾಪಟ್ಟಿ  ಅರ್ಧ ಗಂಟೆ ವಿಸ್ತರಣೆಯಾಗುವ ಸಾಧ್ಯತೆ ಇದೆ. ತಡರಾತ್ರಿಯೂ ಪ್ರಯಾಣಿಕರಿಗೆ ನೆರವಾಗುವ ನಿಟ್ಟಿನಲ್ಲಿ ಬಿಎಂಆರ್ ಸಿಎಲ್ ಚಿಂತನೆ ನಡೆಸಿದೆ.

ಪ್ರಸ್ತುತ ರಜಾದಿನವಾದ  ಭಾನುವಾರ ಬೆಳಗ್ಗೆ 8 ಗಂಟೆಯಿಂದ ರೈಲು ಸಂಚಾರ ಆರಂಭವಾಗುತ್ತಿದ್ದು, ಇದರ ವೇಳಾಪಟ್ಟಿಯೂ ಬದಲಾವಣೆ ಆಗುವ ಸಾಧ್ಯತೆ ಇದೆ.

ವಿಧಾನಸೌಧದ ಮೆಟ್ರೋ ನಿಲ್ದಾಣದ ಬಳಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್, ಕೊನೆಯ ರೈಲಿನ ವೇಳಾಪಟ್ಟಿ ಬದಲಾಗುವ ಸಾಧ್ಯತೆ ಇದೆ ಎಂದು ಹೇಳಿದರು.

ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಸಾಮರ್ಥ್ಯ ಗಳನ್ನು ವೃದ್ದಿಗೊಳಿಸಿಕೊಳ್ಳಲಾಗುತ್ತಿದೆ. 11-30ರಂದು ನಿರ್ಗಮಿಸುವ ಕೊನೆಯ ರೈಲಿನ ವೇಳಾಪಟ್ಟಿಯನ್ನೂ ಮಧ್ಯರಾತ್ರಿಯವರೆಗೂ ವಿಸ್ತರಣೆ ಮಾಡಬಹುದಾಗಿದೆ.
ಇದೇ ರೀತಿಯಲ್ಲಿ ಭಾನುವಾರ ಬೆಳಗ್ಗೆಯೇ ಬರುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 8 ಗಂಟೆಗೂ ಮುಂಚಿತವಾಗಿ ರೈಲು ಸಂಚಾರ ಆರಂಭಿಸುವ ಬಗ್ಗೆ ವಿಶ್ಲೇಷಣೆ ಮಾಡುತ್ತಿರುವುದಾಗಿ ಸೇಠ್ ತಿಳಿಸಿದರು.
ಡಿಸೆಂಬರ್ ತಿಂಗಳಲ್ಲಿ ಬಿಇಎಂಎಲ್  ನಾಲ್ಕನೇ ರೈಲಿಗೆ ಆರು ಬೋಗಿಗಳನ್ನು ಪೂರೈಕೆ ಮಾಡಲಿದ್ದು, ಮುಂದಿನ ಆರು ಬೋಗಿಯ ರೈಲು ನೇರಳೆ ಮಾರ್ಗದಲ್ಲಿಯೇ ಸಂಚರಿಸಲಿದೆ. ಮುಂದಿನ ವರ್ಷದ ಆಗಸ್ಟ್ ಅಥವಾ ಸೆಪ್ಟೆಂಬರ್  ಒಳಗೆ ಎಲ್ಲಾ 50 ರೈಲುಗಳಿಗೂ ಆರು ಬೋಗಿಗಳನ್ನು ಅಳವಡಿಸಲಾಗುವುದು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com