ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಮಹಾದೇವ್ ಪಾಟೀಲ್ ನಿಧನ

ಜಾರಕಿಹೊಳಿ ಸಹೋದರರು ಮತ್ತು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ತೀವ್ರ ಹಗ್ಗ ಜಗ್ಗಾಟದ ನಡುವೆಯೇ...
ಮಹಾದೇವ್ ಪಾಟೀಲ್
ಮಹಾದೇವ್ ಪಾಟೀಲ್
ಬೆಳಗಾವಿ: ಜಾರಕಿಹೊಳಿ ಸಹೋದರರು ಮತ್ತು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ತೀವ್ರ ಹಗ್ಗ ಜಗ್ಗಾಟದ ನಡುವೆಯೇ ಇತ್ತೀಚಿಗೆ ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಮಹಾದೇವ್ ಪಾಟೀಲ್ ಅವರು ಸೋಮವಾರ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
82 ವರ್ಷದ ಮಹಾದೇವ್ ಪಾಟೀಲ್ ಅವರು ಇಂದು ಬೆಳವಾಗಿಯ ಫುಲಬಾಗ್ ಗಲ್ಲಿಯಲ್ಲಿರುವ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ.
ಕಳೆದ ಸೆಪ್ಟೆಂಬರ್ 7ರಂದು ನಡೆದ ಪಿಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಬಣದ ಅಧ್ಯಕ್ಷರಾಗಿ ಮಹಾದೇವ್ ಪಾಟೀಲ್ ಹಾಗೂ ಉಪಾಧ್ಯಕ್ಷರಾಗಿ ಬಾಬು ಸಾಹೇಬ್ ಜಮಾದಾರ್ ಆಯ್ಕೆಯಾಗಿದ್ದರು.
ಪ್ರತಿಷ್ಠೆಯ ಕಣವಾಗಿದ್ದ ಪಿಎಲ್​ಡಿ ಬ್ಯಾಂಕ್​ಗೆ ಹಿಂದಿನಿಂದಲೂ ಜಾರಕಿಹೊಳಿ ಬಣದವರೇ ಅವಿರೋಧವಾಗಿ ಆಯ್ಕೆಯಾಗುತ್ತಿದ್ದರು. ಆದರೆ ಈ ಬಾರಿ ಲಕ್ಷ್ಮೀ ಹೆಬ್ಬಾಳ್ಕರ್​ ಬಣದವರು ಅವಿರೋಧ ಆಯ್ಕೆಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com