ಬಿಎಂಟಿಸಿ ಬಸ್ ಪಾಸ್ ಗಾಗಿ ವಿದ್ಯಾರ್ಥಿಗಳ ಪರದಾಟ, ಅವಧಿ ವಿಸ್ತರಣೆ

ಮೆಜೆಸ್ಟಿಕ್ ನಲ್ಲಿ ಶನಿವಾರ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯ ಬಸ್ ​ಪಾಸ್ ​ಗಾಗಿ ವಿದ್ಯಾರ್ಥಿಗಳು...
ವಿದ್ಯಾರ್ಥಿಗಳು
ವಿದ್ಯಾರ್ಥಿಗಳು
Updated on: 
ಬೆಂಗಳೂರು: ಮೆಜೆಸ್ಟಿಕ್ ನಲ್ಲಿ ಶನಿವಾರ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯ ಬಸ್ ​ಪಾಸ್ ​ಗಾಗಿ ವಿದ್ಯಾರ್ಥಿಗಳು ತೀವ್ರ ಪರದಾಡುತ್ತಿದ್ದು, ಎಚ್ಚೆತ್ತುಕೊಂಡ ಬಿಎಂಟಿಸಿ ವಿದ್ಯಾರ್ಥಿಗಳಿಗೆ ಪಾಸ್​ ವಿತರಿಸುವ ಅವಧಿಯನ್ನು ಒಂದು ತಿಂಗಳ ಕಾಲ ವಿಸ್ತರಣೆ ಮಾಡಿದೆ.
ಬಸ್ ಪಾಸ್ ಪಡೆಯಲು ನಾಳೆ ಕೊನೆಯ ದಿನವಾಗಿದ್ದರಿಂದ ಇಂದು ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬೆಳಗ್ಗೆಯಿಂದಲೇ ಮೆಜೆಸ್ಟಿಕ್ ನಲ್ಲಿ ಜಮಾಯಿಸಿದ್ದು, ಪಾಸ್ ಪಡೆಯಲು ಪರದಾಡುತ್ತಿದ್ದರು.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಸಂಚಾರ ವ್ಯವಸ್ಥಾಪಕ‌ ವಿಶ್ವನಾಥ್ ಅವರು, ಗೊಂದಲ ಏನಿಲ್ಲ, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ ಅಷ್ಟೇ. ಜಾಗ ಇರುವಷ್ಟು ಕೌಂಟರ್ ತೆರೆಯಲಾಗಿದೆ. ಶಾಂತಿನಗರದಲ್ಲೂ ಹೆಚ್ಚಿನ‌ ಕೌಂಟರ್ ತೆರೆಯಲಾಗುತ್ತಿದೆ. ನಿನ್ನೆ 4500 ಪಾಸ್ ವಿತರಿಸಲಾಗಿದೆ. ಇವತ್ತು 4000 ಪಾಸ್ ವಿತರಿಸಲಾಗುವುದು. ಇಲ್ಲಿರುವ ವಿದ್ಯಾರ್ಥಿಗಳಿಗೆ ಸಂಜೆಯೊಳಗೆ ಪಾಸ್ ವಿತರಿಸಲಾಗುವುದು ಎಂದರು.
ಪಾಸ್ ಪಡೆಯಲು ಸೆಪ್ಟೆಂಬರ್ 30 ಕಡೆಯ ದಿನಾಂಕ ಎಂದು ಹೇಳಲಾಗಿತ್ತು. ಆದರೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿರುವುದರಿಂದ ಇನ್ನೂ ಒಂದು ತಿಂಗಳುಗಳ ಕಾಲ ಪಾಸ್ ವಿತರಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಸುಮಾರು ಐದು ಸಾವಿರ ವಿದ್ಯಾರ್ಥಿಗಳಿಗೆ ಕೇವಲ ಎಂಟು ಕೌಂಟರ್​ನಿಂದ ಪಾಸ್ ನೀಡಲಾಗುತ್ತಿತ್ತು. ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಪೋಷಕರು ಬೆಳಿಗ್ಗೆ ಐದು ಗಂಟೆಯಿಂದ ಸಾಲಿನಲ್ಲಿ ನಿಂತಿದ್ದರು. ವಿದ್ಯಾರ್ಥಿಗಳು ಕಳೆದ ಮೂರು ತಿಂಗಳಿನಿಂದ ಪಾಸ್​ಗಾಗಿ ಪರದಾಟ ನಡೆಸಿದ್ದರು. ಆದರೆ ಬಿಎಂಟಿಸಿ ಇಲ್ಲಿಯವರೆಗೆ ಪಾಸ್ ನೀಡಲು ಮುಂದಾಗಿರಲಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com