ಬೆಳಗಾವಿ: ಹುತಾತ್ಮ ಯೋಧ ರಾಹುಲ್ ಪಂಚಭೂತಗಳಲ್ಲಿ ಲೀನ

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಬಳಿ ಪಾಕಿಸ್ತಾನ ಯೋಧರು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ವೀರಮರಣ ಹೊಂದಿದ ವೀರಯೋಧ ರಾಹುಲ್ ಸುಳಗೇಕರ (21) ಅವರ ಅಂತ್ಯಕ್ರಿಯ ಅವರ ಹುಟ್ಟೂರಾದ ಬೆಳಗಾವಿ ತಾಲೂಕಿನ ಉಚಗಾಂವದ ರುದ್ರಭೂಮಿಯಲ್ಲಿ ಶನಿವಾರ ಸರ್ಕಾರಿ ಗೌರವಗಳೊಂದಿಗೆ ನಡೆಯಿತು. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬೆಳಗಾವಿ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಬಳಿ ಪಾಕಿಸ್ತಾನ ಯೋಧರು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ವೀರಮರಣ ಹೊಂದಿದ ವೀರಯೋಧ ರಾಹುಲ್ ಸುಳಗೇಕರ (21) ಅವರ ಅಂತ್ಯಕ್ರಿಯ ಅವರ ಹುಟ್ಟೂರಾದ ಬೆಳಗಾವಿ ತಾಲೂಕಿನ ಉಚಗಾಂವದ ರುದ್ರಭೂಮಿಯಲ್ಲಿ ಶನಿವಾರ ಸರ್ಕಾರಿ ಗೌರವಗಳೊಂದಿಗೆ ನಡೆಯಿತು. 

ವಿಶೇಷ ವಿಮಾನದ ಮೂಲಕ ಶನಿವಾರ ಮಧ್ಯಾಹ್ನ 1 ಗಂಟೆಗೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಯೋಧನ ಪಾರ್ಥೀವ ಶರೀರಕ್ಕೆ ಗಣ್ಯಾತಿಗಣ್ಯರು ಪುಷ್ಪಗುಚ್ಛವಿರಿಸಿ ಅಂತಿಮ ನಮನ ಸಲ್ಲಿಸಿದರು. ಬಳಿಕ ಎಂಎಲ್ಐಆರ್'ಸಿಯ ವಾಹನದಲ್ಲಿ ಹುತಾತ್ಮ ಯೋಧನ ಪಾರ್ಥಿವ ಶರೀರವನ್ನು ಮರಾಠ ಲಘುಪದಾತಿದಳ ಕೇಂದ್ರಕ್ಕೆ ತೆಗೆದುಕೊಂಡು ಹೋಗಲಾಯಿತು. 

ಅಲ್ಲಿ ಎಂಎಲ್ಐಆರ್'ಸಿ ವತಿಯಿಂದ ಹುತಾತ್ಮ ಯೋಧನಿಗೆ ಗೌರವ ಸಲ್ಲಿಸಿ, ಸ್ವಗ್ರಾಮ ಉಪಗಾಂವಗ ಪಾರ್ಥಿವ ಶರೀರ ತೆಗೆದುಕೊಂಡು ಬರಲಾಯಿತು. ಹುತಾತ್ಮ ಯೋಧನ ಪಾರ್ಥಿವ ಶರೀರ ಹೊತ್ತೊಯ್ಯುತ್ತಿದ್ದ ವಾಹನದ ಮಾರ್ಗದಲ್ಲಿ ಗ್ರಾಮದ ಮಹಿಳೆಯರು ರಂಗೋಲಿ ಹಾಕಿ ಸ್ವಾಗತಿಸುವ ಮೂಲಕ ಗೌರವ ಸಲ್ಲಿಸಿದರು.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com