ಕಾಶ್ಮೀರ ಉಗ್ರರ ದಾಳಿ: ಹುಬ್ಬಳ್ಳಿ ಯೋಧ ಹುತಾತ್ಮ

ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಉಗ್ರರ ಜೊತೆಗೆ ನಡೆದ ಗುಂಡಿನ ಕಾಳಗದಲ್ಲಿ ಹುಬ್ಬಳ್ಳಿ ಮೂಲದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಹುಬ್ಬಳ್ಳಿ: ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಉಗ್ರರ ಜೊತೆಗೆ ನಡೆದ ಗುಂಡಿನ ಕಾಳಗದಲ್ಲಿ ಹುಬ್ಬಳ್ಳಿ ಮೂಲದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. 

ಹುಬ್ಬಳ್ಳಿಯ ವೀರಾಪುರ ಗ್ರಾಮದ ಮಂಜುನಾಥ್ ಹನುಮಂತಪ್ಪ ಓಲೇಕಾರ್ (29) ಹುತಾತ್ಮರಾದ ಯೋಧರಾಗಿದ್ದಾರೆ. 

ಕಳೆದ 9 ವರ್ಷಗಳಿಂದ 19ನೇ ಮದ್ರಾಸ್ ರೆಜಿಮೆಂಟ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಮಂಜುನಾಥ್ ಅವರಿಗೆ ಕಳೆದ ಆರು ತಿಂಗಳ ಹಿಂದಷ್ಟೇ ವಿವಾಹವಾಗಿತ್ತು. 

ಯೋಧನ ಕುಟುಂಬ ಸದಸ್ಯರಿಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ತಹಶೀಲ್ದಾರ್ ಸಂಗಪ್ಪ ಅವರು ಹೇಳಿದ್ದಾರೆ, ಯೋಧನ ಪಾರ್ಥೀವ ಶರೀರ ಮಂಗಳವಾರ ರಾತ್ರಿ ಅಥವಾ ಬುಧವಾರ ತಲುಪಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಗಡಿಯಲ್ಲಿ ದೇಶ ಕಾಯಲು ಮಂಜುನಾಥ್ ಅವರನ್ನು ನಿಯೋಜಿಸಲಾಗಿತ್ತು. ಇದು ಚಿಂತೆಗೀಡು ಮಾಡಿತ್ತು. ಇಂತಹ ಸುದ್ದಿ ಬರುತ್ತದೆ ಎಂದು ಎಂದಿಗೂ ಊಹಿಸಿರಲಿಲ್ಲ. ಪಾರ್ಥೀವ ಶರೀರವನ್ನು ಗ್ರಾಮಕ್ಕೆ ಕರೆತರಲು ಆಡಳಿತ ಮಂಡಳಿ ಸಹಾಯ ಮಾಡುವುದಾಗಿ ತಿಳಿಸಿದೆ ಎಂದು ಮಂಜುನಾಥ್ ಅವರ ಸಂಬಂಧಿಕರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com