ಚೀನಾದಿಂದ ಬಂದ ವಸ್ತುವಿನಲ್ಲಿ ವೈರಸ್ ಇರಲಿಲ್ಲ: ಜ್ಯುಬಿಲಿಯಂಟ್ ಜನರಿಕ್ ಲಿಮಿಟೆಡ್ ಸ್ಪಷ್ಟನೆ

ಚೀನಾದಿಂದ ಆಮದು ಮಾಡಿಕೊಂಡಿದ್ದ ಕಚ್ಚಾ ವಸ್ತುವಿನ ಮಾದರಿಯಲ್ಲಿ ಕೊರೋರಾವೈರಸ್ ಕುರುಹುಗಳು ಕಂಡು ಬಂದಿಲ್ಲ ಎಂದು ನಂಜನಗೂಡಿನ ಜ್ಯುಬಿಲಿಯಂಟ್ ಜನರಿಕ್ಸ್ ಲಿಮಿಟೆಡ್ ಸ್ಪಷ್ಟನೆ ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಚೀನಾದಿಂದ ಆಮದು ಮಾಡಿಕೊಂಡಿದ್ದ ಕಚ್ಚಾ ವಸ್ತುವಿನ ಮಾದರಿಯಲ್ಲಿ ಕೊರೋರಾವೈರಸ್ ಕುರುಹುಗಳು ಕಂಡು ಬಂದಿಲ್ಲ ಎಂದು ನಂಜನಗೂಡಿನ ಜ್ಯುಬಿಲಿಯಂಟ್ ಜನರಿಕ್ಸ್ ಲಿಮಿಟೆಡ್ ಸ್ಪಷ್ಟನೆ ನೀಡಿದೆ. 

ಈ ಸಂಬಂಧ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ ನೆಗೆಟಿವ್ ಎಂದು ವರದಿ ನೀಡಿದೆ ಎಂದು ತಿಳಿಸಿದೆ. 

ಚೀನಾದಿಂದ ಆಮದು ಮಾಡಿಕೊಳ್ಳಲಾಗಿದ್ದ ಕಚ್ಚಾ ವಸ್ತು ಕುರಿತು ತಪ್ಪು ಕಲ್ಪನೆ ಉಂಟಾಗಿದ್ದು, ದುರಾದೃಷ್ಟಕರ. ನಂಜನಗೂಡು ಘಟಕದಿಂದ ಮೊದಲ ಪಾಸಿಟಿವ್ ಪ್ರಕರಣವೆಸಿನಿಸಿದ ಪಿ-52 ಕಚ್ಚಾ ಮಾದರಿಗಳ ಸಂಪರ್ಕಕ್ಕೆ ಎಂದೂ ಬಂದಿರಲಿಲ್ಲ. ಅವುಗಳನ್ನು ರವಾನೆ ಮಾಡುವುದರಲ್ಲಿ ನಿರ್ವಹಣೆಯಲ್ಲಿ ಅಥವಾ ಸಂಗ್ರಹ ಮಾಡುವುದರಲ್ಲಿ ಆತನ ಪಾತ್ರವೇನೂ  ಇರಲಿಲ್ಲ ಎಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com