ಬೆಂಗಳೂರು: ಎಂಜಿ.ರಸ್ತೆಯಲ್ಲಿ ವಿದೇಶಿ ಪ್ರವಾಸಿಗನ ಮೊಬೈಲ್ ಕಸಿದ ಕಳ್ಳರು, ದೂರು ದಾಖಲು

ನಗರದ ಎಂಜಿ ರಸ್ತೆಯಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ದರೋಡೆಕೋರರು ಆಸ್ಟ್ರೇಲಿಯಾದ ಪ್ರವಾಸಿಗರೊಬ್ಬರ ಮೊಬೈಲ್ ದೋಚಿ ಪರಾರಿಯಾಗಿರುವ ಘಟನೆ ಸೋಮವಾರ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರದ ಎಂಜಿ ರಸ್ತೆಯಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ದರೋಡೆಕೋರರು ಆಸ್ಟ್ರೇಲಿಯಾದ ಪ್ರವಾಸಿಗರೊಬ್ಬರ ಮೊಬೈಲ್ ದೋಚಿ ಪರಾರಿಯಾಗಿರುವ ಘಟನೆ ಸೋಮವಾರ ನಡೆದಿದೆ.

ಆಸ್ಟ್ರೇಲಿಯಾದ ಮಿಚೆಲ್ ಆರ್ಥರ್ ತಮ್ಮ ಜರ್ಮನ್ ಸ್ನೇಹಿತನೊಂದಿಗೆ ಹಂಪಿಗೆ ಭೇಟಿ ನೀಡುವ ಸಲುವಾಗಿ ರಾಜ್ಯಕ್ಕೆ ಭೇಟಿ ನೀಡಿದ್ದರು. ವಿಮಾನ ಬೆಂಗಳೂರಿಗೆ ಬಂದಿಳಿದಿದ್ದ ಕಾರಣ, ಬೆಂಗಳೂರಿನಲ್ಲಿಯೇ ತಂಗಿದ್ದರು.

ಸೋಮವಾರ ಸಂಜೆ 4.40-4.45ರ ಸುಮಾರಿಗೆ ಎಂಜಿ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಮಿಚೆಲ್ ಆರ್ಥರ್ ನಡೆದು ಹೋಗುತ್ತಿದ್ದರು. ಈ ವೇಳೆ ಇತರೆ ದಾರಿಹೋಕರ ಬಳಿಕ ಮಾರ್ಗದ ಕುರಿತು ವಿಚಾರಿಸುತ್ತಿದ್ದಾಗ ಬೈಕ್ ನಲ್ಲಿ ಬಂದಿರುವ ಇಬ್ಬರು ದುಷ್ಕರ್ಮಿಗಳು ಮಿಚೆಲ್ ಅವರ ಮೊಬೈಲ್ ಕಸಿದು ಪರಾರಿಯಾಗಿದ್ದಾರೆ. ಈ ಸಂಬಂಧ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಳ್ಳರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com