ಬಿಎಂಟಿಸಿ ಬಸ್'ನಲ್ಲಿ ಕಿಟಕಿ ತೆರೆಯುವ ವಿಚಾರಕ್ಕೆ ಜಗಳ: ಚಪ್ಪಲಿಯಲ್ಲಿ ಹೊಡೆದಾಡಿಕೊಂಡ ಮಹಿಳೆಯರು

ಬಿಎಂಟಿಸಿ ಬಸ್'ನಲ್ಲಿ ಕಿಟಕಿ ತೆರೆಯುವ ವಿಚಾರಕ್ಕೆ ಇಬ್ಬರು ಮಹಿಳಾ ಪ್ರಯಾಣಿಕರ ನಡುವೆ ಜಗಳ ನಡೆದಿದ್ದು, ಒಬ್ಬರಿಗೊಬ್ಬರು ಚಪ್ಪಲಿಯಲ್ಲಿ ಹೊಡೆದಾಡಿಕೊಂಡಿರುವ ಘಟನೆ ಬುಧವಾರ ನಡೆದಿದೆ.
ಶೂಗಳಲ್ಲಿ ಕಿತ್ತಾಡುತ್ತಿರುವ ಮಹಿಳೆಯರು.
ಶೂಗಳಲ್ಲಿ ಕಿತ್ತಾಡುತ್ತಿರುವ ಮಹಿಳೆಯರು.

ಬೆಂಗಳೂರು: ಬಿಎಂಟಿಸಿ ಬಸ್'ನಲ್ಲಿ ಕಿಟಕಿ ತೆರೆಯುವ ವಿಚಾರಕ್ಕೆ ಇಬ್ಬರು ಮಹಿಳಾ ಪ್ರಯಾಣಿಕರ ನಡುವೆ ಜಗಳ ನಡೆದಿದ್ದು, ಒಬ್ಬರಿಗೊಬ್ಬರು ಚಪ್ಪಲಿಯಲ್ಲಿ ಹೊಡೆದಾಡಿಕೊಂಡಿರುವ ಘಟನೆ ಬುಧವಾರ ನಡೆದಿದೆ.

ಮೆಜೆಸ್ಟಿಕ್‍ನಿಂದ ಪೀಣ್ಯಕ್ಕೆ ಹೊರಟಿದ್ದ ಕೆಎ 57 ಎಫ್ 4255 ನಂಬರ್‌ನ ಬಿಎಂಟಿಸಿ ಬಸ್‍ನಲ್ಲಿ ಈ ಘಟನೆ ನಡೆದಿದೆ.

ಮುಂದಿನ ಸೀಟ್‍ನಲ್ಲಿ ಕುಳಿತಿದ್ದ ಮಹಿಳೆ ಹಾಗೂ ಹಿಂದಿನ ಸೀಟ್‍ನಲ್ಲಿ ಕುಳಿತ ಮಹಿಳೆಯ ನಡುವೆ ಬಸ್‍ನ ಕಿಟಕಿ ವಿಚಾರಕ್ಕೆ ಗಲಾಟೆ ನಡೆದಿದೆ. ಜಗಳ ತಾರಕಕ್ಕೇರಿ ಮುಂದೆ ಕುಳಿತಿದ್ದ ಮಹಿಳೆಯು ಏಕಾಏಕಿಯಾಗಿ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾಳೆ. ಬಳಿಕ ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಈ ವೇಳೆ ಬಸ್‍ನಲ್ಲಿದ್ದ ಜನ ಮುಂದಿನ ಸೀಟ್‍ನಲ್ಲಿದ್ದ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಗಲಾಟೆಯ ವೀಡಿಯೋ ಬಸ್‍ನಲ್ಲಿದ್ದ ಸಹ ಪ್ರಯಾಣಿಕರ ಮೊಬೈಲ್‍ನಲ್ಲಿ ಸೆರೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com