ಬೆಂಗಳೂರು: ಪತ್ನಿಯೊಂದಿಗೆ ಜಗಳವಾಡಿದ ಪತಿಯೊಬ್ಬ ಮೇಲ್ಸೇತುವೆಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ರಕ್ಷಣೆ ಮಾಡಿರುವ ಘಟನೆ ನಗರದ ರಿಚ್ಮಂಡ್ ಜಂಕ್ಷನ್'ನ ಮೇಲ್ಸೇತುವೆಯಲ್ಲಿ ಬುಧವಾರ ನಡೆದಿದೆ.
ಮೇಲ್ಸೇತುವೆಯಲ್ಲಿ ಸಾಗುತ್ತಿದ್ದ ದಂಪತಿಗಳ ನಡುವೆ ಜಗಳವಾಗಿದ್ದು, ಈ ವೇಳೆ ಬೇಸತ್ತ ವ್ಯಕ್ತಿ ಮೇಲ್ಸೇತುವೆಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮೊದಲಿಗೆ ಫೋನ್ ಕೆಳಗೆ ಎಸೆದಿರುವ ವ್ಯಕ್ತಿ ನಂತರ ತಾನೂ ಜಿಗಿಯಲು ಯತ್ನಿಸಿದ್ದಾನೆ.
ಇದನ್ನು ಗಮನಿಸಿದ ಸ್ಥಳದಲ್ಲಿದ್ದ ಕರ್ತವ್ಯದಲ್ಲಿದ್ದ ಅಶೋಕ್ ನಗರ ಸಂಚಾರ ಠಾಣೆ ಪಿಎಸ್ಐ ಹರೀಶ್ ಕುಮಾರ್, ಹೆಡ್ ಕಾನ್ಸ್ ಟೇಬರ್ ಲೋಕೇಶ್ ಅವರು, ಹೊಯ್ಸಳ ವಾಹನದ ಸೈರನ್ ಹಾಕಿಕೊಂಡು ಏಕಮುಖ ರಸ್ತೆಯಲ್ಲೇ ಮೇಲ್ಸೇತುವೆಗೆ ಬಂದು ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ.
ಬಳಿಕ ದಂಪತಿಯನ್ನು ಅಶೋಕನಗರ ಕಾನೂನು ಸುವ್ಯವಸ್ಥೆ ಠಾಣೆಗೆ ಕರೆದೊಯ್ದು ಕೌನ್ಸೆಲಿಂಗ್ ಮಾಡಿದ್ದಾರೆಂದು ತಿಳಿದುಬಂದಿದೆ.
Advertisement