ಬೆಂಗಳೂರು: ಯುವತಿ ಜತೆ ಯುವಕರಿಬ್ಬರ ತ್ರಿಬಲ್ ರೈಡಿಂಗ್, ಕಿಸ್ಸಿಂಗ್! Video Viral

ಬೆಂಗಳೂರಿನಲ್ಲಿ ಮತ್ತೆ ಯುವಕ-ಯುವತಿಯರ ತಂಡವೊಂದು ಹುಚ್ಚಾಟವಾಡಿದ್ದು, ರಸ್ತೆಯಲ್ಲಿ ತಮ್ಮ ಕೃತ್ಯದಿಂದ ಇತರೆ ವಾಹನಸವಾರರು ಪರದಾಡುವಂತೆ ಮಾಡಿದ್ದಾರೆ.
Two young men triple riding and kissing with a young woman
ಬೈಕ್ ನಲ್ಲೇ ಯುವಕ-ಯುವತಿ ಚುಂಬನ
Updated on

ಬೆಂಗಳೂರು: ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿ ಯುವಕ-ಯುವತಿಯರ ಹುಚ್ಚಾಟ ಮುಂದುವರೆದಿದ್ದು, ರಾತ್ರಿ ವೇಳೆ ನಡು ರಸ್ತೆಯಲ್ಲಿ ಇಬ್ಬರು ಯವಕರು ಮತ್ತು ಓರ್ವ ಯುವತಿ ಬೈಕ್ ನಲ್ಲಿ ತ್ರಿಬಲ್ ರೈಡಿಂಗ್ ಮಾಡುತ್ತಾ ಪರಸ್ಪರ ಚುಂಬಿಸಿಕೊಳ್ಳುತ್ತಿರುವ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಹೌದು.. ಬೆಂಗಳೂರಿನಲ್ಲಿ ಮತ್ತೆ ಯುವಕ-ಯುವತಿಯರ ತಂಡವೊಂದು ಹುಚ್ಚಾಟವಾಡಿದ್ದು, ರಸ್ತೆಯಲ್ಲಿ ತಮ್ಮ ಕೃತ್ಯದಿಂದ ಇತರೆ ವಾಹನಸವಾರರು ಪರದಾಡುವಂತೆ ಮಾಡಿದ್ದಾರೆ. ಒಂದೇ ಬೈಕನಲ್ಲಿ ಬಂದ ಇಬ್ಬರು ಯುವಕರು ಮತ್ತು ಓರ್ವ ಯುವತಿ ಹೆಲ್ಮೆಟ್​ ಹಾಕದೆ ತ್ರಿಬಿಲ್​ ರೈಡಿಂಗ್​ ಹೋಗಿದ್ದಾರೆ. ಮಾತ್ರವಲ್ಲದೇ ಬೈಕ್​ನಲ್ಲಿ ಹೋಗುತ್ತಲೇ ಯುವತಿ ಯುವಕನಿಗೆ ತುಟಿಗೆ ತುಟಿ ಇಟ್ಟು ಮುತ್ತು ಕೊಟ್ಟಿದ್ದಾಳೆ.

ಈ ವೇಳೆ ಹಿಂಬಂದಿಯಿಂದ ಬಂದ ಸವಾರರು ಅವರನ್ನು ಪ್ರಶ್ನಿಸಿದಾಗ ಅವಾಚ್ಯ ಪದಗಳಿಂದ ನಿಂದಿಸಿದ್ದು ಮಾತ್ರವಲ್ಲದೇ ಪ್ರಶ್ನಿಸಿದ ಇತರೆ ಬೈಕ್ ಸವಾರರಿಗೂ ಧಮ್ಕಿ ಹಾಕಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

Two young men triple riding and kissing with a young woman
ಕೊಪ್ಪಳ: ಇಸ್ರೇಲ್‌ ಮಹಿಳೆ ಸೇರಿ ಇಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ; ಆರೋಪಿಗಳ ಬಂಧನಕ್ಕೆ 6 ತಂಡ ರಚನೆ

ಎಲ್ಲಿ ನಡೆದಿದ್ದು ಘಟನೆ?

ಜೆಪಿ ನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಮಾರ್ಚ್ 7 ರಂದು ರಾತ್ರಿ ರಾಗಿಗುಡ್ಡ ರಸ್ತೆಯಲ್ಲಿ ಘಟನೆ ನಡೆದಿದೆ. ಓರ್ವ ಯುವಕ ಬೈಕ್ ಚಾಲನೆ ಮಾಡುತ್ತಿದ್ದನು. ಸವಾರನ ಹಿಂದೆ ಕುಳಿತಿದ್ದ ಯುವಕನಿಗೆ ಯುವತಿ ಮುತ್ತುಕೊಟ್ಟಿದ್ದಾಳೆ. ಯುವಕ‌ ಯುವತಿಯರ ಹುಚ್ಚಾಟವನ್ನು ಬೈಕ್ ಸವಾರ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾನೆ. ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾನೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com