ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ 'ಕುಮಾರಿ ಸಮೃದ್ಧಿ' ಯೋಜನೆ: ಪ್ರತಿ ಮಗುವಿಗೆ 5,000 ರೂ. ಠೇವಣಿ; ಮಾದರಿಯಾಗಿ ನಿಂತ 'ಹೂಲಿ' ಗ್ರಾಮ!

ಹೂಲಿ ಗ್ರಾಮದಲ್ಲಿ ಜನಿಸುವ ಪ್ರತಿ ಹೆಣ್ಣು ಮಕ್ಕಳ ಹೆಸರಲ್ಲಿ ಪಂಚಾಯತಿ ಕಡೆಯಿಂದ 5 ಸಾವಿರ ರೂ.ಠೇವಣಿ ಇರಿಸುವ ಮೂಲಕ, ಹೆಣ್ಣು ಮಕ್ಕಳ ಭವಿಷ್ಯಕ್ಕೆ ಆರ್ಥಿಕ ಭದ್ರತೆ ಒದಗಿಸುವ ಯೋಜನೆಯನ್ನು ರೂಪಿಸಿದ್ದು ಕರ್ನಾಟಕದಲ್ಲಿ ಇದೊಂದು ವಿನೂತನ ಕಾರ್ಯಕ್ರಮವಾಗಿದೆ.
Certificates being distributed to the parents of the newborn girl in Hooli
ಹೆಣ್ಣು ಮಕ್ಕಳಿಗೆ ಪ್ರಮಾಣ ಪತ್ರ ವಿತರಣೆ
Updated on

ಬೆಳಗಾವಿ: ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸಲು ಹಾಗೂ ಅವರ ಭವಿಷ್ಯಕ್ಕೆ ನೆರವಾಗಲು ಕುಮಾರಿ ಸಮೃದಿ ಹೆಸರಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿ ಗ್ರಾಮ ಪಂಚಾಯತಿ ಇತರ ಆಡಳಿತಗಳಿಗೆ ಮಾದರಿಯಾದ ಹಾಗೂ ಅನುಕರಣೀಯವಾಗಿರುವ ವಿಶೇಷ ಕಾರ್ಯಕ್ರಮವೊಂದನ್ನು ರೂಪಿಸಿದೆ.

ಹೂಲಿ ಗ್ರಾಮದಲ್ಲಿ ಜನಿಸುವ ಪ್ರತಿ ಹೆಣ್ಣು ಮಕ್ಕಳ ಹೆಸರಲ್ಲಿ ಪಂಚಾಯತಿ ಕಡೆಯಿಂದ 5 ಸಾವಿರ ರೂ.ಠೇವಣಿ ಇರಿಸುವ ಮೂಲಕ, ಹೆಣ್ಣು ಮಕ್ಕಳ ಭವಿಷ್ಯಕ್ಕೆ ಆರ್ಥಿಕ ಭದ್ರತೆ ಒದಗಿಸುವ ಯೋಜನೆಯನ್ನು ರೂಪಿಸಿದ್ದು ಕರ್ನಾಟಕದಲ್ಲಿ ಇದೊಂದು ವಿನೂತನ ಕಾರ್ಯಕ್ರಮವಾಗಿದೆ.

ಈ ಯೋಜನೆಯಡಿ, ಕುಟುಂಬದ ಮೊದಲ ಮಗು ಹೆಣ್ಣು ಮಗುವಾಗಿದ್ದರೇ ಅಥವಾ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರೆ, ಗ್ರಾಮ ಪಂಚಾಯತ್ ಮಗುವಿನ ಹೆಸರಿನಲ್ಲಿ ನಿಗದಿತ ಮೊತ್ತವನ್ನು ಠೇವಣಿ ಮಾಡುತ್ತದೆ. ಈ ಹಣಕಾಸಿನ ನೆರವು ದೀರ್ಘಾವಧಿಯ ಭದ್ರತೆಯನ್ನು ಖಚಿತಪಡಿಸುವುದು ಮತ್ತು ಹೆಣ್ಣು ಮಕ್ಕಳ ಜನನದ ಬಗ್ಗೆ ಸಕಾರಾತ್ಮಕ ದೃಷ್ಟಿಕೋನವನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ.

ಆಗಸ್ಟ್ 15, 2022 ರಿಂದ ಆಗಸ್ಟ್ 15, 2025 ರವರೆಗೆ, ಪಂಚಾಯತ್ ಪ್ರತಿ ಅರ್ಹ ಮಗುವಿನ ಹೆಸರಿನಲ್ಲಿ 5,000 ರೂ.ಗಳನ್ನು ಠೇವಣಿ ಇಟ್ಟಿದೆ. ಒಟ್ಟು 47 ಹೆಣ್ಣುಮಕ್ಕಳು ಇದರ ಪ್ರಯೋಜನ ಪಡೆದಿದ್ದು, ಒಟ್ಟಾರೆ 2.35 ಲಕ್ಷ ರೂ. ಹೂಡಿಕೆ ಮಾಡಲಾಗಿದೆ. ಆಗಸ್ಟ್ 16, 2025 ರಿಂದ ಠೇವಣಿ ಮೊತ್ತವನ್ನು ಪಂಚಾಯಿತಿಯು ರೂ. 5,500 ಕ್ಕೆ ಹೆಚ್ಚಿಸಿದೆ. ಇಬ್ಬರು ಹೆಣ್ಣು ಮಕ್ಕಳು ಇದರ ಪ್ರಯೋಜನ ಪಡೆದಿದ್ದಾರೆ.

Certificates being distributed to the parents of the newborn girl in Hooli
ಶಕ್ತಿ ಯೋಜನೆ: ಬೆಂಗಳೂರು, ಹುಬ್ಬಳ್ಳಿ- ಧಾರವಾಡದಲ್ಲಿ ಉದ್ಯೋಗಸ್ಥ ಮಹಿಳೆಯರ ಪ್ರಮಾಣ ಹೆಚ್ಚಳ; ಸಮೀಕ್ಷಾ ವರದಿ

ಈ ಹಣವನ್ನು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಸ್ಥಳೀಯ ಶಾಖೆಯಲ್ಲಿ ಠೇವಣಿ ಇಡಲಾಗುತ್ತದೆ ಮತ್ತು ಫಲಾನುಭವಿಗಳು 18 ವರ್ಷ ತುಂಬಿದಾಗ ಸಂಚಿತ ಬಡ್ಡಿಯೊಂದಿಗೆ ಪಡೆಯಬಹುದು. ಇಲ್ಲಿಯವರೆಗೆ, ಒಟ್ಟು ರೂ. 2.46 ಲಕ್ಷವನ್ನು 49 ಹೆಣ್ಣು ಮಕ್ಕಳ ಹೆಸರಿನಲ್ಲಿ ಠೇವಣಿ ಇಡಲಾಗಿದೆ.

ಸುಮಾರು 12,000 ಜನಸಂಖ್ಯೆಯನ್ನು ಹೊಂದಿರುವ ಹೂಲಿ ಗ್ರಾಮ ಪಂಚಾಯತ್ ತನ್ನದೇ ಆದ ವಾರ್ಷಿಕ ರೂ. 717 ಲಕ್ಷ ಆದಾಯವನ್ನು ಬಳಸಿಕೊಂಡು ಈ ಯೋಜನೆಗೆ ಹಣಕಾಸು ಒದಗಿಸಿದೆ. ಪರಿಣಾಮಕಾರಿ ಮತ್ತು ಜವಾಬ್ದಾರಿಯುತ ಸ್ಥಳೀಯ ಆಡಳಿತವನ್ನು ಎತ್ತಿ ತೋರಿಸುತ್ತದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹಾದೇವಪ್ಪ ಕಲ್ಲಿ ಈ ಯೋಜನೆಯು ದೀರ್ಘಾವಧಿಯಲ್ಲಿ ಹೆಣ್ಣುಮಕ್ಕಳಿಗೆ ಆರ್ಥಿಕ ಸ್ಥಿರತೆಯನ್ನು ಹಾಗೂ ಭದ್ರತೆ ನೀಡುತ್ತದೆ ಎಂದು ಹೇಳಿದರು.

ಈ ಪರಿಕಲ್ಪನೆಯನ್ನು ಮೂಲತಃ ಗ್ರಾಮ ಪಂಚಾಯತ್ ಸದಸ್ಯ ವಿರೂಪಾಕ್ಷ ತೊರಗಲ್ಲ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಪ್ರಸ್ತಾಪಿಸಿದರು. ಹೆಣ್ಣು ಮಕ್ಕಳಿಗೆ ಬೆಂಬಲ ನೀಡುವ ವಾತಾವರಣವನ್ನು ಸೃಷ್ಟಿಸುವುದು ಮತ್ತು ಅವರ ಭವಿಷ್ಯದ ನಿರೀಕ್ಷೆಗಳನ್ನು ಸುಧಾರಿಸುವುದು ಅವರ ಉದ್ದೇಶವಾಗಿತ್ತು.ಈ ಬಗ್ಗೆ ಜಾಗೃತಿ ಮೂಡಿಸಲು, ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯಂತಹ ರಾಷ್ಟ್ರೀಯ ಆಚರಣೆಗಳ ಸಮಯದಲ್ಲಿ ತಾಯಂದಿರಿಗೆ ಠೇವಣಿ ಚೀಟಿಗಳನ್ನು ವಿತರಿಸಲಾಗುತ್ತದೆ.

TNIE ಜೊತೆ ಮಾತನಾಡಿದ ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂಧೆ, ಈ ಕ್ರಮವನ್ನು ಗ್ರಾಮ ಪಂಚಾಯತ್ (GP) ಶ್ಲಾಘನೀಯ ಎಂದು ಬಣ್ಣಿಸಿದರು. ನಾಗರಿಕರ ಕಲ್ಯಾಣಕ್ಕೆ ಗ್ರಾಮ ಪಂಚಾಯತ್‌ಗಳು ಹೇಗೆ ಸಕ್ರಿಯವಾಗಿ ಕೊಡುಗೆ ನೀಡಬಹುದು ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ. ಎಲ್ಲಾ ಗ್ರಾಮ ಪಂಚಾಯತ್‌ಗಳಿಗೂ ಇದೇ ರೀತಿಯ ವಿಧಾನವನ್ನು ಅಳವಡಿಸಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com