ವಿದೇಶದಿಂದ ನವ ಮಂಗಳೂರು ಬಂದರಿಗೆ ಎರಡು ತೈಲ ಹಡಗುಗಳು ಆಗಮನ!

ಸಿಂಗಪುರ ಧ್ವಜ ಹೊಂದಿರುವ ಪೈಕ್ಸಿಸ್ ಪಯೋನಿಯರ್ ಹೆಸರಿನ ಹಡಗು ಒಟ್ಟು 47, 236 ಟನ್ ಎಲ್ ಪಿಜಿ ಹೊತ್ತು ತಂದಿದೆ. ಇದು ಅಮೆರಿಕದ ಟೆಕ್ಸಾಸ್ ನ ನೆದರ್ ಲ್ಯಾಂಡ್ ಬಂದರಿನಿಂದ ಫೆ. 14 ರಂದು ಪ್ರಯಾಣ ಆರಂಭಿಸಿತ್ತು.
Pyxis Pioneer, Aqua Titan
ಪೈಕ್ಸಿಸ್ ಪಯೋನೀರ್, ಅಕ್ವಾ ಟೈಟಾನ್
Updated on

ಮಂಗಳೂರು: LPG ಹೊತ್ತ ವಿದೇಶಿ ಹಡಗು ಭಾನುವಾರ ನವ ಮಂಗಳೂರು ಬಂದರಿಗೆ ಬಂದಿದೆ. ಕಚ್ಚಾ ತೈಲ ಹೊತ್ತ ಇನ್ನೊಂದು ಹಡಗು ಭಾನುವಾರ ರಾತ್ರಿಯೇ ಮಂಗಳೂರು ತಲುಪಿದ್ದು, ಇನ್ನೂ ನಾಲ್ಕು ಹಡಗುಗಳು ಇಲ್ಲಿಗೆ ಬರುತ್ತಿವೆ.

ರಷ್ಯಾದ ತೈಲ ತುಂಬಿದ ಅಕ್ವಾ ಟೈಟಾನ್ ಹಡಗು ಶನಿವಾರ ರಾತ್ರಿ ಮಂಗಳೂರು ಬಂದರಿಗೆ ಬಂದಿದೆ. ಭಾನುವಾರ ಮಂಗಳೂರು ರಿಫೈನರಿ ಅಂಡ್ ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ ಗೆ 96, 099.80 ಟನ್ ಕಚ್ಚಾ ತೈಲವನ್ನು ಇಳಿಸಿದೆ. ಜನವರಿ ಅಂತ್ಯದಲ್ಲಿ ಬಾಲ್ಟಿಕ್ ಬಂದರಿನಿಂದ ಲೋಡ್ ಮಾಡಿದ್ದಈ ಹಡಗು ಚೀನಾದ ರಿಜಾವೊ ಬಂದರಿಗೆ ಪ್ರಯಾಣ ಬೆಳೆಸಿ, ಅಲ್ಲಿಂದ ನವ ಮಂಗಳೂರು ಬಂದರಿಗೆ ಬಂದಿದೆ ಎನ್ನಲಾಗಿದೆ.

ಇನ್ನೂ ಸಿಂಗಪುರ ಧ್ವಜ ಹೊಂದಿರುವ ಪೈಕ್ಸಿಸ್ ಪಯೋನಿಯರ್ ಹೆಸರಿನ ಹಡಗು ಒಟ್ಟು 47, 236 ಟನ್ ಎಲ್ ಪಿಜಿ ಹೊತ್ತು ತಂದಿದೆ. ಇದು ಅಮೆರಿಕದ ಟೆಕ್ಸಾಸ್ ನ ನೆದರ್ ಲ್ಯಾಂಡ್ ಬಂದರಿನಿಂದ ಫೆ. 14 ರಂದು ಪ್ರಯಾಣ ಆರಂಭಿಸಿತ

Pyxis Pioneer, Aqua Titan
ಹಾರ್ಮುಜ್ ಜಲಸಂಧಿ ಸಂಕಷ್ಟ: ನ್ಯೂ ಮಂಗಳೂರು ಬಂದರು ತಲುಪಿದ Pyxis Pioneer ಕಾರ್ಗೊ ಹಡಗು; Video

ನವ ಮಂಗಳೂರು ಬಂದರಿನಲ್ಲಿ ಈ ಹಡಗಿನಿಂದ 16, 714 ಟನ್ ಎಲ್ ಪಿಜಿಯನ್ನು ಏಜೆಸ್ ಲಾಜೆಸ್ಟಿಕ್ಸ್ ಲಿಮಿಟೆಡ್ ಗೆ ಇಳಿಸಲಾಗುತ್ತಿದೆ. ಸೋಮವಾರ ಬೆಳಗ್ಗೆ ಇಲ್ಲಿಂದ ಈ ಹಡಗು ಹೊರಡಲಿದೆ ಎಂದು ಮೂಲಗಳು ತಿಳಿಸಿವೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಗೆ ಎಲ್ ಪಿಜಿ ಪೂರೈಕೆಗಾಗಿ ಇನ್ನೂ ನಾಲ್ಕು ನಾಲ್ಕು ಹಡಗುಗಳು ನವ ಮಂಗಳೂರು ಬಂದರಿಗೆ ಆಗಮಿಸಲಿವೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com