ISRO ಐಸ್ಯಾಟ್‌ ಕೇಂದ್ರದ ಮೇಲೆ ಡ್ರೋನ್‌ ಹಾರಾಟ: ಭದ್ರತೆ ಕುರಿತು ಹೆಚ್ಚಿದ ಆತಂಕ, FIR ದಾಖಲು

ಮೇ 2ರಂದು ಬೆಳಗ್ಗೆ ಸುಮಾರು 8:16 ಗಂಟೆಯ ವೇಳೆಗೆ, ‘ನೋ ಡ್ರೋನ್ ಝೋನ್’ ಎಂದು ಘೋಷಿಸಲ್ಪಟ್ಟ ಈ ಪ್ರದೇಶದ ಮೇಲೆ ಸುಮಾರು 80 ರಿಂದ 100 ಅಡಿ ಎತ್ತರದಲ್ಲಿ ಡ್ರೋನ್ ಹಾರಾಟ ಕಂಡುಬಂದಿದೆ.
File photo
ಸಂಗ್ರಹ ಚಿತ್ರ
Updated on

ಬೆಂಗಳೂರು: ದೇಶದ ಅತ್ಯಂತ ಸೂಕ್ಷ್ಮ ಸಂಶೋಧನಾ ಪ್ರದೇಶಗಳಲ್ಲಿ ಒಂದಾದ ಇಸ್ರೋ ಐಸೈಟ್ ಕ್ಯಾಂಪಸ್ ಮೇಲೆ ಅಪರಿಚಿತರಿಂದ ಡ್ರೋನ್ ಹಾರಾಟ ನಡೆದಿರುವುದು ಭದ್ರತಾ ವಲಯದಲ್ಲಿ ಗಂಭೀರ ಆತಂಕಕ್ಕೆ ಕಾರಣವಾಗಿದೆ.

ಮೇ 2ರಂದು ಬೆಳಗ್ಗೆ ಸುಮಾರು 8:16 ಗಂಟೆಯ ವೇಳೆಗೆ, ‘ನೋ ಡ್ರೋನ್ ಝೋನ್’ ಎಂದು ಘೋಷಿಸಲ್ಪಟ್ಟ ಈ ಪ್ರದೇಶದ ಮೇಲೆ ಸುಮಾರು 80 ರಿಂದ 100 ಅಡಿ ಎತ್ತರದಲ್ಲಿ ಡ್ರೋನ್ ಹಾರಾಟ ಕಂಡುಬಂದಿದೆ.

ಸುಮಾರು 10 ರಿಂದ 12 ಸೆಕೆಂಡ್‌ಗಳ ಕಾಲ ಡ್ರೋನ್ ಕ್ಯಾಂಪಸ್ ಮೇಲ್ಭಾಗದಲ್ಲಿ ಹಾರಾಡಿ ನಂತರ ಅಚಾನಕ್ ಆಗಿ ಕಣ್ಮರೆಯಾಗಿದೆ ಎಂದು ಸಿಐಎಸ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ.

ಕ್ಯಾಂಪಸ್ ಭದ್ರತೆಯಲ್ಲಿ ನಿಯೋಜಿತವಾಗಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿ ಡ್ರೋನ್ ಹಾರಾಟವನ್ನು ಗಮನಿಸಿ ತಕ್ಷಣವೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಲಾಗಿದೆ.

File photo
Watch | ಅಮೆರಿಕದ ಉಪಗ್ರಹ ಭೂಕಕ್ಷೆಗೆ ಸೇರ್ಪಡೆ; ಇಸ್ರೋ ಐತಿಹಾಸಿಕ ಸಾಧನೆ

ಇಸ್ರೋ ಐಸೈಟ್ ಕ್ಯಾಂಪಸ್ ಅತ್ಯಂತ ಸೂಕ್ಷ್ಮ ಮತ್ತು ನಿರ್ಬಂಧಿತ ವಲಯವಾಗಿದ್ದು, ಇಲ್ಲಿ ಯಾವುದೇ ರೀತಿಯ ವೈಮಾನಿಕ ಚಟುವಟಿಕೆಗಳಿಗೆ ಅನುಮತಿಯನ್ನು ನಿರಾಕರಿಸಲಾಗಿದೆ.

ಇಂತಹ ಪ್ರದೇಶದಲ್ಲಿ ಡ್ರೋನ್ ಹಾರಾಟ ನಡೆದಿರುವುದು ಭದ್ರತೆ ಹಾಗೂ ರಾಷ್ಟ್ರದ ಪ್ರಮುಖ ವೈಜ್ಞಾನಿಕ ಆಸ್ತಿಗಳ ಸುರಕ್ಷತೆಗೆ ಗಂಭೀರ ಅಪಾಯವೆಂದು ಪರಿಗಣಿಸಲಾಗಿದೆ.

ಅಪರಿಚಿತರು ಕಾನೂನು ಉಲ್ಲಂಘಿಸಿ ಅಥವಾ ಉದ್ದೇಶಪೂರ್ವಕವಾಗಿ ಡ್ರೋನ್ ಹಾರಿಸಿದ್ದು, ಎಚ್‌ಎಎಲ್ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಡ್ರೋನ್ ಹಾರಿಸಿದವರ ಪತ್ತೆಗೆ ಬಲೆ ಬೀಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com