ರಾಜ್ಯ

'ಇಟಲಿ ಪ್ರಧಾನಿಗೆ ಚಾಕ್ಲೇಟ್ ಕೊಟ್ಟರೆ ತಪ್ಪೇನು? ಸಂಸತ್ತಿಗೆ ಟಿ-ಶರ್ಟ್ ಧರಿಸಬೇಡಿ ಎಂದು ರಾಹುಲ್ ಗೆ ಹೇಳುವ ಧಮ್ ಕಾಂಗ್ರೆಸ್ಸಿಗರಿಗೆ ಇಲ್ಲ': MP ರಮೇಶ್ ಜಿಗಜಿಣಗಿ; Video

ಮೋದಿಯವರ ಬಗ್ಗೆ ಏಕೆ ಪ್ರಶ್ನಿಸುತ್ತೀರಿ, ಮೋದಿಯವರಿಗೆ ತೊಂದರೆ ಕೊಡಬೇಕು ಎಂದು ಬಯಸಿದರೆ ಈ ಜನ್ಮದಲ್ಲಿ ಏನೂ ಮಾಡುವುದಕ್ಕೆ ಆಗುವುದಿಲ್ಲ ಎಂದರು.

'ಇಟಲಿ ಪ್ರಧಾನಿಗೆ ಚಾಕ್ಲೇಟ್ ಕೊಟ್ಟರೆ ತಪ್ಪೇನು? ಸಂಸತ್ತಿಗೆ ಟಿ-ಶರ್ಟ್ ಧರಿಸಬೇಡಿ ಎಂದು ರಾಹುಲ್ ಗೆ ಹೇಳುವ ಧಮ್ ಕಾಂಗ್ರೆಸ್ಸಿಗರಿಗೆ ಇಲ್ಲ': MP ರಮೇಶ್ ಜಿಗಜಿಣಗಿ; Video
ರಮೇಶ್ ಜಿಗಜಿಣಗಿ
Published On :

ವಿಜಯಪುರ: ಕಾಂಗ್ರೆಸ್ ನ ಸಂಸತ್ ಸದಸ್ಯ ಟೀಶರ್ಟ್ ಹಾಕಿಕೊಂಡು ಸಂಸತ್ತಿಗೆ ಕಲಾಪಕ್ಕೆ ಬರುತ್ತಾರೆ, ಅವರಿಗೆ ನೀವು ಏನೂ ಹೇಳುವುದಿಲ್ಲ, ಟೀಕಿಸುವುದಿಲ್ಲ, ಆದರೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಟಲಿಗೆ ಹೋಗಿ ಅಲ್ಲಿನ ಪ್ರಧಾನ ಮಂತ್ರಿಗೆ ಚಾಕಲೇಟ್ ಗಿಫ್ಟ್ ನೀಡಿದರೆ ಟೀಕಿಸುತ್ತೀರಿ, ಇಂತಹ ಮನಸ್ಠಿತಿಗೆ ಏನು ಹೇಳಬೇಕು ಎಂದು ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಪ್ರಶ್ನಿಸಿದ್ದಾರೆ.

ವಿಜಯಪುರದಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸತ್ತಿಗೆ ಟೀಶರ್ಟ್ ಹಾಕಿಕೊಂಡು ಹೋಗಬೇಡಿ ಎಂದು ಹೇಳಲು ಕಾಂಗ್ರೆಸ್ ನವರಿಗೆ ಧೈರ್ಯ ಇಲ್ಲ, ಮೋದಿಯವರ ಬಗ್ಗೆ ಏಕೆ ಪ್ರಶ್ನಿಸುತ್ತೀರಿ, ಮೋದಿಯವರಿಗೆ ತೊಂದರೆ ಕೊಡಬೇಕು ಎಂದು ಬಯಸಿದರೆ ಈ ಜನ್ಮದಲ್ಲಿ ಏನೂ ಮಾಡುವುದಕ್ಕೆ ಆಗುವುದಿಲ್ಲ ಎಂದರು.

ಅಂದು ಮೋದಿಯವರು ಜಗತ್ತಿನಲ್ಲಿ ಬಲಿಷ್ಠ ನಾಯಕನಾಗಿ ಬೆಳೆದಿದ್ದಾರೆ. ಅವರ ಪ್ರಸಿದ್ಧಿ ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ, ಪ್ರಧಾನಿಯವರು ಚಾಕಲೇಟ್ ಕೊಟ್ಟದ್ದರಲ್ಲಿ ಏನು ತಪ್ಪು, ನಮ್ಮ ಮಕ್ಕಳಿಗೆ ನಾವು ತಿನ್ನಲು, ಖುಷಿಪಡಿಸಲು ಚಾಕಲೇಟ್ ಕೊಡುತ್ತೇವೆ. ಒಂದು ದೇಶಕ್ಕೆ ಹೋದಾಗ ನಮ್ಮ ಪ್ರವೃತ್ತಿಯಂತೆ ಅಲ್ಲಿನ ಪ್ರಧಾನಿಗೆ ಚಾಕಲೇಟ್ ಕೊಟ್ಟಿದ್ದಾರೆ, ಅದರಲ್ಲಿ ಏನೂ ತಪ್ಪಿಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.