

ಸ್ಮಾರ್ಟ್‌ಫೋನ್‌ಗಳದೇ ಒಂದು ಜಗತ್ತಾದರೆ, ಅಪ್ಲಿಕೇಶನ್‌ಗಳದೇ ಇನ್ನೊಂದು ಜಗತ್ತು. ನಿಮಗ್ಯಾವುದು ಬೇಕು ಅಂತ ಹುಡುಕೋದೇ ಸವಾಲು. ಆಯಾ ವಿಭಾಗದಲ್ಲಿ ಆಯ್ದ ಹತ್ತತ್ತು ಆ್ಯಪ್ಸ್ ಇಲ್ಲಿವೆ. ಇದು ಆಧುನಿಕ ತಂತ್ರಜ್ಞಾನದ ಸಮುದ್ರದಿಂದ ಎತ್ತಿದ ಒಂದು ಬೊಗಸೆ ನೀರು.
ಸ್ಮಾರ್ಟ್‌ಫೋನ್ ಎಂದರೆ ಅದೇ ಅದ್ಭುತ ಲೋಕ ಅದರಲ್ಲಿ ಏನೇನೋ ಮಾಡಬಹುದಂತೆ ಎಂಬ ಅಚ್ಚರಿ ಹುಟ್ಟಿಸಿ ಮಾರ್ಕೆಟ್‌ಗೆ ದಾಳಿ ಇಟ್ಟ ಅನೇಕ ಜನಪ್ರಿಯ ಕಂಪನಿಯ ಮೊಬೈಲ್‌ಗಳು ಮೊಬೈಲ್ ಮಾರ್ಕೆಟ್‌ನ ಸ್ವರೂಪವನ್ನೇ ಬದಲಾಯಿಸಿದವು. ಈ ಸ್ಮಾರ್ಟ್‌ಫೋನ್‌ಗಳ ಯಶಸ್ಸಿನಲ್ಲಿ ಆಯಾ ಕಂಪನಿಯ ಆಪರೇಟಿಂಗ್ ಸಿಸ್ಟಮ್‌ಗಳು ಮಹತ್ತರ ಪಾತ್ರ ವಹಿಸಿದವು. ಇಂಥ ಸಮರದಲ್ಲಿ ಹೆಚ್ಚಿನ ಜಯ ಕಂಡಿದ್ದು ಆ್ಯಂಡ್ರಾಯ್ಡ್ ಮೊಬೈಲ್‌ಗಳು ಮತ್ತು ಐಫೋನ್‌ಗಳು.
ಆದರೆ ಏಕಾಂಗಿಯಾಗಿ ಯಾವುದೂ ಸಾಧ್ಯವಿಲ್ಲ ಎನ್ನುವಂತೆ ಈ ಓಎಸ್‌ಗಳಿಗೆ ಸಾಥ್ ನೀಡಿದ್ದು ಅವುಗಳಲ್ಲಿರುವ ಅಪ್ಲಿಕೇಶನ್‌ಗಳು. ವಿಂಡೋಸ್ ಮೊಬೈಲ್ ಅದೆಷ್ಟೇ ಅದ್ಭುತ ಮತ್ತು ಹಿತವಾದ ಇಂಟರ್‌ಫೇಸ್ ಹೊಂದಿದ್ದರೂ ಇಂದಿಗೂ ಅಷ್ಟೊಂದು ಜನಪ್ರಿಯವಾಗದೆ ಇರುವುದಕ್ಕೆ ಜನಪ್ರಿಯ ಅಪ್ಲಿಕೇಶನ್‌ಗಳ ಕೊರತೆಯೇ ಮೂಲ ಕಾರಣ. ಆದರೆ, ಆಪರೇಟಿಂಗ್ ಸಿಸ್ಟಮ್ ಇರೋರಿಗೆ ಅಪ್ಲಿಕೇಶನ್ ಇಲ್ಲ, ಅಪ್ಲಿಕೇಶನ್ ಇರೋರಿಗೆ ಆಪರೇಶನ್ ಸಿಸ್ಟಮ್ ಇಲ್ಲ ಎನ್ನುವಂಥ ಪರಿಸ್ಥಿತಿ ನೀಗಿಸಿದ ಎರಡು ಓಎಸ್‌ಗಳೆಂದರೆ ಆ್ಯಂಡ್ರಾಯ್ಡ್ ಮತ್ತು ಐಓಸ್‌ಗಳು. ಈ ಎರಡೂ ಓಎಸ್‌ಗಳ ಯಶಸ್ಸಿನ ಬೆನ್ನ ಹಿಂದೆ ಇರುವ ಲಕ್ಷಾಂತರ ಅಪ್ಲಿಕೇಶನ್‌ಗಳ ಕೊಡುಗೆ ಅಪಾರವಾದದ್ದು ಎನ್ನುವುದರಲ್ಲಿ ದೂಸ್ರಾ ಮಾತಿಲ್ಲ.
ಮೊದಮೊದಲು ಈ ಓಎಸ್‌ಗಳನ್ನು ಹೊಂದಿದ ಸ್ಮಾರ್ಟ್‌ಫೋನ್‌ಗಳು ಬಂದಾಗ ಯಾರೂ ಅಪ್ಲಿಕೇಶನ್‌ಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. 'ಅಯ್ಯೋ ಈ ಫೋನ್‌ನಲ್ಲೇ ಬೇಕಾದಷ್ಟು ಫೀಚರ್ಸ್ ಇವೆ, ಇದಕ್ಕೆ ಇನ್ನೊಂದಿಷ್ಟು ಎಕ್ಟ್ರ್ಸಾ ಐಟಂಗಳು ಯಾಕೆ ಬೇಕು?' ಎಂಬ ಭಾವ ಗ್ರಾಹಕರಲ್ಲಿತ್ತು. ಆದರೆ ಬರ್ತಾ ಬರ್ತಾ ನಮ್ಮ ಪೋನ್ ಅನ್ನು ಪ್ರತಿದಿನ ಹೊಸದರಂತೆ ಕಾಣುವಂತೆ ಮಾಡುವ ಅಪ್ಲಿಕೇಶನ್‌ಗಳ ಹುಚ್ಚು ಹೆಚ್ಚಾಯ್ತಾ ಹೋಯ್ತು. ಅದಕ್ಕೆ ತಕ್ಕಂತೆ ಆಯಾ ಕಂಪನಿಗಳು ಆಫರ್ ಮಾಡಿದ ಅಪ್ಲಿಕೇಶನ್‌ಗಳ ಜೊತೆ ಹೊರಗಿನ ಡೆವಲಪರ್‌ಗಳು ಈ ಓಎಸ್‌ಗೆ ಹೊಂದುವಂತೆ ತಮ್ಮದೇ ಅಪ್ಲಿಕೇಶನ್ ತಯಾರಿಸಲಾರಂಭಿಸಿದರು. ಈಗ ಈ ಅಪ್ಲಿಕೇಶನ್‌ಗಳ ಹೊಳೆ, ಸಮುದ್ರದಷ್ಟಾಗಿದೆ ಎನ್ನಬಹುದು. ಹಾಗಾಗಿ, ನಮ್ಮ ಮೊಬೈಲ್‌ಗೆ ಒಂದು ಹೊಸ ಫೀಚರ್ ಬೇಕು ಎಂದು ಗೂಗಲ್ ಪ್ಲೇ ಸ್ಟೋರ್‌ಗೆ ಹೋದರೆ ಅಲ್ಲಿ ಅದಕ್ಕೆ ಸಂಬಂಧಪಟ್ಟ ನೂರಾರು ಅಪ್ಲಿಕೇಶನ್‌ಗಳು ಕಣ್ಣುಕುಕ್ಕುತ್ತವೆ. ಹಾಗಾಗಿ ಯಾವುದಕ್ಕೆ ಅಪ್ಲಿಕೇಶನ್ ಹಾಕಬೇಕು ಎಂಬುದೇ ಗ್ರಾಹಕರಿಗೆ ಇರುವ ದೊಡ್ಡ ಗೊಂದಲ. ಅಲ್ಲಿರುವ ನೂರಾರು ಅಪ್ಲಿಕೇಶನ್‌ಗಳಲ್ಲಿ ಕೆಲವು ಫ್ರೀ ಅಪ್ಲಿಕೇಶನ್‌ಗಳು, ಇನ್ನು ಕೆಲವಕ್ಕೆ ಹಣ ತೆರಬೇಕು. ಅದಲ್ಲದೆ ಉಚಿತ ಅಪ್ಲಿಕೇಶನ್‌ಗಳಲ್ಲೂ ನೂರಾರು ಆಯ್ಕೆಗಳಿರುವುದರಿಂದ ಯಾವುದನ್ನು ಡೌನ್‌ಲೋಡ್ ಮಾಡಿಕೊಳ್ಳಲಿ ಎನ್ನುವುದು ಅಪ್ಲೈಡ್ ಸೈನ್ಸ್‌ನ ಪ್ರಶ್ನೆ. ಅಲ್ಲಿರುವ ಅಷ್ಟು ಅಪ್ಲಿಕೇಶನ್‌ಗಳನ್ನೂ ಒಂದೊಂದೇ ಡೌನ್‌ಲೋಡ್ ಮಾಡಿ ಅದರ ಕಾರ್ಯವೈಖರಿಯನ್ನು ಪರೀಕ್ಷಿಸಿ ಅದನ್ನು ಬಳಸಲಾರಂಭಿಸುವಷ್ಟು ಸಮಯ ಮತ್ತು ವ್ಯವಧಾನ ಯಾರಿಗೂ ಇರುವುದಿಲ್ಲ. ಹಾಗಾಗಿ ಇಂಥ ಅಪ್ಲಿಕೇಶನ್‌ಗಳಲ್ಲಿ ಯಾವುದು ಬೆಸ್ಟ್ ಎನ್ನುವದರ ಬಗ್ಗೆ ಒಂದಷ್ಟು ಮಾಹಿತಿ ಇಂದಿನ ಗ್ರಾಹಕರಿಗೆ ಅಗತ್ಯ. ಇಲ್ಲಿ ಅಂಥ 10 ಜನಪ್ರಿಯ ವಿಭಾಗಗಳನ್ನು ಆಯ್ದುಕೊಂಡು ಆ ವಿಭಾಗಗಳಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಬಹುದಾದ ಹತ್ತು ಬೆಸ್ಟ್ ಅಪ್ಲಿಕೇಶನ್‌ಗಳನ್ನು ಸೂಚಿಸುವ ಪ್ರಯತ್ನ ಮಾಡಲಾಗಿದೆ. ಇದೇ ವಿಭಾಗಗಳಲ್ಲಿ ನೀವೂ ಅಪ್ಲಿಕೇಶನ್‌ಗಳನ್ನು ಹುಡುಕುತ್ತಿದ್ದರೆ ಈ ವಿವರಗಳು ನಿಮಗೆ ಲಾಭದಾಯಕವಾಗಬಲ್ಲವು.
ಸಂಗೀತಾ ಅಹಾ ಓಹೋ...
ಮ್ಯೂಸಿಕ್ ಅಂಡ್ ಆಡಿಯೋ ಅಪ್ಲಿಕೇಶನ್ಸ್
ಮ್ಯೂಸಿಕ್ ಪ್ಲೇಯರ್ ಅಪ್ಲಿಕೇಶನ್‌ಗಳಲ್ಲಿ ಗಮನಹರಿಸಬೇಕಾದ ಮುಖ್ಯವಾದ ಅಂಶಗಳೆಂದರೆ ಸೌಂಡ್ ಕ್ವಾಲಿಟಿ ಮತ್ತು ಯೂಸರ್ ಫ್ರೆಂಡ್ಲೀ ಫೀಚರ್‌ಗಳು. ಈಕ್ವಲೈಜರ್ ಹೊಂದಿರುವ ಮ್ಯೂಸಿಕ್‌ಪ್ಲೇಯರ್ ಆರಿಸಿಕೊಳ್ಳುವುದು ಒಳ್ಳೆಯದು. ಇನ್ನು ಸರ್ಚ್ ಮಾಡಲು ಸುಲಭವಾದ ಆಪ್ಶನ್‌ಗಳು ಮತ್ತು ಪ್ಲೇ ಆಪ್ಷನ್‌ಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಿ.
ಎನ್7 ಪ್ಲೇಯರ್
ಈಕ್ವಲೈಜರ್ ಮತ್ತು ಸೌಂಡ್ ಎಫೆಕ್ಟ್ಸ್ ಇರುವ ಗುಣಮಟ್ಟದ ಮ್ಯೂಸಿಕ್ ಪ್ಲೇಯರ್
ಪವರ್ ಆ್ಯಂಪ್
ಆ್ಯಂಡ್ರಾಯ್ಡ್ ಅಪ್ಲಿಕೇಶನ್‌ಗಳಲ್ಲಿ ಅತಿ ಜನಪ್ರಿಯ ಮ್ಯೂಸಿಕ್ ಪ್ಲೇಯರ್
ಎಮ್‌ಪಿ 3 ಕಟ್ಟರ್
ಮೊಬೈಲ್‌ನಲ್ಲಿರುವ ಎಮ್‌ಪಿ3 ಹಾಡುಗಳನ್ನು ಕಟ್ ಮಾಡಿ ರಿಂಗ್‌ಟೋನ್ ಆಗಿಸಿಕೊಳ್ಳಬಹುದು.
ಗಾನಾ
ಬಾಲಿವುಡ್ ಹಾಡುಗಳು ಮತ್ತು ಗಜಲ್‌ಗಳ ಸಂಗ್ರಹ
ಸಾವನ್
ಬಾಲಿವುಡ್ ಹಾಡುಗಳು ಮತ್ತು ಗಜಲ್‌ಗಳ ಸಂಗ್ರಹ
ಸಾಂಗ್ಸ್
ಬಾಲಿವುಡ್ ಹಾಡುಗಳು ಮತ್ತು ಗಜಲ್‌ಗಳ ಸಂಗ್ರಹ
ಸೌಂಡ್‌ಕ್ಲೌಡ್
ನಿಮಗಿಷ್ಟದ ಸೌಂಡ್‌ಗಳನ್ನು ಶೇರ್ ಮಾಡಿಕೊಳ್ಳಿ.
ಈಕ್ವಲೈಝರ್
ಮ್ಯೂಸಿಕ್ ಪ್ಲೇಯರ್‌ಗಳಿಗೆ ಎಕ್ಸ್‌ಟರ್ನಲ್ ಈಕ್ವಲೈಜರ್
ಟಿಟಿಪಾಡ್
ಮ್ಯೂಸಿಕ್ ಪ್ಲೇಯರ್
ವಾಯ್ಸ್ ಛೇಂಜರ್
ನಿಮ್ಮ ವಾಯ್ಸ್ ರೆಕಾರ್ಡ್ ಮಾಡಿ ಅದನ್ನು ಚೇಂಜ್ ಮಾಡಿ.
ಕ್ರಿಮಿಗಳಿಗೆ ತಡೆಗೋಡೆ
ಆ್ಯಂಟಿವೈರಸ್ ಅಪ್ಲಿಕೇಶನ್ಸ್
ಆ್ಯಂಟಿವೈರಸ್ ಎಂದ ತಕ್ಷಣ ಅದು ನಿಮ್ಮ ಮೊಬೈಲ್ ಅನ್ನು ವೈರಸ್‌ಗಳಿಂದ ಸುರಕ್ಷಿತವಾಗಿಟ್ಟುಕೊಳ್ಳುವ ಅಪ್ಲಿಕೇಶನ್ ಎನ್ನುವುದು ನಿಜ. ಆದರೆ ಕೆಲವು ಅಪ್ಲಿಕೇಶನ್‌ಗಲಿಂದ ನಿಮ್ಮ ಮೊಬೈಲ್‌ನ ಅಪ್ಲಿಕೇಶನ್‌ಗಳು ಸ್ಲೋ ಆಗಬಹುದು. ಹಾಗಾಗಿ ಯಾವುದೇ ಆ್ಯಂಟಿವೈರಸ್ ಡೌನ್‌ಲೋಡ್ ಮಾಡಿದರೂ ಅದರಲ್ಲಿ ನೀವು ಸೆಟ್ಟಿಂಗ್ಸ್ ಹೇಗೆ ಮಾಡಿಕೊಳ್ಳುತ್ತೀರಿ ಎಂಬುದು ಮುಖ್ಯ.
ಎವಿಜಿ ಮೊಬೈಲ್
ಎವಿಜಿ ಕಂಪನಿಯ ಆ್ಯಂಟಿವೈರಸ್
ನಾರ್ಟನ್ ಸೆಕ್ಯುರಿಟಿ
ನಾರ್ಟನ್ ಮೊಬೈಲ್ ಕಂಪನಿಯ ಆ್ಯಂಟಿವೈರಸ್
ಮ್ಯಾಕ್ಯಾಫೀ ಆ್ಯಂಟಿವೈರಸ್ ಅಂಡ್ ಸೆಕ್ಯುರಿಟಿ
ಮ್ಯಾಕ್ಯಾಫೀ ಕಂಪನಿಯ ಆ್ಯಂಟಿವೈರಸ್
ಎವಿಜಿ ಫಾರ್ ಟ್ಯಾಬ್ಲೆಟ್
ಟ್ಯಾಬ್ಲೆಟ್‌ಗಳಿಗಾಗಿ ವಿಶೇಷವಾದ ಆ್ಯಂಟಿವೈರಸ್
ಮೊಬೈಲ್ ಸೆಕ್ಯುರಿಟಿ ಅಂಡ್ ಆ್ಯಂಟಿವೈರಸ್
ಎವಿಎಎಸ್‌ಟಿ ಕಂಪನಿಯ ಆ್ಯಂಟಿವೈರಸ್
ಲೈನ್
ಲೈನ್ ಕಾರ್ಪೊರೇಶನ್‌ನ ಆ್ಯಂಟಿವೈರಸ್
360 ಮೊಬೈಲ್ ಸೆಕ್ಯುರಿಟಿ
ಕ್ವಿಹು 360 ಸಾಫ್ಟ್‌ವೇರ್ ಕಂಪನಿಯ ಆ್ಯಂಟಿವೈರಸ್
ಎಮ್‌ಪ್ರೊಟೆಕ್ಟ್
ರೆಟ್ಸೆಲ್ ಇಂಕ್‌ನ ಆ್ಯಂಟಿವೈರಸ್
ಕ್ಯಾಸ್ಪೆರೆಸ್ಕಿ ಇಂಟರ್‌ನೆಟ್ ಸೆಕ್ಯುರಿಟಿ
ಕ್ಯಾಸ್ಪೆರೆಸ್ಕಿ ಲ್ಯಾಬ್‌ನ ಆ್ಯಂಟಿವೈರಸ್
ಶೈನ್
ಶೈನ್ ಸೆಕ್ಯುರಿಟಿಯ ಆ್ಯಂಟಿವೈರಸ್
ಆಡೂ ಓಟ ಆಡೂ...
ರೇಸಿಂಗ್ ಗೇಮ್ಸ್ ಅಪ್ಲಿಕೇಶನ್ಸ್
ಗೇಮ್ಸ್ ವಿಷಯದಲ್ಲಿ ಅದರಲ್ಲೂ ರೇಸಿಂಗ್ ಗೇಮ್ಸ್ ವಿಷಯದಲ್ಲಿ ನಿಮ್ಮ ಮೊಬೈಲ್‌ನ ಪ್ರೊಸೆಸರ್ ಎಂಥದ್ದು ಎಂಬುದು ಮುಖ್ಯವಾಗುತ್ತದೆ. ಗೇಮ್ ಚೆನ್ನಾಗಿದೆ ಎಂದಾಕ್ಷಣ ಅದನ್ನು ಡೌನ್‌ಲೋಡ್ ಮಾಡಿದರೆ ಉಪಯೋಗವಿಲ್ಲ. ನಿಮ್ಮ ಮೊಬೈಲ್ ಪ್ರೊಸೆಸರ್ ಅದಕ್ಕೆ ಕಂಪ್ಯಾಟಿಬಲ್ ಆಗಿರಬೇಕು ಮತ್ತು ಗೇಮ್‌ನ ವೇಗಕ್ಕೆ ಹೊಂದಿಕೊಳ್ಳುವಂಥ ಸಾಮರ್ಥ್ಯ ಹೊಂದಿರಬೇಕು. ಬೇಸಿಕ್ ಮೊಬೈಲ್‌ಗಳಲ್ಲಿ ಕಾಂಪ್ಲಿಕೇಟೆಡ್ ಗೇಮ್‌ಗಳನ್ನು ಆಡಲು ಬೇಕಾದ ಡ್ರೈವರ್ಸ್ ಇಲ್ಲದಿರಬಹುದು.
ರೇಸಿಂಗ್ ಮೋಟೋ
ಬೈಕ್ ರೇಸಿಂಗ್
ಡೆಸರ್ಟ್ ರೈಡರ್
ಎಟಿವಿ ಮೋಟೋ ರೇಸರ್
ಸ್ಪೀಡ್ ರೇಸಿಂಗ್
ಕಾರ್ ರೇಸಿಂಗ್
ರೆಕ್‌ಲೆಸ್ ಮೋಟೋ
ಬೈಕ್ ರೇಸಿಂಗ್
ಮೌಂಟೈನ್ ಕ್ಲೈಂಬ್
ಕಾರ್ ರೇಸಿಂಗ್
ಹಿಲ್ ರೇಸಿಂಗ್
ಮಲ್ಟಿ ವೆಹಿಕಲ್ ರೇಸಿಂಗ್
ಬಿಎಮ್‌ಎಕ್ಸ್ ಸ್ಟ್ರೀಟ್ ಹಂಟ್
ಬೈಸಿಕಲ್ ರೇಸಿಂಗ್
ನೀಡ್ ಫಾರ್ ಸ್ಪೀಡ್ 3ಡಿ
ಕಾರ್ ರೇಸಿಂಗ್
ಕಾರ್ ಡ್ರಿಫ್ಟ್ ರೇಸ್
ಕಾರ್ ರೇಸಿಂಗ್
ಸ್ಟಂಟ್ ಬೈಕರ್
ಬೈಕ್ ರೇಸಿಂಗ್
ನೋಡುವ ಕೇಳುವ ಜಾಡು
ಮೀಡಿಯಾ ಅಂಡ್ ವಿಡಿಯೋ ಅಪ್ಲಿಕೇಶನ್ಸ್
ವಿಡಿಯೋ ಪ್ಲೇಯರ್‌ಗಳನ್ನು ಆಯ್ಕೆ ಮಾಡುವಾಗಲೂ ಮ್ಯೂಸಿಕ್ ಪ್ಲೇಯರ್‌ಗಳನ್ನು ಆಯ್ಕೆ ಮಾಡಿಕೊಳ್ಳುವಾಗಿನಷ್ಟೇ ಗಮನ ಕೊಡುವುದು ಅಗತ್ಯ. ಕೆಲವು ಆರ್ಡಿನರಿ ವಿಡಿಯೋ ಪ್ಲೇಯರ್‌ಗಳು, ಕೆಲವು ಎಚ್‌ಡಿ ವಿಡಿಯೋಗೆಂದೇ ತಯಾರಾದ ವಿಡಿಯೋ ಪ್ಲೇಯರ್‌ಗಳು ಮತ್ತು ಡೌನ್‌ಲೋಡರ್‌ಗಳೂ ಪ್ಲೇ ಸ್ಟೋರ್‌ನಲ್ಲಿ ಲಭ್ಯ. ಬೇಸಿಕ್ ಪ್ಲೇಯರ್‌ಗಳಲ್ಲಿ ಎಚ್‌ಡಿ, ಫುಲ್ ಎಚ್‌ಡಿ ವಿಡಿಯೋಗಳನ್ನು ಸುಲಲಿತವಾಗಿ ಪ್ಲೇ ಮಾಡಲಾಗುವುದಿಲ್ಲ.
ಎಮ್‌ಎಕ್ಸ್ ಪ್ಲೇಯರ್
ವಿಡಿಯೋ ಪ್ಲೇಯರ್
ವಿಎಲ್‌ಸಿ ಪ್ಲೇಯರ್
ವಿಡಿಯೋ ಪ್ಲೇಯರ್
ಟ್ಯೂಬ್ ವಿಡಿಯೋ ಡೌನ್‌ಲೋಡರ್
ವಿಡಿಯೋ ಡೌನ್ ಲೋಡರ್
ರಿಯಲ್ ಪ್ಲೇಯರ್
ವಿಡಿಯೋ ಪ್ಲೇಯರ್
ವಿಡ್ ಟ್ರಿಮ್
ವಿಡಿಯೋ ಎಡಿಟರ್
ವಿಡಿಯೋ ಎಡಿಟರ್
ಎಡಿಟಿಂಗ್ ಸಾಫ್ಟ್‌ವೇರ್
ಯೂಟ್ಯೂಬ್ ಟು ಎವಿ ಡೌನ್‌ಲೋಡರ್
ವಿಡಿಯೋ ಡೌನ್ ಲೋಡರ್
ಎಮ್‌ಪಿ4 ಕಟ್ಟರ್
ವಿಡಿಯೋ ಮೇಕರ್
ಫೇಸ್‌ಬುಕ್ ವಿಡಿಯೋ ಡೌನ್‌ಲೋಡರ್
ವಿಡಿಯೋ ಡೌನ್ ಲೋಡರ್
ವಿಡಿಯೋ ಕಾಲರ್ ಐಡಿ
ಪೋನ್ ಕಾಲರ್‌ಗಳಿಗೆ ಕಾಲರ್ ವಿಡಿಯೋ ಅಸೈನರ್
ಕರೆ ಬಂದಿದೆ
ಕಾಲ್ ರೆಕಾರ್ಡಿಂಗ್ ಅಪ್ಲಿಕೇಶನ್ಸ್
ಕಾಲ್ ರೆಕಾರ್ಡರ್ ಅಪ್ಲಿಕೇಶನ್‌ಗಳಿಗೂ ಕೂಡ ನಿಮ್ಮ ಮೊಬೈಲ್ ಯಾವುದು ಎಂಬುದು ಬಹು ಮುಖ್ಯ. ನಿಮ್ಮ ಬಳಿ ದುಬಾರಿ ಮೊಬೈಲ್ ಇದೆ ಎಂದಾಕ್ಷಣ ಎಲ್ಲ ಅಪ್ಲಿಕೇಶನ್‌ಗಳೂ ಅದರಲ್ಲಿ ವರ್ಕ್ ಆಗುತ್ತವೆ ಎಂಬ ಗ್ಯಾರಂಟಿ ಇಲ್ಲ. ಕೆಲವೊಮ್ಮೆ 5 ಸಾವಿರ ರುಪಾಯಿಯಲ್ಲಿ ಆರಾಮವಾಗಿ ಕೆಲಸ ಮಾಡುವ ಅಪ್ಲಿಕೇಶನ್‌ಗಳು 50ಸಾವಿರದ ಮೊಬೈಲ್‌ಗೆ ಕಂಪ್ಯಾಟಿಬಲ್ ಆಗಿರುವುದಿಲ್ಲ. ಹಾಗಾಗಿ ಉಪಯೋಗಿಸಿ ನೋಡಿರುವವರ ಅನಿಸಿಕೆ ತಿಳಿದುಕೊಂಡು ಡೌನ್‌ಲೋಡ್ ಮಾಡುವುದು ಒಳ್ಳೆಯದು.
ಆಟೊಮ್ಯಾಟಿಕ್ ಕಾಲ್ ರೆಕಾರ್ಡರ್
ಕಾಲ್ ರೆಕಾರ್ಡರ್
ರೆಕಾರ್ಡ್ ಮೈ ಕಾಲ್
ಗೆಲಾಕ್ಸಿ ಕಾಲ್ ರೆಕಾರ್ಡರ್
ಸ್ಯಾಮ್‌ಸಂಗ್ ಗೆಲಾಕ್ಸಿ ಪೋನ್‌ಗಳಿಗೆ ವಿಶೇಷವಾದ ಕಾಲ್ ರೆಕಾರ್ಡರ್
ಆಲ್ ಕಾಲ್ ರೆಕಾರ್ಡರ್
ಆಟೋ ಕಾಲ್ ರೆಕಾರ್ಡರ್
ಆ್ಯಂಡ್ರೊರೆಕ್
ಟೋಟಲ್ ಕಾಲ್ ರೆಕಾರ್ಡರ್
ಸ್ಮಾರ್ಟ್ ಆಟೋಕಾಲ್ ರೆಕಾರ್ಡರ್
ದಿ ಕಾಲ್ ರೆಕಾರ್ಡರ್
ಗಂಭೀರ ಸಮಸ್ಯೆ
ಪಜಲ್ ಅಪ್ಲಿಕೇಶನ್ಸ್
ಇದು ವಯಸ್ಸಿಗನುಗುಣವಾಗಿ ಆಯ್ಕೆ ಮಾಡಿಕೊಳ್ಳಬೇಕಾದ ಅಪ್ಲಿಕೇಶನ್ ವಿಭಾಗ. ಪ್ರೀ ನರ್ಸರಿ ಮಕ್ಕಳಿಂದ ಹಿಡಿದು ಮಾಸ್ಟರ್ ಡಿಗ್ರಿ ಮಾಡುವ ಗ್ರಾಹಕರಿಗೆ ಬೇರೆ ಬೇರೆ ರೀತಿಯ ಮೈಂಡ್ ಪಜಲ್‌ಗಳಿವೆ. ಅಭಿರುಚಿ ಮತ್ತು ವಯಸ್ಸಿಗೆ ಅನುಗುಣವಾಗಿ ಅಪ್ಲಿಕೇಶನ್‌ನ ಆಯ್ಕೆ ಮಾಡಿಕೊಳ್ಳಿ.
ಬಬಲ್ ಶೂಟರ್
ಬಬಲ್ ಶೂಟ್
ಮಾಡಿ ಪಾಯಿಂಟ್ಸ್ ಗಳಿಸಿ
ಅನ್‌ಬ್ಲಾಕ್ ಮಿ
ಸ್ಲೈಡಿಂಗ್ ಬ್ಲಾಕ್ಸ್ ಗೇಮ್
ಪ್ಲೋ ಫ್ರೀ
ಕಲರ್ ಕನೆಕ್ಟಿಂಗ್ ಗೇಮ್
ಕಟ್ ದಿ ರೋಪ್
ಕ್ಯಾಂಡಿ ಅಂಡ್ ಫ್ರಾಗ್ ಗೇಮ್
ವೇರ್ ಈಸ್ ಮೈ ವಾಟರ್
ಅಡ್ವೆಂಚರ್ ಗೇಮ್
ಮಾಜೋಂಗ್ ಸಾಲಿಟೇರ್
ಮ್ಯಾಚಿಂಗ್ ಸ್ಲೈಡ್ ಗೇಮ್
ಕಾರ್ ಪಾರ್ಕಿಂಗ್
3ಡಿ ಕಾರ್ ಪಾರ್ಕಿಂಗ್ ಸ್ಕಿಲ್ಸ್ ಗೇಮ್
ಸುಡೊಕು
ಟಿಕ್‌ಟ್ಯಾಕ್‌ಟೋಯ್
ಮ್ಯಾಚ್ ಮೇಕರ್ ಗೇಮ್
ದಿ ರೂಮ್
ಬಾಗಿಲುಗಳನ್ನು ತೆರೆದು ದಾರಿ ಹುಡುಕುವ ಗೇಮ್
ತೂಕದ ಮಾತು
ಹೆಲ್ತ್ ಅಂಡ್ ಫಿಟ್‌ನೆಸ್ ಅಪ್ಲಿಕೇಶನ್ಸ್
ಇವು ಫ್ಯಾನ್ಸಿ ಅಪ್ಲಿಕೇಶನ್‌ಗಳು. ಇವುಗಳಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲಾಗದಿದ್ದರೂ ನಿಮ್ಮ ದೈಹಿಕ ಅವಶ್ಯಕತೆ ಮತ್ತು ಚಟುವಟಿಕೆಗಳ ಟ್ರ್ಯಾಕ್ ಇಡಲು ಈ ಅಪ್ಲಿಕೇಶನ್‌ಗಳು ಸಹಕಾರಿ. ಬ್ಯುಸಿಯಾಗಿರುವ ದೈನಂದಿನ ಚಟುವಟಿಕೆಗಳ ನಡುವೆ ಇವು ನಿಮ್ಮ ಆರೋಗ್ಯದ ಅವಶ್ಯಕತೆಗಳಿಗೆ ನೆರವಾಗಬಲ್ಲವು.
ಐಡಿಯಲ್ ವೆಯ್ಟ್
ದೇಹದ ತೂಕದ ಬಗ್ಗೆ ಮಾಹಿತಿ ನೀಡುವ ಆ್ಯಪ್
ಇನ್‌ಸ್ಟೆಂಟ್ ಹಾರ್ಟ್ ಬೀಟ್
ಹಾರ್ಟ್‌ಬೀಟ್ ಚೆಕ್ ಮಾಡುವ ಆ್ಯಪ್
ಕ್ಯಾಲೋರಿ ಕೌಂಟರ್
ಆಹಾರದಲ್ಲಿರುವ
ಕ್ಯಾಲೋರಿ ಬಗ್ಗೆ ಮಾಹಿತಿ
ನೀಡುವ ಆ್ಯಪ್
ವಾಟರ್ ಯುವರ್ ಬಾಡಿ
ದೇಹದಲ್ಲಿರಬೇಕಾದ ನೀರಿನ ಅಂಶದ ಬಗ್ಗೆ ಮಾಹಿತಿ ನೀಡುವ ಆ್ಯಪ್
ಡೈಲಿ ಯೋಗ
ಯೋಗ ತರಬೇತಿ ನೀಡುವ ಆ್ಯಪ್
ವರ್ಕ್‌ಔಟ್ ಟ್ರೈನರ್
ಡೈಲಿ ವರ್ಕ್ ಔಟ್‌ನ ಬಗ್ಗೆ ಮಾಹಿತಿ
ಬ್ಯೂಟಿ ಟಿಪ್
1000 ಬ್ಯೂಟಿ ಟಿಪ್ಸ್‌ಗಳಿರುವ ಆ್ಯಪ್
ವೆಯ್ಟ್ ಲಾಸ್ ಎಕ್ಸರ್‌ಸೈಜ್
ದೇಹದ ತೂಕ ಕಳೆದುಕೊಳ್ಳುವ ವಿಧಾನಗಳು
ಲೇಡೀಸ್ ಆ್ಯಬ್ ವರ್ಕ್ ಔಟ್
ಪೀರಿಯಡ್ ಕ್ಯಾಲೆಂಡರ್/ಟ್ರ್ಯಾಕರ್
ಕಲಿ ನಲಿ
ಎಜ್ಯುಕೇಶನ್ ಸಂಬಂಧಿತ ಅಪ್ಲಿಕೇಶನ್ಸ್
ಇದೂ ಕೂಡ ಅಭಿರುಚಿ ಮತ್ತು ವಯಸ್ಸಿನ ಮೇಲೆ ನಿರ್ದರಿತವಾಗುವ ಅಪ್ಲಿಕೇಶನ್‌ಗಳು. ನಿಮ್ಮ ಆಸಕ್ತಿಯ ವಿಷಯಕ್ಕೆ ತಕ್ಕಂಥ ಅನೇಕ ಎಜ್ಯುಕೇಶನ್ ಅಪ್ಲಿಕೇಶನ್‌ಗಳು ಪ್ಲೇ ಸ್ಟೋರ್‌ನಲ್ಲಿವೆ. ಇಲ್ಲಿ ಅದರ ಉದಾಹರಣೆಯಂತೆ ಕೆಲವು ಅಪ್ಲಿಕೇಶನ್‌ಗಳನ್ನು ನೀಡಲಾಗಿದೆ.
ಫೋಟೋಶಾಪ್ ಫಾರ್ ಯು
ಜಿಕೆ ಅಂಡ್ ಕರೆಂಟ್ ಅಫೈರ್ಸ್
ಡಿಕ್ಷನರಿ ಆಫ್‌ಲೈನ್
ಲರ್ನ್ ಇಂಗ್ಲಿಷ್ ಸ್ಪೀಕಿಂಗ್
ಮ್ಯಾಥ್ಸ್ ಶಾರ್ಟ್‌ಕಟ್ಸ್
ಇಂಡಿಯನ್ ಸ್ಕೈ ಮ್ಯಾಪ್
ಆಕಾಶದಲ್ಲಿನ ಸೂರ್ಯ,ಚಂದ್ರ, ನಕ್ಷತ್ರಗಳ ಪಥವನ್ನು ತೋರಿಸುವ ಮ್ಯಾಪ್
ಎಂಎಸ್ ವರ್ಡ್ 2007 ಟ್ಯೂಟರ್
ಕಂಪ್ಯೂಟರ್ ಟ್ರಿಕ್ಸ್
ಇಂಡಿಯನ್ ಹಿಸ್ಟರಿ
ಇಂಡಿಯನ್ ಹಿಸ್ಟರಿ ಬಗ್ಗೆ ಮಾಹಿತಿ ಮತ್ತು ಕ್ವಿಝ್‌ಗಳು
ಮ್ಯಾಥ್ಸ್ ಫಾರ್ಮುಲೇ
ಹೊಸ ಜೀವನಶೈಲಿ ಲೈಫ್‌ಸ್ಟೈಲ್ ಅಪ್ಲಿಕೇಶನ್ಸ್
ಇದು ಅತಿ ಹೆಚ್ಚು ವೆರೈಟಿ ಇರುವ ಅಪ್ಲಿಕೇಶನ್ ವಿಭಾಗ. ಇಲ್ಲಿ ಹುಡುಕುತ್ತ ಹೋದರೆ ಸಾವಿರಾರು ಅಪ್ಲಿಕೇಶನ್‌ಗಳು ಸಿಗುತ್ತವೆ. ಇಲ್ಲೂ ಕೂಡ ಅಭಿರುಚಿ ಮತ್ತು ಅವಶ್ಯಕತೆ ಮುಖ್ಯವಾಗುತ್ತದೆ. ಅತಿ ಜನಪ್ರಿಯ ಅಪ್ಲಿಕೇಶನ್‌ಗಳನ್ನು ಮಾತ್ರ ಇಲ್ಲಿ ಹೆಸರಿಸಲಾಗಿದೆ.
ನಿಯಾನ್ ಅಲಾರ್ಮ್ ಕ್ಲಾಕ್
ನ್ಯೂ ಬ್ಲೌಸ್ ಸ್ಟೈಲ್ಸ್
ಪ್ರೈವೇಟ್ ಡೈರಿ
ಹಾರೋಸ್ಕೋಪ್
ಸೆಲ್‌ಫೋನ್ ಟ್ರ್ಯಾಕರ್
ಮಿರರ್
ಬೆಸ್ಟ್ ಮೆಹಂದಿ ಡಿಸೈನ್ಸ್
ವಾಸ್ತು
ಫ್ಲ್ಯಾಷ್‌ಲೈಟ್
ಸ್ಪೀಕಿಂಗ್ ಟ್ರೀ
ಆಧ್ಯಾತ್ಮಿಕ ಇಂಟರ್‌ನೆಟ್ ಸಾಮಾಜಿಕ ತಾಣ
- ಹರಿ
harikannadaprabha@gmail.com