ಅರಣ್ಯ ನೋಡುತ್ತಾ ಮರಗಳನ್ನು ಮರೆತ ಗುಹ
ವಿಪುಲವಾಗಿ ಬರೆಯುವ ಬರಹಗಾರ ರಾಮಚಂದ್ರ ಗುಹ ಅವರ ಇತ್ತೀಚಿನ ಕೃತಿ 'ಗಾಂಧಿ ಬಿಫೋರ್ ಇಂಡಿಯಾ' ಬಗ್ಗೆ ಮೊದಲು ಮೂಡುವ ಪ್ರಶ್ನೆ- ಯಾಕೆ?...

ಗಾಂಧಿ ಬಿಫೋರ್ ಇಂಡಿಯಾ
ಲೇ: ರಾಮಚಂದ್ರ ಗುಹ
ಪ್ರ: ಅಲೆನ್ ಲೇನ್
ಪುಟ: 673, ಬೆಲೆ: 899 ರು.
ವಿಪುಲವಾಗಿ ಬರೆಯುವ ಬರಹಗಾರ ರಾಮಚಂದ್ರ ಗುಹ ಅವರ ಇತ್ತೀಚಿನ ಕೃತಿ 'ಗಾಂಧಿ ಬಿಫೋರ್ ಇಂಡಿಯಾ' ಬಗ್ಗೆ ಮೊದಲು ಮೂಡುವ ಪ್ರಶ್ನೆ- ಯಾಕೆ? ಇದು ಈ ಕೃತಿಯ ಗಾತ್ರದ ಬಗ್ಗೆ. ಗುಹ ಅವರ ಮೊದಲಿನ ಕೃತಿಗಳಂತಲ್ಲದೆ, ಇದು 673 ಪುಟಗಳವರೆಗೆ ವಿಸ್ತರಿಸುತ್ತದೆ. ಹಾಗೇ ಅದು ಗಾಂಧೀಜಿ ಅವರ ಬಗ್ಗೆ ಗುಹಗೆ ಇರುವ ಪ್ರಶ್ನಾತೀತ ಅಭಿಮಾನವನ್ನೂ ದಾಖಲಿಸುತ್ತದೆ.
ಭಾರತಕ್ಕೆ ಬರುವ ಮುನ್ನ, ದಕ್ಷಿಣ ಆಫ್ರಿಕ ಹಾಗೂ ಲಂಡನ್ನಲ್ಲಿ ಗಾಂಧಿ ಕಳೆದ ದಿನಗಳು, ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಬೇಕಾದ ನೈತಿಕ ದಿಟ್ಟತೆಯವನ್ನು ಅವರು ಪಡೆದುಕೊಂಡ ರೀತಿಯನ್ನು ಗುಹ ವಿಸ್ತಾರವಾಗಿ ಇಲ್ಲಿ ವರ್ಣಿಸುತ್ತಾರೆ. ಅದಕ್ಕಾಗಿ ಅವರು ಮಾಡಿಕೊಂಡ ಅಧ್ಯಯನ ಕಲೆಹಾಕಿರುವ ಅಂಕಿ ಅಂಶಗಳು, ಅವರು ಮಾಡಿದ ಸುತ್ತಾಟ ಎಲ್ಲವೂ ಶ್ಲಾಘ್ಯ. ಗಾಂಧೀಜಿ ಕುರಿತು ಈ ವಿಭಾಗದಲ್ಲಿ ಇದ್ದ ಕೊರತೆಯನ್ನು ಅವರು ತುಂಬಿದ್ದಾರೆ.
ಆದರೆ ಈ ಪುಸ್ತಕದ ಸಮಸ್ಯೆ ಎಂದರೆ, ತಾವು ಕಲೆ ಹಾಕಿದ ಮಾಹಿತಿಯೆಲ್ಲವನ್ನೂ ಇಲ್ಲಿ ತುಂಬಿಸಬಹುದು ಎಂದು ಗುಹ ಅಂದುಕೊಂಡಿರುವುದು. ಇದರಿಂದ ಪುಸ್ತಕದ ಓದು ತ್ರಾಸದಾಯಕವಾಗಿದೆ. ಇದರಿಂದ ಈ ವಿಷಯದ ಅಧ್ಯಯನಕಾರರಿಗೆ ಉಪಯೋಗವಾಗಬಹುದಷ್ಟೆ. ಇವನ್ನೆಲ್ಲ ಇನ್ನಷ್ಟು ಶಿಸ್ತುಬದ್ಧವಾಗಿ, ಎಡಿಟ್ ಮಾಡಿ ಜೋಡಿಸಬಹುದಾಗಿತ್ತು ಎಂಬುದು ನನ್ನ ಅಭಿಪ್ರಾಯ. ಅರಣ್ಯವನ್ನು ನೋಡುತ್ತ ಗುಹ ಮರಗಳನ್ನೇ ಮರೆತುಬಿಟ್ಟಿದ್ದಾರೆ. ಸತ್ಯಾಗ್ರಹದ ಕಲ್ಪನೆಯನ್ನು ಗಾಂಧಿ ಆಫ್ರಿಕದಲ್ಲಿ ಬೆಳೆಸಿಕೊಂಡರು ಎಂಬುದು ಸಾಮಾನ್ಯ ಜ್ಞಾನ. ಅದಕ್ಕಿಂತ ಮೀರಿದ್ದೇನನ್ನೂ ಈ ಕೃತಿ ಹೇಳುವುದಿಲ್ಲ. ಹೊಸ ಒಳನೋಟಗಳನ್ನು ಕೊಡುವುದಿಲ್ಲ. ಗಾಂಧಿಯ ಸಸ್ಯಾಹಾರದ ಗೀಳು, ಆಧುನಿಕ ವೈದ್ಯಪದ್ಧತಿಯ ತಿರಸ್ಕಾರ, ಮಕ್ಕಳ ವಿಷಯದಲ್ಲಿ ಅವರು ಸರ್ವಾಧಿಕಾರಿಗಳಾಗಿದ್ದದ್ದು, ಇವೆಲ್ಲ ಎಲ್ಲರಿಗೂ ಗೊತ್ತಿರುವಂಥದೇ. ಆದರೆ ಗಾಂಧಿಯ ವಿಕಾಸದ ಬಗ್ಗೆ ಸಾಕಷ್ಟು ವಿವರಿಸುವ ಗುಹ, ಇವನ್ನೆಲ್ಲ ಗಮನಿಸುವ ಕಷ್ಟ ತೆಗೆದುಕೊಳ್ಳುವುದಿಲ್ಲ. ಜತೆಗೆ, ದೊಡ್ಡದೊಂದು ಸಂಗತಿಗಾಗಿ ಇಂಥ ಸಣ್ಣಪುಟ್ಟ ದೌರ್ಬಲ್ಯಗಳನ್ನು ಸಮರ್ಥಿಸಬಹುದೆಂಬ ವಾದವನ್ನೂ ಮಂಡಿಸುತ್ತಾರೆ.
ಅದೇನೇ ಇರಲಿ, ಗಾಂಧಿಯವರ ಆ ದಿನಗಳ ಬಗ್ಗೆ ಗುಹ ನಡೆಸಿದ ಅಧ್ಯಯನ, ದಾಖಲಿಸಿರುವ ಬಗೆಯನ್ನು ಮೆಚ್ಚಲೇಬೇಕು. ಹಾಗೇ ಅವರು ಈ ಪುಸ್ತಕದ 'ಸುಲಭ ಆವೃತ್ತಿ'ಯನ್ನು ಕೂಡ ಹೊರತರಲಿ ಎಂದು ನಾವು ಹಾರೈಸಬಹುದು!
- ಚಂದನ್ ಮಿತ್ರಾ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


