ಖುಷಿ

ಮೈಚೆಲ್ಲಿದರೆ ವಯಸ್ಸಾಗಲ್ಲ!

ಕೇವಲ ತೀಟೆ ತೀರಿಸಿಕೊಳ್ಳಲು ಮಿಲನ ಅಲ್ಲ. ಆ ಸ್ಪರ್ಶದ ಉತ್ಸಾಹದಲ್ಲಿ ಜಾದೂವೇ ಇದೆ. ದಿನಾ ರಾತ್ರಿ ಮಿಲನೋತ್ಸವದಲ್ಲಿ ಪಾಲ್ಗೊಳ್ಳುವ ಪುರುಷರು ಹಗಲಿನಲ್ಲಿ ಸೂಪರ್ ...

ಮೈಚೆಲ್ಲಿದರೆ ವಯಸ್ಸಾಗಲ್ಲ!
Published On :

ಕೇವಲ ತೀಟೆ ತೀರಿಸಿಕೊಳ್ಳಲು ಮಿಲನ ಅಲ್ಲ. ಆ ಸ್ಪರ್ಶದ ಉತ್ಸಾಹದಲ್ಲಿ ಜಾದೂವೇ ಇದೆ. ದಿನಾ ರಾತ್ರಿ ಮಿಲನೋತ್ಸವದಲ್ಲಿ ಪಾಲ್ಗೊಳ್ಳುವ ಪುರುಷರು ಹಗಲಿನಲ್ಲಿ ಸೂಪರ್ ಆ್ಯಕ್ಟಿವ್ ಆಗಿರ್ತಾರಂತೆ. ಎಂಥ ಒತ್ತಡವನ್ನೂ ನಿರ್ನಾಮ ಮಾಡುವ ಸಾಮರ್ಥ್ಯ ಸೆಕ್ಸಿಗಿದೆಯಂತೆ. ಒತ್ತಡಕ್ಕೆ ಕಾರಣವಾಗುವ ಕೊರ್ಟಿಸೋಲ್ ಹಾರ್ಮೋನ್‌ಗಳನ್ನು ಸೆಕ್ಸಿನ ಸುಖ ಬಡಿದು ಹಾಕುತ್ತದಂತೆ. ಸಂಗಾತಿಯ ಮುಖ ನೋಡುವುದರಿಂದಲೇ ಸಾಕಷ್ಟು ಪ್ರಮಾಣದ ಕೊರ್ಟಿಸೋಲ್ ಕುಗ್ಗುತ್ತದೆ ಎನ್ನುತ್ತಾರೆ ಲೈಂಗಿ ತಜ್ಞರು. ಇವೂ ಅಲ್ಲದೆ, ಇನ್ನೊಂದಿಷ್ಟು ಸೆಕ್ಸಿನ ಪ್ಲಸ್ ಪಾಯಿಂಟ್‌ಗಳಿವೆ.

ಜ್ವರಕ್ಕೆ ಬರೆ
ವಾರದಲ್ಲೆರಡು ಬಾರಿ ಸೆಕ್ಸ್‌ನಲ್ಲಿ ಪಾಲ್ಗೊಂಡರೆ ಇಮ್ಮ್ಯುನೋಗ್ಲೋಬುಲಿನ್ 'ಎ' ಅಂಶ ಶೇ. 20 ವೃದ್ಧಿಸುತ್ತದೆ. ಆಗುತ್ತದೆ. ಇದು ಶೀತ, ಜ್ವರ ಮತ್ತು ಇತರ ಸಣ್ಣಪುಟ್ಟ ಕಾಯಿಲೆ ಬಾರದಂತೆ ತಡೆಗಟ್ಟುತ್ತದೆ. ಸಂಗಾತಿಯನ್ನು ಅತಿಯಾಗಿ ಭೋಗಿಸುವಿಕೆ ಸರಿ ಅಲ್ಲ. ಮೋಜಿನ ಸೆಕ್ಸ್ ಆರೋಗ್ಯಕ್ಕೆ ಹಿತ.
ಯೌವನದ ಉಳಿವು!
ವಾರದಲ್ಲಿ ನಾಲ್ಕು ಬಾರಿ ಸೆಕ್ಸ್ ಮಾಡುವ ಜೋಡಿಗಳು ತಮ್ಮ ವಯಸ್ಸಿಗಿಂತ 10 ವರ್ಷ ಚಿಕ್ಕವರಾಗಿ ಕಾಣಿಸುತ್ತಾರೆ. ಸೆಕ್ಸ್ ವೇಳೆ ಅಡ್ರೆನೆಲಿನ್, ಡೊಪಮೈನ್ ಮತ್ತು ನೊರ್‌ಪಿನೆಫ್ರಿನ್ ಉತ್ಪಾದನೆಗೊಳ್ಳುವುದರಿಂದ ದೇಹಕ್ಕೆ ವಯಸ್ಸಾಗುವುದಿಲ್ಲ. ಚರ್ಮಕೋಶಗಳ ತಾಜಾತನಕ್ಕೂ ಸಹಕಾರಿ. ಕಾಸ್ವಲ್ ಸೆಕ್ಸ್ ಯೌವನವನ್ನು ಕಾಪಾಡಲು ಪರಿಣಾಮಕಾರಿಯಾಗಿ ವರ್ತಿಸುತ್ತದೆ.

ಕ್ಯಾನ್ಸರ್‌ಗೆ ಲಕ್ಷಣ ರೇಖೆ
ವಾರದಲ್ಲಿ ಕಡಿಮೆ ಎಂದರೂ 7 ಬಾರಿ ಸ್ಖಲನವಾದರೆ ಕ್ಯಾನ್ಸರ್ ಬಾರದಂತೆ ತಡೆಹಿಡಿಯಲು ಸಾಧ್ಯ. ಕಾರ್ಸಿನೋಜನ್ಸ್ ಅನ್ನು ಕಾಪಾಡುವುದರೊಂದಿಗೆ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ. ದಿನದಲ್ಲಿ ಅನೇಕ ಬಾರಿಗಿಂತ ಒಂದು ಸಲದ ಸ್ಖಲನ ಹೆಚ್ಚು ಸೂಕ್ತ.

ನೋವು ನಿವಾರಕ!
ನಿಮ್ಮ ದೇಹ ವಿಪರೀತ ದಣಿದು, ಅಲ್ಲಲ್ಲಿ ನೋವು ಆಕ್ರಮಿಸಿಕೊಂಡಿದೆಯೇ? ಹಾಗಾದರೆ, ಸಂಗಾತಿಯೊಂದಿಗೆ ಮೈಚೆಲ್ಲಿ ಮಲಗಿ. ನೋವು ಆದಷ್ಟು ಬೇಗ ನಿವಾರಣೆಗೊಳ್ಳುತ್ತದೆ. ಯಾವುದೇ ಪೇನ್ ಕಿಲ್ಲರ್‌ಗಿಂತಲೂ ಸಂಭೋಗ ಪರಿಣಾಮಕಾರಿ ಮದ್ದು. ಬೆನ್ನು ನೋವು, ಮೈಗ್ರೈನ್‌ಗಳು ವಿಳಾಸ ಸಿಕ್ಕದೆ ನಾಪತ್ತೆಯಾಗುತ್ತವೆ. ಈ ವೇಳೆ ಆವೇಗದ ಸೆಕ್ಸ್ ಬೇಡ. ಸ್ಲೋ ಸ್ಟ್ರೋಕ್ ಸೂಕ್ತ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.