ಟೆನ್ಷನ್ ಆದ್ರೆ ಗಂಡಸ್ರಿಗೆ ಲಾಸು!

ಸಂಭೋಗಕ್ಕೆ ಮೊದಲ ಶತ್ರು ಒತ್ತಡ. ಈ ಬಗ್ಗೆ ನೀವು ಕೇರ್‌ಫುಲ್ ಆಗಿರೋದು ಒಳ್ಳೇದು. ಅದರಲ್ಲೂ ಈ ಒತ್ತಡ ಹೆಚ್ಚು ಹತ್ತಿ ಕೂರುವುದು ಮಹಿಳೆಯರ ಮೇಲೆ. ಮಹಿಳೆಯರ ಲೈಂಗಿಕಾಸಕ್ತಿ ಪುರುಷರಿಗಿಂತ ಹೆಚ್ಚಿನ ಸೂಕ್ಷ್ಮತೆ ಹೊಂದಿರುತ್ತದೆ. ಒತ್ತಡಗಳು, ಮಾನಸಿಕ ಗೊಂದಲ, ಅಶಾಂತಿಗಳು ಆಕೆಯನ್ನು ಕಾಮದ ಬಯಕೆಯಿಂದ ದೂರ ಸರಿಸುತ್ತವಂತೆ. ಹೀಗಾಗಿ, ಅಂಥ ಮಹಿಳೆಯರ ರಾತ್ರಿಗಳು ತುಂಬಾ ಬೋರ್ ಆಗಿರುತ್ತವೆ. ಪುರುಷರು ಜಿಮ್‌ಗಳಿಗೆ ತೆರಳಿ ಒತ್ತಡಗಳನ್ನು ಆದಷ್ಟು ಪುಡಿಮಾಡುತ್ತಾರೆ. ಆದರೆ, ಮಹಿಳೆಯರು ಹಾಗೆಲ್ಲ ದೇಹ ದಂಡಿಸುವುದಿಲ್ಲ. ಸಣ್ಣ ಸಣ್ಣ ಸಂಗತಿಗಳಿಗೂ ಟೆನ್ಷನ್ ತಂದುಕೊಳ್ಳುತ್ತಾರೆ. ಆಕೆಯ ಒತ್ತಡವನ್ನು ನೀಗಿಸಿದರೆ ಅವಳ ರಾತ್ರಿ ಸಲ್ಲಾಪದಾಯಕವಾಗಿರುತ್ತವೆ. ಹಾಗಾದರೆ, ಆಕೆ ಯಾವಾಗ್ಯಾವಾಗ ಒತ್ತಡಕ್ಕೀಡಾಗುತ್ತಾಳೆ?
ಶಾಪಿಂಗ್ ಡೇಂಜರ್
ಮೊದಲನೆಯದ್ದು ಶಾಪಿಂಗ್. ನೀವು ಗಮನಿಸಿ... ಆಕೆ ಶಾಪಿಂಗ್ ಮಾಡಿದ ದಿನ ಹಾಸಿಗೆ ಮೇಲೆ ಸುಸ್ತಾದಂತೆ ವರ್ತಿಸುತ್ತಾಳೆ. ಅದಕ್ಕೆ ಕಾರಣ ಒತ್ತಡ. ಏನಾದರೂ ಖರೀದಿಸುವಾಗ ಆಕೆಯ ಆಲೋಚನೆಗಳು ನಿಯಂತ್ರಣಕ್ಕೇ ಸಿಗುವುದಿಲ್ಲ. ಶಾಪಿಂಗ್ ವೇಳೆ ಬ್ಯಾಂಕ್ ಅಕೌಂಟ್ ಬರಿದಾದಾಗಲೇ ಅವಳಿಗೆ ನೆಮ್ಮದಿ. ಅದೂ ತಾತ್ಕಾಲಿಕ! ಇಂಥ ವೇಳೆ ಗಂಡಸರು ಜಾಣರಾಗುವುದು ಒಳಿತು. ಆಕೆಯನ್ನು ಹದವಾಗಿ ಮಾತನಾಡಿಸುತ್ತಾ, ಐಸ್‌ಕ್ರೀಮಿನಂಥ ಲೈಟ್ ತಿನಿಸುಗಳನ್ನು ತಿನ್ನಿಸುತ್ತಾ ಸಂಗಾತಿಗೆ ತಣ್ಣನೆ ಇರುವಂತೆ ನೋಡಿಕೊಳ್ಳಬೇಕು.
ಕಾಲು ನೋವು ಅಂತಾಳಾ?
ಆಕೆಗೆ ಇನ್ನೊಂದು ಕಾಡುವ ಸಮಸ್ಯೆ ಕಾಲುನೋವು. ಇದು ಕೂಡ ಅವಳ ಮೇಲೆ ಒತ್ತಡ ತರುತ್ತದೆ. ಸಲ್ಲಾಪಕ್ಕೂ ಅಡ್ಡಿ ತರುತ್ತದೆ. ಜಾಸ್ತಿ ನಡೆಯುವುದು ಆಕೆಗೆ ಆಗಿಬರುವುದಿಲ್ಲ. ಅವಳು ಹಾರಿಕೊಂಡು ಹೋಗುವ ಸುಖ ಬಯಸುವವಳು. ಹಾಗೂ ನಡೆಯಬೇಕು ಎಂದಾದರೆ, ಸಂಗಾತಿಯನ್ನು ಮೆತ್ತಗೆ ಸ್ಪರ್ಶಿಸುತ್ತಾ ಅವಳಲ್ಲಿ ನಿರಾಳತೆ ಸೃಷ್ಟಿಸಿ.
ಡ್ರೆಸ್ಸಿಂಗ್ ಕೇರ್ ತಗೊಳ್ಳಿ...
ಸೌಂದರ್ಯ ಕಾಪಾಡಿಕೊಳ್ಳುವುದೂ ಆಕೆಗಿರುವ ಮತ್ತೊಂದು ಟೆನ್ಷನ್. ಮನೆಯಲ್ಲಿ ಪೌಡರ್ರೋ, ಕ್ರೀಮೋ ಖಾಲಿಯಾದರೆ, ಆಕೆಯ ಮುಖದಲ್ಲೊಂದು ಮೊಡವೆ ಎದ್ದರೆ ಈ ಒತ್ತಡ ತಲೆ ಸೇರುತ್ತದೆ. ಡ್ರೆಸ್ಸು, ಮೇಕಪ್, ವ್ಯಾಯಾಮಕ್ಕೆ ಸಮಯವೇ ಇಲ್ಲವೆಂದಾಗಲೂ ಅವಳು ಒತ್ತಡಕ್ಕೀಡಾಗುತ್ತಾಳೆ. ಹೀಗಾಗಿ, ಅವಳ ಸೌಂದರ್ಯದ ಆರಾಧನೆಗೆ ಪ್ರೋತ್ಸಾಹ ಕೊಡಿ. ಜಿಮ್ ಮಾಡಬೇಕೆಂದು ಬಯಸಿದರೆ, ಅಲ್ಲಿಗೂ ಸೇರಿಸಿ. ಹಳೇ ಬಟ್ಟೆಗಳಿಂದ ಆದಷ್ಟು ಆಕೆಯನ್ನು ದೂರವಿಡಿ.
ಆಗ ನೋಡಿ ಹಾಸಿಗೆಯ ಸುಖ...
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


