ಪುಸ್ತಕ ದ್ವೇಷಿ ಜಗತ್ತು

ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕೆ ಅರಮನೆ ಮೈದಾನದಲ್ಲಿ ಅವಕಾಶ ಇಲ್ಲವಂತೆ. ಇದನ್ನು ಕೇಳಿದಾಗ, ರೇ ಬ್ರಾಡ್ಬರಿ ಬರೆದ 'ಫ್ಯಾರನ್ಹೀಟ್ 451' ಫ್ಯೂಚರಿಸ್ಟಿಕ್ ಕಾದಂಬರಿ ನೆನಪಾಯಿತು.
ಇಪ್ಪತ್ತನಾಲ್ಕನೇ ಶತಮಾನ. ಆ ಸಮಾಜದ ಜನರಿಗೆ ಪುಸ್ತಕಗಳ ಪರಿಚಯವಿಲ್ಲ. ಮನರಂಜನೆ ಮತ್ತು ಸುದ್ದಿಗೆ ಟಿವಿ, ಥ್ರಿಲ್ಗೆ ವೇಗದ ಡ್ರೈವಿಂಗ್ ಅವಲಂಬಿಸಿರುವವರು. ಪುಸ್ತಕಗಳು ಮಾನವ ಜನಾಂಗವನ್ನು ಕೆಡಿಸುವುದಕ್ಕಾಗಿ ಇರುವ ಕೆಡುಕಿನ ಸಂಗತಿಗಳು ಎಂಬ ನಂಬಿಕೆ. ಹೀಗಾಗಿಯೇ ಪುಸ್ತಕಗಳು ಕಾನೂನುಬಾಹಿರ, ಬುದ್ಧಿಜೀವಿಗಳು ಕೇಡಿಗಳು. ಗ್ರಂಥಗಳನ್ನು ಕಂಡಲ್ಲಿ ಸುಟ್ಟುಹಾಕಲು ಒಂದು ಸೈನ್ಯವೇ ಇದೆ. ಈ 'ಫೈರ್ಮನ್'ಗಳು ಅಗ್ನಿಶಾಮಕರಲ್ಲ, ಬೆಂಕಿ ಹಚ್ಚುವವರು.
ಇಂಥ ಒಬ್ಬ ಫೈರ್ಮನ್ ಗೈ ಮೊಂಟಾಗ್. ಒಮ್ಮೆ ಕಚೇರಿಯಿಂದ ಮನೆಗೆ ಮರಳುತ್ತ ಕ್ಲಾರಿಸ್ಸೆ ಎಂಬ ತರುಣಿಯನ್ನು ಭೇಟಿಯಾಗುತ್ತಾನೆ. ಆಕೆ ಪುಸ್ತಕಮೋಹಿತೆ, ಜಗತ್ತಿನ ಎಲ್ಲ ಸಂಗತಿಗಳ ಬಗ್ಗೆ ಕುತೂಹಲ, ಪ್ರೀತಿಯ ಕಣ್ಣುಳ್ಳವಳು. ಆಕೆಯ ಪ್ರಶ್ನೆಗಳು ಆತನಲ್ಲಿ ಹೊಸ ಅರಿವನ್ನು ಬಿತ್ತುತ್ತವೆ. ಮೊಂಟಾಗ್ ನಿಧಾನವಾಗಿ ಪುಸ್ತಕಪ್ರೇಮಿಯಾಗಿ ಬದಲಾಗುತ್ತಾನೆ.
ಆದರೆ ಕಾನೂನು, ಪ್ರಭುತ್ವ ಈ ಬದಲಾವಣೆಗಳನ್ನು ಸಹಿಸುವುದಿಲ್ಲ. ಅದು ಮೊಂಟಾಗ್ನನ್ನೂ, ಆತನನ್ನು ಬೆಂಬಲಿಸುತ್ತಿರುವ ಭೂಗತ ಪುಸ್ತಕಪ್ರೇಮಿಗಳ ಗುಂಪನ್ನೂ ಬೆನ್ನಟ್ಟುತ್ತದೆ. ಮೊಂಟಾಗ್ನ ಪತ್ನಿಯೇ ಆತನಿಗೆ ದ್ರೋಹ ಎಸಗುತ್ತಾಳೆ. ಪ್ರಭುತ್ವದ ಕ್ರೂರ ಕೈಗಳನ್ನು ಎದುರಿಸುತ್ತ ಅವರೆಲ್ಲ ಹೊಸ ಸಮಾಜ ಕಟ್ಟುವ ಕನಸಿನಲ್ಲಿ ಮುಂದುವರಿಯುತ್ತಾರೆ. ಅದು ನಂತರದ, ಆಶಾವಾದದ ಕತೆ. ಕಾದಂಬರಿಯ ಆಶಾವಾದ ಏನೇ ಇರಬಹುದು, ಅಲ್ಲಿ ಇರುವ ಪುಸ್ತಕದ್ವೇಷಿ ಸಮಾಜದ ಚಿತ್ರಣವಂತೂ ಭಯಾನಕವಾಗಿದೆ. 451 ಫ್ಯಾರನ್ಹೀಟ್, ಪುಸ್ತಕ ಬೆಂಕಿ ಹತ್ತಿ ಉರಿಯುವ ತಾಪಮಾನ.
- ಹರೀಶ್ ಕೇರ
harishkera@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


