ಅಧ್ಯಾತ್ಮ ನಭದ ಚಂದ್ರ
ವಿಶ್ವದಲ್ಲಿ ಎರಡು ವಸ್ತುಗಳು ತಮ್ಮ ಚಲನೆಯನ್ನು ಎಂದೂ ನಿಲ್ಲಿಸುವುದಿಲ್ಲ. ಅವುಗಳೇ ರಕ್ತ ಮತ್ತು ಹಣ. ಈ ಎರಡು ಅಂಶಗಳು ಮಾನವನ...

ವಿಶ್ವದಲ್ಲಿ ಎರಡು ವಸ್ತುಗಳು ತಮ್ಮ ಚಲನೆಯನ್ನು ಎಂದೂ ನಿಲ್ಲಿಸುವುದಿಲ್ಲ. ಅವುಗಳೇ ರಕ್ತ ಮತ್ತು ಹಣ. ಈ ಎರಡು ಅಂಶಗಳು ಮಾನವನ ಸರಳ ಜೀವನಕ್ಕೆ ಅತ್ಯವಶ್ಯ. ಇವೆರಡರಲ್ಲಿ ಒಂದು ನಿಂತರೂ ಬದುಕು ನಿಲ್ಲುತ್ತದೆ. ಹಾಗಾಗಿ ಪ್ರತಿಯೊಬ್ಬರು ಆಯುರಾರೋಗ್ಯ ಹಾಗೂ ಐಶ್ವರ್ಯಭರಿತರಾಗಬೇಕು ಎನ್ನುತ್ತಾರೆ ಚಂದ್ರಶೇಖರ ಸ್ವಾಮೀಜಿ.
ವ್ಯಕ್ತಿಗಳ ಸಮೂಹ ಎಂದರೆ ಸಮಾಜ ಎಂದೆನಿಸುವುದಿಲ್ಲ. ಒಂದು ನಿರ್ದಿಷ್ಟ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ವ್ಯಕ್ತಿಗಳು ಒಂದುಗೂಡಿದಾಗ ಸಮಾಜ ಎಂಬ ಪರಿಪೂರ್ಣತೆ ಆವರಿಸುತ್ತದೆ. ಅಧ್ಯಾತ್ಮ ಹಾಗೂ ಸಂಸ್ಕೃತಿಯ ದ್ಯೋತಕವಾಗುತ್ತದೆ. ಈ ಹಿನ್ನೆಲೆಯಲ್ಲಿ ಶೋಭಿಸುತ್ತ ಸಮಾಜಮುಖಿಯಾಗಿ ಕೊಡುಗೆ ನೀಡುತ್ತಿರುವುದು ಚಂದ್ರಶೇಖರ ಸ್ವಾಮೀಜಿ. ಪ್ರೀತಿ, ಸೇವಾ ಮನೋಭಾವ, ಸಮಾಜಕ್ಕೆ ಸದಾ ಒಳ್ಳೆಯದನ್ನೇ ಬಯಸುವ ಸಾಕಾರ ಮೂರ್ತಿ. ಸರಳ ಹಾಗೂ ವಿನಮ್ರತೆಯ ಪ್ರತೀಕ. ಸಕಲರಿಗೂ ಲೇಸನ್ನೇ ಬಯಸುವ ಕಾಯಕ ಯೋಗಿ. ಕಾರ್ಯ ಕೈಗೂಡುವವರೆಗೂ ನಿರಂತರ ಪ್ರಯತ್ನಿಸಿ ಯಶ ಸಾಧಿಸುವ ಸಾಧಕ. ಕೆಲಸದಲ್ಲಿ ಕುಂಟು ನೆಪಗಳಿಲ್ಲ. ಸೀದಾಸಾದಾ ಸಲೀಸು.
ಅತೀಂದ್ರಿಯ ಶಕ್ತಿ, ಸದಾ ಅಗತ್ಯವುಳ್ಳವರ ನೆರವಿಗೆ ಕಠಿಬದ್ಧರಾಗುವ ಬದ್ಧತೆ ಭಕ್ತರಿಗೆ, ಅನುಯಾಯಿಗಳಿಗೆ ಸ್ಫೂರ್ತಿ.
ಕರ್ನಾಟಕ ಸೇರಿದಂತೆ ಭಾರತದ ಅನೇಕ ಸೇವಾ ಸಂಘ ಸಂಸ್ಥೆಗಳಿಗೆ ನೆರವಿನ ಹಸ್ತ ಚಾಚಿ ಋುಣಿಯಾಗಿದ್ದಾರೆ. ವಸುಧೈವ ಕುಟುಂಬಕಂ ಎಂಬ ಉದಾತ್ತ ಚಿಂತನೆಯಿಂದ ಜನಬಂಧು ಎನಿಸಿಕೊಂಡಿರುವುದು ಚಂದ್ರಶೇಖರ ಸ್ವಾಮೀಜಿ ವರ್ಚಸ್ಸಿಗೆ ಕನ್ನಡಿ. ಬಡವ, ಶ್ರೀಮಂತ, ಶೋಷಿತ ವರ್ಗ ಎಂದು ತಾರತಮ್ಯವೆಣಿಸದೆ ಅಂತರ್ಜಾತಿಯ ಮದುವೆಗಳನ್ನು ಪ್ರೋತ್ಸಾಹಿಸಿದ್ದಾರೆ. ವಿವಿಧ ಮತಗಳನ್ನು ಒಂದುಗೂಡಿಸಿದ್ದಾರೆ.
ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಆಳವಾಗಿ ಚಿಂತಿಸಿ ಅಧ್ಯಾತ್ಮದ ಕುರಿತು ಅಪಾರ ಪಾಂಡಿತ್ಯ ಗಳಿಸಿಕೊಂಡಿರುವುದು ವಿಶೇಷ. ವಾಸ್ತುತಜ್ಞರಾಗಿ ಎಷ್ಟೋ ಮಂದಿಯ ಸಮಸ್ಯೆ ನಿವಾರಣೆ ಮಾಡಿ ಕುಟುಂಬಕ್ಕೆ ಸುಖ ಶಾಂತಿ ನೆಮ್ಮದಿಯನ್ನು ಕರುಣಿಸಿದ್ದಾರೆ. ಅಮೆರಿಕ, ಥಾಯ್ಲೆಂಡ್, ಜಪಾನ್, ಕೊರಿಯಾ ಸೇರಿದಂತೆ ಅನೇಕ ದೇಶಗಳಿಗೆ ಭೇಟಿ ನೀಡಿ ಅಧ್ಯಾತ್ಮ ಸಂದೇಶ ನೀಡಿದ್ದಾರೆ. ವಿಜ್ಞಾನಿಗಳು, ಶಿಕ್ಷಣಾಧಿಕಾರಿಗಳು, ಬುದ್ಧಿಜೀವಿಗಳು, ಡಾಕ್ಟರ್, ಎಂಜಿನಿಯರ್ ಹೀಗೆ ಎಲ್ಲರೂ ಚಂದ್ರಶೇಖರ ಸ್ವಾಮೀಜಿ ಭಕ್ತ ಸಮೂಹದ ವಿಸ್ತಾರತೆ. ಸದಾ ಮಂದಹಾಸ ಸ್ವರೂಪಿ. ಹಾಸ್ಯ ಪ್ರವೃತ್ತಿಯನ್ನೂ ಮೈಗೂಡಿಸಿಕೊಂಡಿರುವುದು ಭಕ್ತಾಭಿಮಾನಿಗಳ ವಿಶಾಲಕ್ಕೆ ಕಾರಣ.
ಅಮಿತಾಭ್ ಬಚ್ಚನ್ ಪುತ್ರ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಅವರ ಲಗ್ನ ಜಾತಕ ಹೇಳಿದ್ದು ಚಂದ್ರಶೇಖರ ಸ್ವಾಮೀಜಿ. ಇವರ ಆಶೀರ್ವಾದ ಹಾಗೂ ಒಡನಾಟ ಪಡೆದವರಲ್ಲಿ ಮೈಸೂರು ಸಂಸ್ಥಾನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪ್ರಮುಖರು.
ಥಾಯ್ಲೆಂಡ್, ಚೀನಾ, ಜಪಾನ್ ಮತ್ತು ಕೊರಿಯಾ ದೇಶಗಳಲ್ಲಿ ನಡೆದ ಆಯುರ್ವೇದ ಸಮ್ಮೇಳನಗಳಲ್ಲಿ ಇವರ ಪ್ರವಚನಕ್ಕೆ ಜನ ಮನಸೋತಿದ್ದಾರೆ. ಅದ್ಭುತ, ಅಗೋಚರ ಸಾಂತ್ವನ ನೀಡುವ ಹಸ್ತಗುಣ ಹೊಂದಿರುವ ಚಂದ್ರಶೇಖರ ಸ್ವಾಮೀಜಿ ಎಂದಿಗೂ ತಮ್ಮ ಧೀಶಕ್ತಿಯನ್ನು ದುರುಪಯೋಗ ಪಡಿಸಿದವರಲ್ಲ. ಪ್ರಕೃತಿ ಹಾಗೂ ಗಿಡ ಮೂಲಿಕೆ ಚಿಕಿತ್ಸೆಗೆ ಹೆಚ್ಚು ಪ್ರಾಧಾನ್ಯ ನೀಡುತ್ತಾರೆ. ವಿಶ್ವದ ವಿವಿಧೆಡೆ ಇವರ ಆಶ್ರಮಗಳಿವೆ. ಸದಾ ಒಗ್ಗಟ್ಟಿನ, ಐಕ್ಯತೆಯ ಸಂದೇಶ ಸಾರುತ್ತಾ ನಾವೆಲ್ಲರೂ ಒಂದು ಎಂಬ ಮನೋಭಾವ ಭಕ್ತರಲ್ಲಿ ಬಿತ್ತುತ್ತಿರುವುದು ಚಂದ್ರಶೇಖರರ ಹೃದಯ ವಿಶಾಲತೆ ತೋರಿಸುತ್ತದೆ.
ಸಂಸಾರದಲ್ಲಿ ಸ್ತ್ರೀ ಪುರುಷರು ಹೊಂದಾಣಿಕೆಯ ಸದಾಚಾರ ಸಂಪನ್ನರಾಗಬೇಕು. ಸಂಸಾರದಲ್ಲಿ ಜಗಳ ಇರಬಾರದು. ದುರಾಭ್ಯಾಸ ಪುರುಷರ ಮನಸ್ಸು ಆರೋಗ್ಯ ಹಾಳುಮಾಡುತ್ತದೆ. ಇದರಿಂದ ನಂಬಿಕೊಂಡವರು ಅನಾಥರಾಗುತ್ತಾರೆ. ಧರ್ಮ ಮಾರ್ಗದಿಂದ ಸಂಪಾದಿಸಿ ಪೋಷಿಸಬೇಕು. ಉದಾತ್ತ ಗುಣ ಅಳವಡಿಸಿಕೊಂಡರೆ ಬದುಕಿರುವಾಗಲೇ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂಬುದು ಚಂದ್ರಶೇಖರರ ಅಭಿಮತ.
ಶ್ರೀಚಂದ್ರಶೇಖರ ಸ್ವಾಮೀಜಿ
ಅಧ್ಯಾತ್ಮಿಕ ಗುರು, ಅಂತಾರಾಷ್ಟ್ರೀಯ ವಾಸ್ತು ತಜ್ಞರು ಮತ್ತು ವೈಜ್ಞಾನಿಕ ಜ್ಯೋತಿಷಿ
ಪೋಸ್ಟ್ ಬಾಕ್ಸ್ ನಂ. 3223, ಬೆಂಗಳೂರು- 560 032., ಇಮೇಲ್: rajtantrik@yahoo.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


