ಖುಷಿ

ಸ್ವರ್ಗಕ್ಕೆ 5 ಮೆಟ್ಟಿಲು!

ಸ್ವರ್ಗಕ್ಕೆ 5 ಮೆಟ್ಟಿಲು!
Published On :

ಉತ್ತಮ ಸೆಕ್ಸ್‌ಗೆ ಪರಿಶ್ರಮ, ಜಾಣತನ ಮುಖ್ಯ. ಇಂದಿನ ಒತ್ತಡ ನಿರಾಶ ರಾತ್ರಿಗಳನ್ನು ಹುಟ್ಟುಹಾಕುತ್ತಿದೆ. ಲೈಂಗಿಕ ಪ್ರಚೋದನೆಗೆ ಹಲವಾರು ಅಂಗಗಳಿವೆ. ಆದರೆ ಬಹುಮುಖ್ಯ ಪಾತ್ರವಹಿಸುವುದು ಮೆದುಳು. ಸೆಕ್ಸ್ ಮಾಡುವ ಹೀಗೊಂದು ಟಿಪ್ಪಣಿ ನೆನಪಿರಲಿ...
1. ಅವಳನ್ನು ಬ್ಲೈಂಡ್‌ಫೋಲ್ಡ್ ಮಾಡಿ...
ಆಕೆಗೆ ಕಣ್ಣು ಮುಚ್ಚಿಕೊಳ್ಳಲು ಹೇಳಿ ಅಥವಾ ಕಣ್ಣಿಗೆ ಪಟ್ಟಿ ಧರಿಸಲು ಹೇಳಿ. ಆಗ ಸೂಕ್ಷ್ಮತೆ ಜಾಗೃತವಾಗುತ್ತದೆ. ನೀವೆಲ್ಲಿದ್ದೀರಿ ಎಂಬುದು ಆಕೆಗೆ ಗೊತ್ತಾಗದು. ಮುಂದೇನು ಮಾಡುತ್ತೀರಿ ಎಂಬುದೂ ಕಾಣದು. ಆ ಸಂದರ್ಭದಲ್ಲಿ ಉತ್ತಮ ಲೈಂಗಿಕ ಪ್ರಚೋದನೆಗೆ ನಿಮ್ಮ ಕೀಟಲೆ ಅನುವು ಮಾಡಿಕೊಡುತ್ತದೆ. ನಿರ್ಭಯವಾಗಿ ಸ್ಪರ್ಶ ಕೀಟಲೆ ಆರಂಭಿಸಿ. ನಾಲಗೆಯ ಸ್ಪರ್ಶವೂ ಸೂಕ್ತ. ಲೈಂಗಿಕಾಸಕ್ತಿ ಆಕೆಯಲ್ಲಿ ಹೆಚ್ಚಾದಷ್ಟು ಹೆಚ್ಚು ಸುಖ ಅನುಭವಿಸಬಹುದು.
2. ಆಕೆಗೆ ಸೂಚನೆಗಳನ್ನು ನೀಡಿ...
ಹೆಚ್ಚಿನವರು ಸಂಗಾತಿಯನ್ನು ಸಕಲ ವಿಧದಲ್ಲೂ ತೃಪ್ತಿ ಪಡಿಸುತ್ತೆ ಎಂದು ತಪ್ಪಾಗಿ ಅರ್ಥೈಸಿರುತ್ತಾರೆ. ನೀವು ಪ್ರಯೋಗಿಸದ ಬೇರೆ ವಿಧಾನಗಳಿರುತ್ತವೆ. ನಿತ್ಯವೂ ಒಂದೇ ರೀತಿಯಲ್ಲಿ ಸೆಕ್ಸ್ ಮಾಡುವುದಕ್ಕಿಂತ ಬೇರೆ ಬೇರೆ ಭಂಗಿಗಳನ್ನು ಪ್ರಯೋಗಿಸುವುದು ಸೂಕ್ತ. ಪ್ರಯೋಗಿಸದ ಇತರ ಭಂಗಿಗಳ ಕುರಿತು ಆಕೆಯೊಂದಿಗೆ ಹೇಳಿ ಆಯ್ಕೆ ಮಾಡುವುದನ್ನು ಆಕೆಗೇ ಬಿಟ್ಟುಬಿಡಿ.  
3. ಮಸ್ಸಾಜ್ ಮಾಡುತ್ತಿರಿ...
ಮೋಹಿಸಿ ಸ್ಪರ್ಶಿಸುವುದು ನೀವು ಸಂಗಾತಿಗೆ ನೀಡಬಹುದಾದ ಅದ್ಭುತ ಸುಖ. ಅಂಗಾಂಗಗಳಿಗೆ ಮಸಾಜ್ ಮಾಡುತ್ತ ಲೈಂಗಿಕ ಕ್ರಿಯೆಗೆ ಇಳಿಯುವುದು ಆರೋಗ್ಯಕರ. ಏಕಾಏಕಿ ಸೆಕ್ಸ್ ಮಾಡುವುದರಿಂದ ಲೈಂಗಿಕ ಶಕ್ತಿ ವ್ಯಯವಾಗುತ್ತದೆ. ಸಂತೃಪ್ತಿ ಸಿಗದು. ನಿಮ್ಮ ದೈಹಿಕ ಸ್ಪರ್ಶ ಆಕೆಯ ದಣಿವನ್ನು ನಿವಾರಿಸಬೇಕು. ಮೃದುವಾಗಿ ಮಸಾಜ್ ಮಾಡುತ್ತ ಪ್ರಚೋದಕ ಸೆಕ್ಸ್‌ಗೆ ಆಕೆಯನ್ನು ಮೊದಲು ಅಣಿಗೊಳಿಸಬೇಕು. ಸೆಕ್ಸ್ ವೇಳೆ ಕೈ ಕಾಲುಗಳಿಗೂ ಕೆಲಸ ನೀಡಿ.
4. ಫ್ಯಾಂಟಸಿಗಳನ್ನು ಹೇಳುತ್ತಿರಿ...
ನಿಮ್ಮ ಭಾವನೆಗಳು, ಕಲ್ಪನೆಗಳನ್ನು ಸಂಗಾತಿಯಲ್ಲಿ ಹೇಳುತ್ತಿರಿ. ಫ್ಯಾಂಟಸಿ ಎಂದರೆ ನಿಮ್ಮ ವ್ಯವಹಾರಗಳ ಬಗ್ಗೆಯಲ್ಲ ಎಂಬುದು ನೆನಪಿನಲ್ಲಿರಲಿ.
5. ಸ್ಥಳ ಬದಲಿಸಿ...
ಅದೇ ಮನೆ, ಅದೇ ಬೆಡ್ ಮೇಲೆ ಸೆಕ್ಸ್ ಮಾಡುವುದು ಬೋರ್ ಎನಿಸಬಹುದು. ವಿವಿಧ ಸ್ಥಳಗಳಲ್ಲೂ ಪ್ರಯೋಗಿಸಿ. ಸಂಗಾತಿಯನ್ನು ಹೊರ ಪ್ರದೇಶಗಳಿಗೆ ಕರೆದೊಯ್ದು, ಲೈಂಗಿಕ ಕೀಟಲೆ ನೀಡುವುದನ್ನು ಮರೆಯಬೇಡಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.