ಖುಷಿ

ಕನ್ನಡ ವಿಚಿತ್ರ ಕಥೆ

Published On :

ತಿಮ್ಮಾ: ಯಾಕ ತಮ್ಮಾ ಮಾರಿ ಹರಳೆಣ್ಣೆ ಕುಡದ್ಯಂಗ ಕಾಣತೈತೆಲಾ?
ತಮ್ಮಾ: (ಮಾತನಾಡದೆ, ತಲೆ ಹಾಕುವನು)
ತಿಮ್ಮಾ: ಯಾಕಲೇ ತಮ್ಮಾ, ನಿನ್ನ ಜೋಡಿಯಿದ್ದವರ ಮಾರೀನೂ ಒಂಥರಾ ಅಗೇತಲಾಡ... ಯಾಕ?
ತಮ್ಮಾ: ಸಿನೆಮಾ ನೋಡಿ ಬಂದ್ವಿ...
ತಿಮ್ಮಾ: ಯಾವುದು?
ತಮ್ಮಾ: ಅದ್ಯಾವುದೋ ವಿಚಿತ್ರ ಹೆಸರಿನ ಸಿನೆಮಾ, ನಿನ್ನಿಲ್ಲಾ ಮೊನ್ನೆ ರಿಲೀಸ್ ಆಗೆತಲಾ ಅದಡಡ... ಇಲ್ಲೇ ಪೋಸ್ಟರ್ ಹಾಕ್ಯಾರ ನೋಡ.
ತಿಮ್ಮಾ: ಇದೇನ ಪೋಸ್ಟರ್‌ಲೇ? 120ನೇ ಇಂಟರ್‌ವೆಲ್ ಕಂಡಿರುವ ಅದ್ಧೂರಿ ಚಿತ್ರ ಅಂತ ಬರದಾರ...??  
ತಮ್ಮಾ: ಹೌದು, ದಿನಕ್ಕ ನಾಲ್ಕ ಪ್ರದರ್ಶನದ ಹಂಗ, ಹತ್ತ ಥೆಟರ್‌ನ್ಯಾಗ ರಿಲೀಸ್ ಆಗೇತಿ, 3 ದಿನದಾಗ 120 ಇಂಟರ್‌ವೆಲ್ ಆದ್ವಲಾಡಡ...
ತಿಮ್ಮಾ: ಹಿಂದಡ 100 ಡೇಸ್, ಸಿಲ್ವರ್ ಜುಬಿಲಿ, ಅಂತೆಲ್ಲ ಸಿನೆಮಾ ಓಡತಿದ್ವು, ಅದನ್ನ ಪೋಸ್ಟರ್‌ನ್ಯಾಗ ಬರೀತಿದ್ರು, ಓಕೆ, ಆದರೆ ಈಗ ಇದು 100 ಇಂಟರ್‌ವೆಲ್ ಸಿನಿಮಾ ಅಂತ ಬರದಾರಲಪಾಡಡ...
ತಮ್ಮಾ: ಅದಕ್ಕ ನಮ್ಮ ಮಾರಿ ಹಂಗ ಆಗೇತಿ... ಈಗ ಏನ್ ಕೆಲಸ ಮಾಡಾಕ್ಕೂ ಮೂಡ್ ಇಲ್ಲ... ಆ ಹೀರೋ ಯಾಕ್ ಫೈಟ್ ಮಾಡಿದ ತಿಳಿಲಿಲ್ಲ, ಹಾಡ ಅಂತೂ ಹೊಯ್ಯೋಕೊಳ್ಳೊ ಹಂಗ ಅದಾವಪಾ...
ತಿಮ್ಮಾ: ಮುಂಜಾನೆ 6ಕ್ಕ ಆ ಹಾಡನ್ನ ಎಫ್.ಎಂ.ದವರು ಒದರಿಸಿ, ದಿಸ್ ಈಸ್ ನ್ಯೂ ಸುಪ್ರಭಾತ ಆಫ್ ಕರ್ನಾಟಕ ಅಂತಾರಲಾ!
ತಮ್ಮಾ: ಹೌದು, ಲೈಕ್ ಖಾರಾಬಾತ್, ಕೇಸರಿಬಾತ್, ಖಾಸ್‌ಬಾತ್, ದಿಸ್ ಈಸ್ ಬೆಸ್ಟ್ ಸುಪ್ರಭಾತ ಅಂತ ವರ್ಣಿಸ್ತಾರ ಬಿಡ...
ತಿಮ್ಮಾ: ಈ ಪ್ರಕಾರದ 120 ಸಿನೆಮಾ ವರ್ಷಕ್ಕ ಕೊಟ್ಟರ ಪ್ರೇಕ್ಷಕ ಏನ್ ಮಾಡಬೇಕಪಾ... ಬ್ಯಾರೆ ಭಾಷಾದಾಗ ಛೊಲೋ ಸಿನೆಮಾ ಅದಾವೇನಂತ ತೆಲುಗು, ತಮಿಳು, ಮಲೆಯಾಳಿ, ಮರಾಠಿ, ಹಿಂದಿ ಸಿನೆಮಾ ನೋಡ್ತಾನ...
ತಮ್ಮಾ: ಅದಕ್ಕ ನಮ್ಮ ಕನ್ನಡ ಸಿನೆಮಾದವರು ಆ ಸಿನೆಮಾದ 'ಹುಬಹು' ರಿಮೇಕ್ ಮಾಡ್ತಾರ...
ತಿಮ್ಮಾ: ಅಂದ್ರೇನು ಮಾಡ್ತಾರ?
ತಮ್ಮಾ: ಅಲ್ಲಿಯವರಂಗ ಶಾಟ್ ಇಡ್ತಾರ, ಸೆಟ್ಟಿಂಗ್ ಮಾಡ್ತಾರ, ಮ್ಯೂಜಿಕ್ ಅವರದಡ, ಹೀರೋಯಿನ್ ಎಲ್ಲಿಯವರೋ, ಹೀರೋ ಇಲ್ಲಿಯವರನ್ನೋದು ಬಿಟ್ಟರಡ ಹಾಡುವರು, ಬಾರಿಸುವರು, ಕುಣಿಯುವರು ಎಲ್ಲಾ ರಿಮೇಕ !!
ತಿಮ್ಮಾ: ಈ ಪರಿ ರಿಮೇಕ ಮಾಡಿದರೂ ನಮ್ಮಲ್ಯಾಕ ಆ ಸಿನೆಮಾ ಸಕ್ಸಸ್ ಆಗುದಿಲ್ಲ?
ತಮ್ಮಾ: ಯಾಕೆಂದರ ಎಲ್ಲಾನು ರಿಮೇಕ್ ಮಾಡೋ ಅವಸರದಾಗ 'ಕಥಿ' ಹೇಳೋದರಾಗ ಲದ್ದಿ ಒಗದಿರತಾರ.
ತಿಮ್ಮಾ: ಹೌದಡಡ?
ತಮ್ಮಾ: ಮತ್ತ ಕನ್ನಡ ಪ್ರೇಕ್ಷಕಗಡ ಎಲ್ಲಾನೂ ನಂಬರ್‌ಒನ್ ಇರಬೇಕಪಾ... ಸಿನೆಮಾ ಟೈಟಲ್ ಛಂದಿರಬೇಕು, ಹಾಡುಗಳು ಮಜಾ ಕೊಡಬೇಕು, ಐಟಂ ಸಾಂಗ್- ಐಟಂ ಎರಡೂ ಇರಬೇಕು. ಕಥಿ ಏವನ್ ಆಗಿರಬೇಕು, ಕ್ಯಾಮೆರಾ ವರ್ಕ್, ಸೆಟ್ಟಿಂಗ್, ಡ್ರೆಸ್, ಲೊಕೇಷನ್ನು ಎಲ್ಲಾನೂ ಮಸ್ತ್ ಇರಬೇಕು...
ತಿಮ್ಮಾ: ಇಷ್ಟೆಲ್ಲ ಬೆಸ್ಟ್ ಇದ್ದರ ಕನ್ನಡಿಗ ಕನ್ನಡ ಸಿನೆಮಾ ನೋಡ್ತಾನೇನು?
ತಮ್ಮಾ: ಇಲ್ಲಾ...!!
ತಿಮ್ಮಾ: ಯಾಕ...??
ತಮ್ಮಾ: ಅಷ್ಟೆಲ್ಲ ಇದ್ದು, ಮ್ಯಾಲೆ ಆ ಸಿನೆಮಾ ರಿಲೀಸ್ ಆದ ಥೇಟರ್ ಅವರ ಮನಿ ಹತ್ರ ಇದ್ದರ... ನೋಡಬಹುದು..!


-ಯಶವಂತ ಸರದೇಶಪಾಂಡೆ
 khullamkhullabevubella@gmail.com



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.