ಖುಷಿ

ಧೂಮ್-5

ಈಕೆಗೆ ಧಮ್ಮೆಳೆಯದಿದ್ದರೆ ದಿನದ ಕಾರ್ಯ ಆರಂಭವಾಗುವುದೇ ಇಲ್ಲ!

ಧೂಮ್-5
Published On :

ರಾಣಿ ಮುಖರ್ಜಿ
ಈಕೆಗೆ ಧಮ್ಮೆಳೆಯದಿದ್ದರೆ ದಿನದ ಕಾರ್ಯ ಆರಂಭವಾಗುವುದೇ ಇಲ್ಲ! ರಾಣಿಯ ಪೋಷಕರು ಸಾಕಷ್ಟು ವಿರೋಧ ಒಡ್ಡುತ್ತಿದ್ದಾರೆ. ರಾಣಿಯೂ ಹಲವು ಬಾರಿ 'ಇನ್ನು ಸಿಗರೇಟು ಮುಟ್ಟುವುದಿಲ್ಲ!' ಎಂದಿದ್ದಾಳೆ. ಹೇಳಿದ್ದಷ್ಟೇ ಬಂತು. ಹೊಗೆ ಸೇವನೆ ಮಾತ್ರ ನಿರಂತರ!

some ರಾಣಿ!
ನಟಿಯರ ನಟನೆ, ಬದುಕಿನ ರೀತಿಯನ್ನು ಅನುಕರಿಸುವ ಯುವತಿಯರು ಹೆಚ್ಚು. ಅವರೇನೆ ಮಾಡಿದರೂ, ಯಾವ ರೀತಿ ಬಟ್ಟೆ ಧರಿಸಿದರೂ ತಾನೂ ಹಾಗೇ ಮಾಡಬೇಕು ಎಂಬ ಹಂಬಲ. ಅಭಿಮಾನಿಗಳ ಮನಸ್ಥಿತಿ ಅಂಥದ್ದಾಗಿರುತ್ತದೆ. ಅಂಥ ಅಭಿಮಾನಿಗಳು ಇದ್ದಾರೆ, ತಮ್ಮ ನಡೆಯನ್ನು ಅನುಕರಿಸುತ್ತಾರೆ ಎಂಬ ಅರಿವಿದ್ದರೂ ಕೆಲವು ದುಶ್ಚಟಗಳನ್ನು ಬಿಡುವುದೇ ಇಲ್ಲ. 'ಧೂಮಪಾನ ಮಾಡುವುದು ಕಾಮನ್!' ಎಂಬಂತೆ ಬಿಂಬಿಸಿದ್ದಾರೆ ಈ ನಟಿಶಿರೋಮಣಿಯರು. ಚಂದನದ ಬೆಡಗಿಯರಿಗೆ ಹೊಗೆ ಸಹವಾಸವೇಕೆ ಎಂದು ಯುವಕರು ಅವಲತ್ತುಕೊಳ್ಳುತ್ತಿದ್ದರೆ, ಯುವತಿಯರು ಫ್ಯಾಶನ್ ಎಂದು ಅವರ ಹಾವಭಾವಗಳನ್ನು ತಮ್ಮ ಬದುಕಲ್ಲೂ ಅಳವಡಿಸಲು ನೋಡುತ್ತಾರೆ. ಧೂಮಪಾನಿ ಬಿನ್ನಾಣಗಿತ್ತಿಯರಾದ ಇವರಿಗೆ ಅದಾವಾಗ ಬುದ್ಧಿ ಬರುತ್ತದೋ!

ಸುಶ್ಮಿತಾ ಸೇನ್
'ಬ್ಯೂಟಿ ಕ್ವೀನ್‌' ಧೂಮಪಾನ ವ್ಯಸನಿ ಎಂದರೆ ವ್ಯಥೆಯಾಗುತ್ತದೆ. ಸೌಂದರ್ಯ ಮತ್ತು ನಟನೆ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿರುವ ಸುಶ್ಮಿತಾ ಸಾರ್ವಜನಿಕ ಸ್ಥಳಗಳಲ್ಲಿ ಯಾವ ಮುಚ್ಚುಮರೆ ಇಲ್ಲದೆ ಧಂ ಎಳೆಯುತ್ತಾಳೆ. ಆ ಬದುಕಿಗೆ ಹೊಂದಿಕೊಂಡಿದ್ದಾಳಂತೆ, ಅವಳಿಗೆ ಬೇಡ ಎಂದೆನಿಸಿದರೆ ಬಿಟ್ಟುಬಿಡುತ್ತಾಳಂತೆ! ಅವಳೇನೋ ಬಿಟ್ಟುಬಿಡುತ್ತಾಳೆನ್ನಿ... ಅವಳನ್ನು ನೋಡಿ ಕಲಿತ ಧೂಮಪಾನಿಗಳ ಕಥೆ?

ಕೊಂಕಣಾ ಸೇನ್ ಶರ್ಮಾ
ಈಕೆ ತನ್ನ ಮೊದಲ ಹೆರಿಗೆಯ ವೇಳೆ ಅನುಭವಿಸಿದ ಸಂಕಷ್ಟದಿಂದಾಗಿ ಸಿಗರೇಟನ್ನು ಹಚ್ಚಿದಳಂತೆ. ನಂತರದ ದಿನಗಳಲ್ಲಿ ದುಶ್ಚಟವಾಗಿ ಪರಿಣಮಿಸಿತು. ಸದ್ಯ ಎಷ್ಟೇ ಪ್ರಯತ್ನಪಟ್ಟರೂ ಸಿಗರೇಟು ಬಿಟ್ಟಿರಲಾಗುವುದಿಲ್ಲ ಎನ್ನುತ್ತಾಳೆ ರಣವೀರ್ ಶೌರಿಯ ಪತ್ನಿ.

ಮನಿಶಾ ಕೊಯಿರಾಲ
ಈಕೆ ಒಂದು ಕಾಲದಲ್ಲಿ ಚೈನ್ ಸ್ಮೋಕರ್. ಮದುವೆಯ ದಿನವೇ, ಮದುವಣಗಿತ್ತಿಯ ದಿರಿಸಿನಲ್ಲೇ, ನೆರೆದ ಬಂಧುಬಳಗದ ಮುಂದೆ ಗೆಳತಿಯರೊಂದಿಗೆ ಹೊಗೆ ಬಿಟ್ಟಿದ್ದಳು. ಖುಷಿಯ ವಿಚಾರ ಎಂದರೆ, ಈಗಿನ ಮನಿಶಾ ಧೂಮಪಾನದಿಂದ ಮಾರು ದೂರ ಸರಿದಿದ್ದಾಳೆ. ಅದೂ ಕ್ಯಾನ್ಸರ್ ಅನ್ನು ಗೆದ್ದ ನಂತರ ಎಂಬ ಮಾತನ್ನು ಸೇರಿಸಲೇಬೇಕು!

ಕಂಗನಾ ರನೌತ್
ಈಕೆಯ ಹೆಸರು ನೆನೆದಾಗೆಲ್ಲಾ ದುಃಖಿತರಾಗಿ ಧಮ್ಮು ಹೊಡೆಯುವ ಚಿತ್ರಣ. ಕಾರಣ, ಕಂಗನಾ ನಟಿಸಿರುವ ಫ್ಯಾಷನ್, ತನು ವೆಡ್ಸ್ ಮನು ಮತ್ತು ಗ್ಯಾಂಗ್‌ಸ್ಟರ್! ಸಮಸ್ಯೆಗೆ ಸಿಲುಕುವ ಸ್ತ್ರೀ ಪಾತ್ರಧಾರಿಯಾಗಿ, ಖಿನ್ನತೆಯಿಂದ ಧೂಮಪಾನ ವ್ಯಸನಿಯಾಗುವ ಮನೋಜ್ಞ ನಟನೆ ಆ ಸಿನಿಮಾಗಳಲ್ಲಿದೆ. ದುರಂತ ಎಂದರೆ ಕಂಗನಾ ನಿಜ ಜೀವನದಲ್ಲೂ ಸಿಗರೇಟ್ ಸಂಗಾತಿ. 'ಸಿಗರೇಟು ಸೇದುವುದು ವೈಯಕ್ತಿಕ ಹಕ್ಕು' ಎನ್ನುವಷ್ಟರ ಮಟ್ಟಿಗೆ ಹಾಳಾಗಿದ್ದಾಳೆ!

-ಮಂಜು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.