

ಕ್ಲಿಫ್ಸ್ ಆಫ್ ಮೊಹೆರ ಐರ್ಲೆಂಡ್ನ ಪಶ್ಚಿಮದಲ್ಲಿದೆ. ಅಟ್ಲಾಂಟಿಕ್ ಸಾಗರದ ತಟದಲ್ಲಿರುವ ಬಹುಮುಖ್ಯ ರಮ್ಯತಾಣ. ಐರ್ಲೆಂಡ್ ರಾಜಧಾನಿ ಡಬ್ಲಿನ್ನಿಂದ ಹತ್ತಿರಹತ್ತಿರ ನಾಲ್ಕು ತಾಸು ಪಯಣಿಸಿದರೆ ಕ್ಲಾರೆ (್ಛಟಛ್ಠಜ) ಕೌಂಟಿಯ ಲಿಸ್ಕ್ಯಾಂನೋರ (ಔ್ಝಡ್ಛಛಟಿಟ್ಟ್ಠಿ ) ಎಂಬ ಗ್ರಾಮದಲ್ಲಿ ಈ ಬೆಟ್ಟ ಕಾಣಿಸುತ್ತದೆ. ಮುಂಚೆ ಈ ಬೆಟ್ಟದ ಮೇಲೆ ಪಾಳು ಬಿದ್ದ ಕೋಟೆ ಇದ್ದುದರಿಂದ ಈ ಸ್ಥಳಕ್ಕೆ ಮೊಹೆರ ಎಂದು ಕರೆಯುತ್ತಾರೆ. ಸ್ಥಳೀಯ ಭಾಷೆಯಲ್ಲಿ 'ಮೊಹೆರ್' ಎಂದರೆ, ಪಾಳು ಬಿದ್ದ ಕೋಟೆ.
ಸುಮಾರು 120- 200 ಮೀಟರ್ ಎತ್ತರದ ಬೆಟ್ಟದ ಮೇಲಿನಿಂದ ರಮಣೀಯವಾದ ಅಟ್ಲಾಂಟಿಕ್ ಸಾಗರ
ವೀಕ್ಷಿಸಬಹುದು. ಈ ಬೆಟ್ಟ 8 ಕಿಲೋಮೀಟರ್ ವಿಸ್ತೀರ್ಣವಿದ್ದು, ನೀರಿನ ಕೊರೆತದಿಂದ ನಿರ್ಮಿತವಾದ ಸುಂದರ ಬಂಡೆಗಳು ಇಲ್ಲಿ ಬೆಟ್ಟಕ್ಕೆ ಅಲಂಕಾರಗೊಂಡಿವೆ.
ಇದರ ಮೇಲೆ ಹತ್ತೊಂಬತ್ತನೇ ಶತಮಾನದಲ್ಲಿ ಸರ್ ಕಾರ್ನೆಲಿಯಸ್ ಒ'ಬ್ರಿಯನ್ ನಿರ್ಮಿಸಿದ "ಒ'ಬ್ರಿಯನ್" ಟವರ್ ಇದೆ. ಇದನ್ನು ಹತ್ತಿ ಸಮೀಪದ ಸುಮಾರು ದ್ವೀಪಗಳನ್ನು ಮತ್ತು ಗಾಲವೆ ಬೇ ವೀಕ್ಷಿಸಬಹುದು. ಈ ಬೆಟ್ಟ ಹತ್ತಲು ಚಪ್ಪಡಿ ಕಲ್ಲಿನಿಂದ ಮಾಡಿದ ರೇಲಿಂಗ ಇದೆ. ಇದರ ಸಹಾಯದಿಂದಲೇ ಮೆಟ್ಟಿಲೇರಬೇಕಾಗುತ್ತದೆ. ನೀವು ಯಾವಾಗ ಬೇಕಾದರೂ ಹೋಗಿ, ಇಲ್ಲಿ ಬಿರುಗಾಳಿಯ ಹಾಗೆ ಗಾಳಿಯಿಂದ ಕೂಡಿದ ಚಳಿ ಇದ್ದೇ ಇರುತ್ತದೆ. ಸತತ ಮಳೆಯೂ ಇಲ್ಲಿನ ಸಾಮಾನ್ಯ ವಾತಾವರಣ. ಕೆಲವೊಮ್ಮೆ ಬೆಟ್ಟದ ಮೇಲೆ ಯಾರೂ ನಿಲ್ಲೋದಿಕ್ಕೂ ಆಗದಷ್ಟು ಗಾಳಿ ಬೀಸುತ್ತದೆ. ಆಗ ಕಲ್ಲಿನಿಂದ ಮಾಡಿದ ರೇಲಿಂಗ ಹಿಡಿದು ಕೆಳಗೆ ಕುಳಿತುಕೊಳ್ಳಬೇಕು. ಇಲ್ಲದಿದ್ದರೆ ಕಥೆ ಮುಗಿಯಿತು ಅಂತಲೇ ಲೆಕ್ಕ. ಹೀಗೆ ಗಾಳಿ ಜಾಸ್ತಿ ಆದಾಗ ಸಾಗರದ ನೀರು ಬೆಟ್ಟದ ಮೇಲೆ ಸಿಡಿಯುತ್ತೆ!
ಅಲ್ಲದೆ, ಮೊಹೆರದಲ್ಲಿ ಹವಾಮಾನ ಉಹಿಸೋದಕ್ಕೂ ಆಗದೆ ಇರೋವಷ್ಟು ವ್ಯತ್ಯಾಸಗೊಳ್ಳುತ್ತದೆ. ಅದು ಕ್ಷಣ ಕ್ಷಣದ ಬದಲಾವಣೆ. ಸ್ಥಳೀಯರು ಈ ಹವಾಮಾನ ಅನುಭವಿಸೋದಕ್ಕೆ ಅಂತಲೇ ಇಲ್ಲಿಗೆ ಬರುತ್ತಾರೆ. ಇಲ್ಲಿ ಬೆಟ್ಟದ ಅಡಿ ಯಲ್ಲಿ ವಸ್ತು ಸಂಗ್ರಹಾಲಯವಿದ್ದು ಸ್ಥಳದ ಬಗ್ಗೆ ಮಾಹಿತಿ ಇರುವ ಛಾಯಾಚಿತ್ರ ಹಾಗೂ ಕಥಾಚಿತ್ರ ಪ್ರದರ್ಶಿಸುತ್ತಾರೆ.
2009ರಲ್ಲಿ ಬಿಡುಗಡೆಯಾದ 'ಹ್ಯಾರಿ ಪಾಟರ್' ಸೇರಿದಂತೆ ಹಲವು ಚಿತ್ರಗಳ ಚಿತ್ರೀಕರಣ ಆಗಿದ್ದೂ ಇಲ್ಲೇ. ಈ ಸ್ಥಳದ ಪಕ್ಕದಲ್ಲಿ ಕೆರ್ರಿ ಕೌಂಟಿಯ 'ಬ್ಯಾಲಿಬುನ್ನಿಯನ್' (ಇಛಟಟಣಛ್ಡಿಟಿಟ್ಝ್ಟಿಟಿ) ಎಂಬ ಸ್ಥಳವಿದೆ. ಜಗತ್ತಿನ ದೊಡ್ಡ ಗಾಲ್ಫ್ ಮೈದಾನದಲ್ಲಿ ಇದೂ ಒಂದು.
1998ರಲ್ಲಿ ಅಂದಿನ ಅಮೆರಿಕದ ಅಧ್ಯಕ್ಷರಾದ ಬಿಲ್ ಕ್ಲಿಂಟನ್ ಇಲ್ಲಿ ಗಾಲ್ಫ್ ಆಡಿದ್ದರಂತೆ. ಅದರ ಸ್ಮರಣಾರ್ಥ ಕ್ಲಿಂಟನ್ರ ಪುತ್ಥಳಿಯನ್ನು ಸ್ಥಳಿಯ ಆರಕ್ಷಕ ಠಾಣೆಯ ಎದುರಿನಲ್ಲಿ ನಿಲ್ಲಿಸಲಾಗಿದೆ. ಇಲ್ಲಿಗೆ ಏಪ್ರಿಲ್ನಿಂದ ಅಕ್ಟೋಬರ್ ನಡುವೆ ಭೇಟಿ ನೀಡುವುದು ಸೂಕ್ತ.
= ಪ್ರವೀಣ್ ಸಜ್ಜನ್
sajjanpraveen@hotmail.com