social_icon

ಅತಿಯಾದ ವ್ಯಾಯಾಮದ ಅಡ್ಡಪರಿಣಾಮಗಳು: ಫಿಟ್ನೆಸ್ ಆಮಿಷಕ್ಕೆ ಬಲಿಯಾಗುತ್ತಿದೆಯೇ ಯುವಪೀಳಿಗೆ?

ಇದುವರೆಗೂ ವ್ಯಾಯಾಮ ಮಾಡದೆ ಆಲಸಿಯಾಗಿದ್ದರೆ ಬೊಜ್ಜು ಶೇಖರಣೆಯಾಗಿ ಹೃದಯದ ಸಮಸ್ಯೆಗಳು ಉಂಟಾಗಬಹುದೆಂದು ಹೇಳಲಾಗುತ್ತಿತ್ತು. ಅಂತೆಯೇ ಅತಿಯಾದ ವ್ಯಾಯಾಮ ಮಾಡುವುದರಿಂದಲೂ ಹೃದಯದ ಸಮಸ್ಯೆ ಬರುತ್ತದೆ ಎನ್ನುವ ಸಂಗತಿಯನ್ನು ಹಲವರು ನಂಬಲಿಕ್ಕಿಲ್ಲ. ಆದರೆ ಅದು ವಾಸ್ತವ.

Published: 16th November 2021 03:41 PM  |   Last Updated: 17th November 2021 05:02 PM   |  A+A-


ಸಾಂದರ್ಭಿಕ ಚಿತ್ರ

Posted By : harshavardhan
Source : The New Indian Express

ಲೇಖಕ: ಲ್ಯೂಕ್ ಕುಟಿನ್ಹೊ, ಲೈಫ್ ಸ್ಟೈಲ್ ಮಾರ್ಗದರ್ಶಕರು


ದೈಹಿಕ ವ್ಯಾಯಾಮದ ವಿಷಯಕ್ಕೆ ಬಂದಾಗ ನೂರು ಮಂದಿ ನೂರು ಅಭಿಪ್ರಾಯಗಳನ್ನು ಮುಂದಿಡುತ್ತಾರೆ. ಬಕೆಟ್ ಗಟ್ಟಲೆ ಬೆವರು ಹರಿಸುವುದರಿಂದ ಹಿಡಿದು, ವ್ಯಾಯಾಮ ಮಾಡದೇ ಆಲಸಿಯಾಗಿ ಬಿದ್ದುಕೊಂಡಿರುವುದೇ ಲೇಸು ಎಂಬಲ್ಲಿಯವರೆಗೆ ಆರ್ಗ್ಯುಮೆಂಟುಗಳು ನಮ್ಮ ನಡುವೆ ಇವೆ. 

ಇದನ್ನೂ ಓದಿ: ಕಳೆದ ಆರು ತಿಂಗಳಲ್ಲಿ ಶೇ.35ರಿಂದ ಶೇ.40ರಷ್ಟು ಮಧುಮೇಹ, ಅಧಿಕ ರಕ್ತದೊತ್ತಡ ರೋಗಿಗಳ ಹೆಚ್ಚಳ: ಕೋವಿಡ್ ಕಾರಣ? 

Too much of anything is bad ಎಂಬ ಆಂಗ್ಲೋಕ್ತಿಯೇ ಇದೆ. ಅತಿಯಾದರೆ ಅಮೃತವೂ ವಿಷ ಎನ್ನುವ ನಾಣ್ಣುಡಿಯೇ ನಮ್ಮಲ್ಲಿಲ್ಲವೇ. ಈ ಮಾತು ವ್ಯಾಯಾಮದ ವಿಚಾರಕ್ಕೆ ಬಂದಾಗ ಹೆಚ್ಚು ಸೂಕ್ತ ಎನ್ನಿಸುತ್ತದೆ. 

ಸರಿಯಾಗಿ, ದೇಹಕ್ಕೆ ಎಷ್ಟು ಅಗತ್ಯವೋ ಅಷ್ಟು ವ್ಯಾಯಾಮವನ್ನೇ ಮಾಡಿಕೊಂಡು ಹೋದರೆ ಯಾವುದೇ ತೊಂದರೆ ಬಾರದು. ಆ ಬಗೆಯ ವ್ಯಾಯಾಮದಿಂದ ರಕ್ತಪರಿಚಲನೆ, ಜೀರ್ಣಾಂಗ ವ್ಯವಸ್ಥೆ ಮತ್ತು ದೇಹದಿಂದ ಟಾಕ್ಸಿನ್ಸ್ ಗಳನ್ನು ಹೊರಹಾಕುವ ಪ್ರಕ್ರಿಯೆ ಎಲ್ಲವೂ ಸರಾಗವಾಗಿ ನಡೆಯುತ್ತದೆ. ಹಾಗಾದರೆ ನಮ್ಮ ನಮ್ಮ ದೇಹಕ್ಕೆ ಎಷ್ಟು ವ್ಯಾಯಾಮ ಅಗತ್ಯ ಎನ್ನುವುದೇ ನಮ್ಮ ಮುಂದಿರುವ ಅತಿ ದೊಡ್ಡ ಸವಾಲು. 

ಇದನ್ನೂ ಓದಿ: ಯುವಜನತೆಯಲ್ಲಿ ಹೆಚ್ಚುತ್ತಿರುವ ಹೃದಯಾಘಾತ: ಕಾರಣವೇನು, ತಪ್ಪಿಸಲು ಏನು ಮಾಡಬಹುದು? 

ವ್ಯಾಯಾಮ ಅತಿಯಾದರೆ ದೇಹದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ ಎನ್ನುವ ಸಂಗತಿ ಈಗಾಗಲೇ ನಿಮಗೆ ಅರ್ಥವಾಗಿರುತ್ತದೆ. ಅದರಿಂದ ಹೃದಯದ ಮೇಲೆ ಒತ್ತಡ ಬೀಳುತ್ತದೆ. ಅಮೆರಿಕದಲ್ಲಿ ನಡೆದ ಸಂಶೋಧನೆಯೊಂದು ಅತಿಯಾದ ವ್ಯಾಯಾಮದಿಂದ ಹೃದಯದ ತೊಂದರೆ ಉಂಟಾಗಬಹುದು ಎಂಬುದನ್ನು ದೃಢಪಡಿಸಿದೆ. 

ಇದನ್ನೂ ಓದಿ: ವೈದ್ಯಕೀಯ ಕ್ಷೇತ್ರದ ಅದ್ಭುತ: ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಗೆ ಹಂದಿ ಮೂತ್ರಪಿಂಡ ಕಸಿ ಆಪರೇಷನ್‌ ಸಕ್ಸಸ್‌!

ಇದುವರೆಗೂ ವ್ಯಾಯಾಮ ಮಾಡದೆ ಆಲಸಿಯಾಗಿದ್ದರೆ ಬೊಜ್ಜು ಶೇಖರಣೆಯಾಗಿ ಹೃದಯದ ಸಮಸ್ಯೆಗಳು ಉಂಟಾಗಬಹುದೆಂದು ಹೇಳಲಾಗುತ್ತಿತ್ತು. ಅಂತೆಯೇ ಅತಿಯಾದ ವ್ಯಾಯಾಮ ಮಾಡುವುದರಿಂದಲೂ ಹೃದಯದ ಸಮಸ್ಯೆ ಬರುತ್ತದೆ ಎನ್ನುವ ಸಂಗತಿಯನ್ನು ಹಲವರು ನಂಬಲಿಕ್ಕಿಲ್ಲ. ಆದರೆ ಅದು ವಾಸ್ತವ.

ಇದನ್ನೂ ಓದಿ: ವರ್ಕ್ ಫ್ರಮ್ ಹೋಮ್ ಎನ್ನುವ ಸ್ಲೋ ಪಾಯ್ಸನ್: ಉದ್ಯೋಗಿಗಳಲ್ಲಿ ಮಾನಸಿಕ ಸಮಸ್ಯೆಗಳ ಹೆಚ್ಚಳ

ವ್ಯಾಯಾಮ ಶಾಲೆಗಳಲ್ಲಿ ಹೈ ಇಂಟೆನ್ಸಿಟಿ ವರ್ಕೌಟ್ ಗಳಲ್ಲಿ ಭಾಗಿಯಾಗುವವರಿಗೆ coronary artery calcification (CAC) ತೊಂದರೆ ಬರುವ ಸಾಧ್ಯತೆ ಹೆಚ್ಚು ಎಂದು ಅಧ್ಯಯನ ತಿಳಿಸಿದೆ. ಮಧ್ಯವಯಸ್ಕ ಯುವಕರು, ಕಿರಿಯರು ಚಿಕ್ಕ ವಯಸ್ಸಿನಲ್ಲಿಯೇ ಹಠಾತ್ ಹೃದಯ ತೊಂದರೆಗಳಿಂದ ಸಾವನ್ನಪ್ಪುತ್ತಿರುವ ಪ್ರಕರನಗಳು ಹೆಚ್ಚುತ್ತಿರುವುದಕ್ಕೆ ವ್ಯಾಯಾಮವೂ ಕಾರಣ ಎನ್ನುವ ಸಂಗತಿಯಲ್ಲಿ ಸತ್ಯಾಂಶವಿದೆ. 

ಇದನ್ನೂ ಓದಿ:  ಮಹಿಳೆಯರು ತಿಳಿದಿರಬೇಕಾದ 4 ಸಂತಾನ ನಿಯಂತ್ರಣ ಮಾರ್ಗಗಳು

ಮಾನಸಿಕ ಅಥವಾ ದೈಹಿಕ, ಯಾವುದೇ ಬಗೆಯ ಒತ್ತಡವಾಗಲಿ ಗುಣವಾಗಲು ಅದಕ್ಕೆ ಸಮಯ ತಗುಲುತ್ತದೆ. ಆ ಸಮಯವನ್ನು ನಾವು ನೀಡಬೇಕು. ಆದರೆ ತಮ್ಮ ಸಮಸ್ಯೆಯನ್ನು ಗುರುತಿಸಿ ಗುಣವಾಗುವುದಕ್ಕೆ ಸಮಯ ನೀಡುವದರಲ್ಲಿ ನಮ್ಮ ಯುವಪೀಳಿಗೆ ಹಿಂದೆ ಬೀಳುತ್ತಿದೆ. ಅತಿಯಾದ ಕಸರತ್ತಿನ ಜೊತೆಗೆ ನಿದ್ರಾಹೀನತೆ, ಡಯೆಟ್ ಸೇರಿಕೊಂಡರೆ ಅದು ಡೆಡ್ಲಿ ಕಾಂಬಿನೇಷನ್. ಸುಂದರ ಫಿಟ್ ಬದುಕಿನ ಆಮಿಷಕ್ಕೆ ಬಲಿಯಾಗಿ ಯುವಪೀಳಿಗೆ ಅನವಶ್ಯಕ ಒತ್ತಡಗಳನ್ನು ತಂದುಕೊಳ್ಳುತ್ತಿರುವುದು ವಿಪರ್ಯಾಸ. 

ಇದನ್ನೂ ಓದಿ: ಪೌಷ್ಟಿಕಾಂಶದ ಕೊರತೆ, ಬಡತನದಿಂದ ರಾಜ್ಯದಲ್ಲಿ ಮಕ್ಕಳ ಅಂಧತ್ವ ಹೆಚ್ಚಳ

ಪೋಷಕಾಂಶ ಮತ್ತು ವ್ಯಾಯಾಮ

ಓವರ್ ಆಗಿ ವ್ಯಾಯಾಮ ಮಾಡುವುದು ಮತ್ತು ಡಯೆಟ್ ಮಾಡುವುದರಿಂದ ದೇಹಕ್ಕೆ ಸಹಾಯವಾಗುವುದಿಲ್ಲ. ನಿಜ ಹೇಳಬೇಕೆಂದರೆ ನಾವು ತೆಗೆದುಕೊಳ್ಳುವ ಪೋಷಕಾಂಶಯುಕ್ತ ಆಹಾರವು ನಾವು ಮಾಡುವ ವ್ಯಾಯಾಮದ ಮೇಲೆ ಪ್ರಭಾವ ಬೀರುತ್ತದೆ. ಏರೋಬಿಕ್ಸ್, ಯೋಗ, ಬಾಡಿ ವೇಯ್ಟ್ ಹೀಗೆ ಯಾವುದೇ ವ್ಯಾಯಾಮವಾಗಲಿ ಅವುಗಳನ್ನು ಮಾಡಿದಾಗ ಹೆಚ್ಚು ಪೋಷಕಾಂಶಗಳನ್ನು ಬೇಡುತ್ತದೆ. ದೈಹಿಕ ಚಟುವಟಿಕೆಗಳಿಗೂ, ನಮ್ಮ ಆಹಾರ ಪದ್ಧತಿಗೂ ಹೊಂದಾಣಿಕೆ ಇಲ್ಲದೇ ಹೋದಾಗ ಅನಾರೋಗ್ಯ ಉಂಟಾಗುತ್ತದೆ. ಡಯೆಟ್ ಮೆತ್ತು ಜಿಮ್ಮಿನಲ್ಲಿ ಬೆವರು ಹರಿಸುವುದರಿಂದ ತೂಕ ಕಡಿಮೆಯಾಗಬಹುದು ನಿಜ. ಆದರೆ ಅದರಿಂದ ಆರೋಗ್ಯ ಸಮಸ್ಯೆಗಳು ಕಂಡುಬರುವುದು ಖಚಿತ.

ವರ್ಕೌಟ್ ಮಾಡುವವರಿಗೆ ಆಹಾರ ಟಿಪ್ಸ್

 • ಕಾರ್ಬೊಹೈಡ್ರೇಟ್ಸ್ ಇರುವ ಆಹಾರ ಸೇವಿಸಿ. ಹಣ್ಣುಗಳು, ಖರ್ಜೂರ, ಆಲೂಗಡ್ಡೆ ಮತ್ತಿತರ ಆಹಾರ ಪದಾರ್ಥಗಳಲ್ಲಿ ಕಾರ್ಬೊಹೈಡ್ರೇಟ್ ಇರುತ್ತವೆ.
 • ಭೋಜನದಲ್ಲಿ ಕಾರ್ಬೊಹೈಡ್ರೇಟ್ಸ್ ಮತ್ತು ಪ್ರೋಟೀನ್ ಕಾಂಬಿನೇಷನ್ ಇದ್ದರೆ ಉತ್ತಮ
 • ವರ್ಕೌಟ್ ಮಾಡಿ ದಣಿದ ದೇಹಕ್ಕೆ ವಿಟಮಿನ್ ಎ ಮತ್ತು ಸಿ, ಚೈತನ್ಯ ತುಂಬಬಲ್ಲುದು. ವಿಟಮಿನ್ ಡಿ ಅನ್ನೂ ಸಿಗುವಂತೆ ನೋಡಿಕೊಳ್ಳುವುದರಿಂದ ರೋಗನಿರೋಧಕ ಶಕ್ತಿ ದೊರೆಯುವುದಲ್ಲದೆ, ಮೂಳೆಗಳು ಬಲಶಾಲಿಯಾಗುವುದು.
 • ವರ್ಕೌಟ್ ಮಾಡುವುದರಿಂದ ಮಾಂಸ ಖಂಡಗಳಲ್ಲಿ ಸಣ್ಣ ಮಟ್ಟಿಗಿನ ಸೀಳನ್ನು(micro-tears) ಉಂಟು ಮಾಡುತ್ತದೆ ಎನ್ನುವ ಸಂಗತಿ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಅದು ಕಾಮನ್ ಕೂಡಾ. ಅದರಿಂದಲೇ ಮಾಂಸಖಂಡಗಳು ಬೆಳೆದು ಸತ್ವಯುತವಾಗುವುದು. ಪೋಷಕಾಂಶಯುಕ್ತ ಆಹಾರ ಸೇವಿಸಿದಾಗ micro-tears ಗಳು ಬಹಳ ಬೇಗನೆ ಗುಣ ಹೊಂದುವವು. 

ಹಠಾತ್ ಹೃದಯ ಸ್ಥಂಬನ ಮತ್ತು ಹೃದಯಾಘಾತ

 • ವಿರಾಮವನ್ನು ನಿರ್ಲಕ್ಷಿಸುವುದು: 
  ವಿರಾಮವನ್ನು ನಮ್ಮಲ್ಲಿ ಅನೇಕರು ನಿರ್ಲಕ್ಷಿಸುತ್ತಾರೆ. ಆದರೆ ವಿರಾಮ ಬಹಳ ಮುಖ್ಯ. ರಾತ್ರಿಯ ನಿದ್ದೆ ಮಾಡದೆ ಇದ್ದರೂ ಮರುದಿನ ಜಾಗಿಂಗ್, ವ್ಯಾಯಾಮ ಮಾದುವುದು ತುಂಬಾ ಅಪಾಯ. ಯಾವುದೇ ಬಗೆಯ ವ್ಯಾಯಾಮಕ್ಕೆ ವಿರಾಮ ತುಂಬಾ ಮುಖ್ಯವಾಗುತ್ತದೆ. ವಿರಾಮ ಪಡೆದುಕೊಂಡ ನಂತರ ವ್ಯಾಯಾಮ ಮಾಡುವುದರಿಂದ ಅದರ ಪ್ರಯೋಜನ ಏಹಕ್ಕೆ ಸಿಗುತ್ತದೆ. ಇಲ್ಲದೇ ಹೋದರೆ ನಮ್ಮ ದೇಹವನ್ನು ನಾವು ಟೇಕನ್ ಫಾರ್ ಗ್ರ್ಯಾಂಟೆಡ್ ಮಾದರಿ ತಿಳಿದುಕೊಂಡಂತಾಗುತ್ತದೆ. 

ನಿದ್ರಾಹೀನತೆ: 

 • ಚೆನ್ನಾಗಿ ನಿದ್ದೆ ಮಾಡಬೇಕು. ನಿದ್ದೆ ಮಾಡುವುದರಿಂದ ಹೃದಯಾಘಾತವನ್ನು ತಡೆಗಟ್ತಬಹುದು ಎನ್ನುವುದು ಅಚ್ಚರಿ ತರಬಹುದು. ನಿದ್ದೆಗೆಟ್ಟು ಕೆಲಸ ಮಾಡುವ ಸಂಸ್ಕೃತಿಯನ್ನು ಯಾವುದೇ ಕಾರಣಕ್ಕೆ ಪ್ರೋತ್ಸಾಹ ನೀಡಬಾರದು. ಇಂದಿನ ಪೀಳಿಗೆಯವರು ನಿದ್ದೆಗೆ ಪ್ರಾಮುಖ್ಯತೆ ನೀಡುತ್ತಿಲ್ಲ. ಜೀವನದಲ್ಲಿ ಸಾಧನೆ ಮಾಡಬೇಕೆನ್ನುವ ತುಡಿತಕ್ಕೆ ಬಿದ್ದು ಆರೋಗ್ಯವನ್ನೂ, ನಿದ್ದೆಯನ್ನೂ ನಿರ್ಲಕ್ಷಿಸುತ್ತಾರೆ. ಅದು ಸರಿಯಲ್ಲ. ತಾವು ದಿನಕ್ಕೆ ನಾಲ್ಕೇ ಗಂಟೆ ಮಲಗುವುದು, ಮೂರೆ ಗಂಟೆ ಮಲಗುವುದು ಎಂದು ಹೇಳಿಕೊಳ್ಳುವುದನ್ನು ಕೇಳಿರಬಹುದು. ಇದು ತಪ್ಪು ಸಂಸ್ಕೃತಿ.  ಎಲ್ಲಾ ಅಂಗಗಳಂತೆಯೇ ಹೃದಯಕ್ಕೂ ವಿರಾಮದ ಅಗತ್ಯವಿದೆ. ನಾವು ನಿದ್ದೆ ಹೋಗುವ ಸಮಯದಲ್ಲಿ ಹೃದಯಕ್ಕೂ ವಿರಾಮ ಸಿಗುತ್ತದೆ. 

ವರ್ಕೌಟ್ ಮಾಡುವಾಗ ಇವು ನೆನಪಲ್ಲಿರಲಿ

 • ವ್ಯಾಯಾಮ ಆದಷ್ಟೂ ಸರಳವಾಗಿರಲಿ
 • ಓವರ್ ಎಕ್ಸರ್ ಸೈಜ್ ಅಥವಾ ಎಕ್ಸರ್ ಸೈಜ್ ಮಾಡದೇ ಇರುವುದು ಎರಡನ್ನೂ ಮೈಗೂಡಿಸಿಕೊಳ್ಳಬಾರದು
 • ದಿನಕ್ಕೆ ಒಂದು ಗಂಟೆ ಚೆನ್ನಾಗಿ ವ್ಯಾಯಾಮ ಮಾಡಿ ದಿನವಿಡೀ ಕದಲದಂತೆ ಕೂತುಕೊಳ್ಳುವುದೂ ಸರಿಯಲ್ಲ.
 • ಪ್ರತಿ ಗಂಟೆಗೊಮ್ಮೆ ಓಡಾಡುತ್ತಿರಿ
 • ದಿನಕ್ಕೆ 10,000 ಹೆಜ್ಜೆ ಇಡಲು ಪ್ರಯತ್ನಿಸಿ (ಹೆಜ್ಜೆ ಲೆಕ್ಕ ಹಾಕಲು ಸ್ಟೆಪ್ ಟ್ರ್ಯಾಕರ್ ಬಳಸಬಹುದು)
 • ದೇಹವನ್ನು ದಂಡಿಸದಿರಿ
 • ವಿರಾಮ ಮತ್ತು ವ್ಯಾಯಾಮದಿಂದ ಚೇತರಿಸಿಕೊಳ್ಳುವುದು ಮುಖ್ಯ

ಪರೀಕ್ಷೆ ಮಾಡಿಸಿಕೊಳ್ಳದೇ ಇರುವುದು

ಹೃದಯದ ಸಮಸ್ಯೆಯನ್ನು ನಾವು ನಿರ್ಲಕ್ಷಿಸುತ್ತೇವೆ. ಅದರಲ್ಲೂ ಕುಟುಂಬದಲ್ಲಿ ಯಾರಿಗಾದರೂ ಹೃದಯದ ಸಮಸ್ಯೆ ಇದ್ದರೆ ಖಂಡಿತವಾಗಿ ಪರೀಕ್ಷಿಸಿಕೊಳ್ಲಬೇಕು. ಕಾಲ ಕಾಲಕ್ಕೆ ಹೃದಯ ತಪಾಸಣೆಯನ್ನು ಎಲ್ಲಾ ವಯೋಮಾನದವರೂ ಈ ಕಾಲದಲ್ಲಿ ಮಾಡಿಸಿಕೊಳ್ಲಬೇಕು. 

ನಾವು ನಮ್ಮ ಎಲ್ಲಾ ಕಾರ್ಕಕ್ರಮಗಳು, ಕೆಲಸಗಳನ್ನು ಮುಂದೂಡಬಹುದು. ಆದರೆ ಹೃದಯ ತಪಾಸಣೆಯನ್ನು ಮುಂದೂಡಬಾರದು.

ಕೊರೊನಾ ನಂತರ ಕಾಲದ ಸಮಸ್ಯೆ

ಕೊರೊನಾದಿಂದ ಗುಣಮುಖರಾದವರು ಯಾವುದೇ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸುವ ಹಾಗೆಯೇ ಇಲ್ಲ. ಇಂದು ಎಲ್ಲಾ ನಾರ್ಮಲ್ ಇರುವಂತೆ ಕಂಡರೂ ದೇಹದೊಳಗೆ ನಮಗೆ ಗೊತ್ತಿಲ್ಲದಂತೆ ಹಲವು ಸಂಗತಿಗಳು ಜರುಗುತ್ತಿರುತ್ತವೆ. 

ಕೊರೊನಾದಿಂದ ಹೆಚ್ಚಿನ ಅಪಾಯ ಬಂದಿರುವುದು ಹೃದಯಕ್ಕೆ ಎನ್ನುವ ಸಂಗತಿ ನೆನಪಲ್ಲಿರಲಿ. ಎದೆಯುರಿಯೇ ಇರಲಿ ಹೃದಯದ ಯಾವುದೇ ಸಮಸ್ಯೆಗಳನ್ನು ಹಗುರವಾಗಿ ಪರಿಗಣಿಸಬಾರದು. ಕೊರೊನಾದಿಂದ ಗುಣಮುಖರಾದವರಲ್ಲಿ ರಕ್ತ ಕ್ಲಾಟ್ ಆಗುತ್ತಿರುವುದು ಕಂಡುಬಂಡಿದೆ. ಇದಧೃದಯಾಘಾತಕ್ಕೆ ಕಾರಣವಾಗಬಹುದು. ಹೀಗಾಗಿ ಆಗಾಗ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ. 

ಎಚ್ಚರಿಕೆ ವಹಿಸಬೇಕಾದ ಚಿನ್ಹೆಗಳು (ಸ್ವಂತ ನಿರ್ಧಾರದಿಂದ ಕ್ರಮ ಕೈಗೊಳ್ಳಿ)

 • ಉಸಿರಾಟ ಕಿರಿದಾಗುವುದು
 • ದವಡೆಗಳಲ್ಲಿ ನೋವು
 • ಅಸಿಡಿಟಿಗೆ ಸಂಬಂಧಿಸದ ಎದೆಯುರಿ
 • ಕೈ ಕಾಲುಗಳಲ್ಲಿ ಸ್ಪರ್ಶವಿಲ್ಲದೇ ಇರುವುದು
 • ಎದೆ ಬಿಗಿತ

ಆರೋಗ್ಯ ವಿಚಾರದಲ್ಲಿ ರೋಲ್ ಮಾಡೆಲ್ ಬೇಡ

ಎಲ್ಲರಿಗೂ ಒಂದಲ್ಲ ಒಂದು ವಿಚಾರದಲ್ಲಿ ರೋಲ್ ಮಾಡೆಲ್ ಆದ ವ್ಯಕ್ತಿಯೊಬ್ಬರು ಇರುತ್ತಾರೆ. ಅವರ ಜೀವನಶೈಲಿಯನ್ನು ನಾವು ಅನುಕರಿಸಲು ಯತ್ನಿಸುತ್ತೇವೆ. ಹಲವು ವಿಚಾರಗಳಲ್ಲಿ ಇದು ಒಳ್ಲೆಯದು ಆದರೆ ಆರೋಗ್ಯ, ವ್ಯಾಯಾಮ ವಿಚಾರದಲ್ಲಿ ನಾವು ಯಾರನ್ನೂ ಫಾಲೋ ಮಾಡದಿರುವುದು ಒಳ್ಳೆಯದು. 

ಬಾಡಿ ಬಿಲ್ಡರ್, ಅಥ್ಲೀಟ್ ಗಳ ಜೀವನ ಹೊರಗಿನಿಂದ ನೋಡಲು ಆಕರ್ಷಕವಾಗಿರುತ್ತದೆ. ಅವರು ತಮ್ಮಂತಾಗಲು ಏನು ಮಾಡಬೇಕೆಂಬುದರ ಟಿಪ್ಸ್ ಕೊಡುತ್ತಾರೆ. ಆದರೆ ಎಲ್ಲರಿಗೂ ಸೂಟ್ ಆಗುತ್ತೆ ಎನ್ನುವಂತಿಲ್ಲ. ಏಕೆಂದರೆ ಪ್ರತಿಯೊಬ್ಬರ ದೇಹವೂ ವಿಭಿನ್ನವಾದುದು. ಜೈವಿಕವಾಗಿ ನಾವೆಲ್ಲರೂ ಒಬ್ಬರಿಗಿಂತ ಒಬ್ಬರು ಭಿನ್ನ. 

ಸರಳವಾಗಿ ಮಾಡಬಹುದಾದ ವ್ಯಾಯಾಮಗಳು

 • ವಾಕಿಂಗ್
 • ಯೋಗ
 • ಬಾಡಿ ವೇಯ್ಟ್ ತರಬೇತಿ
 • ನೃತ್ಯ

ಸಿಕ್ಸ್ ಪ್ಯಾಕ್, ಸೈಜ್ ಜೀರೊ ಫಿಗರ್ ಉತ್ತಮ ಆರೋಗ್ಯಕ್ಕೆ ಫಿಟ್ ನೆಸ್ ಗೆ ಮಾನದಂಡವಾಗದು ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಲಬೇಕು. ದಿನಂಪ್ರತಿ ಜಿಮ್ಮಿಗೆ ಹೋಗುವುದು ಕೂಡಾ ಆರೋಗ್ಯಕರ ಲಕ್ಷಣವಲ್ಲ. 

ಜಿಮ್ಮಿನಲ್ಲಿ ಹೆಚ್ಚು ಭಾರದ ವೇಯ್ಟ್ ಎತ್ತುವ ಹಲವು ಮಂದಿ ಪುಲ್ ಅಪ್ ಮಾಡಲಾಗದೆ ಹೆಣಗಾಡುವವರಿದ್ದಾರೆ. ಹೀಗಾಗಿ ಜಿಮ್ ಹೋದರೆ ಆರೋಗ್ಯವಂತರಾಗಬಹುದು ಎನ್ನುವುದು ಸುಳ್ಳು. 

ನಮ್ಮ ಜೀವನಶೈಲಿ ದೋಷಪೂರಿತವಾಗಿದ್ದರೆ ಹೃದಯದ ಮೇಲೆ ಅದರ ನೇರ ಪರಿಣಾಮ ಉಂಟಾಗುತ್ತದೆ. ದೈಹಿಕ ಒತ್ತಡ ಮಾತ್ರವಲ್ಲದೆ ಮಾನಸಿಕ ಒತ್ತಡವೂ ಹೃದಯಕ್ಕೆ ತೊಂಡರೆಯೊಡ್ಡುತ್ತಿದೆ. 


Stay up to date on all the latest ಜೀವನಶೈಲಿ news
Poll
New parliament building

ಹೊಸ ಸಂಸತ್ ಕಟ್ಟಡದ ಉದ್ಘಾಟನೆಯನ್ನು ಬಹಿಷ್ಕರಿಸುವ ಹಲವಾರು ವಿರೋಧ ಪಕ್ಷಗಳ ನಿರ್ಧಾರವು ಸಮರ್ಥನೀಯವೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp