ನಿಮ್ಮ ಹತ್ರ ಇರೋ Gold ಅಸಲಿ ಅಂತ ಪತ್ತೆಹಚ್ಚೋದು ಹೇಗೆ? ಇಲ್ಲಿದೆ ಬಂಗಾರದ ಶುದ್ಧತೆ ಚೆಕ್ ಮಾಡುವ ಟಿಪ್ಸ್

ಚಿನ್ನ ಖರೀದಿಸುವಾಗ ಎಲ್ಲರಿಗೂ ಇರುವ ದೊಡ್ಡ ಭಯವೆಂದರೆ ಚಿನ್ನ ಅಸಲಿಯೋ ನಕಲಿಯೋ ಎಂಬುದು.! ಅಂಗಡಿಯವರು ಹೇಳಿದ ಕ್ಯಾರೆಟ್ ನಷ್ಟು ಶುದ್ಧತೆ ಇದೆಯೋ ಇಲ್ಲವೋ ಎಂದು ತಿಳಿಯದೆ ಅನೇಕರು ಮೋಸ ಹೋಗುತ್ತಾರೆ. ಆದರೆ ಚಿನ್ನದ ಶುದ್ಧತೆಯನ್ನು ಪತ್ತೆ ಹಚ್ಚಲು ಕೆಲವು ಸುಲಭ ವಿಧಾನಗಳು ಇಲ್ಲಿವೆ:
Gold
ಚಿನ್ನOnline Desk
Updated on

Gold Purity Check: ಯುದ್ಧ ಹಾಗೂ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ. ಅದರಲ್ಲೂ, ದಿನದಿಂದ ದಿನಕ್ಕೆ ಭಾರೀ ಏರಿಕೆ ಆಗುತಿರುವ ಈ ಸಮಯದಲ್ಲಿ ಬಂಗಾರದ ರೇಟ್ ಕೊಂಚ ಕಡಿಮೆ ಆಯ್ತು ಅಂದ ತಕ್ಷಣವೇ ಗ್ರಾಹಕರು ದೊಡ್ಡ ಮಟ್ಟದಲ್ಲಿ ಖರೀದಿಗೆ ಮುಂದಾಗುತ್ತಾರೆ. ಆದರೆ, ಹೀಗೆ ಖರೀದಿ ಮಾಡುವ ವೇಳೆ, ನಾವು ಪರ್ಚೇಸ್ ಮಾಡುವ ವೇಳೆ ಎಲ್ಲರಿಗೂ ಕಾಡುವ ದೊಡ್ಡ ಭಯವೆಂದರೆ, ಆ ಚಿನ್ನ ಅಸಲಿಯೋ ನಕಲಿಯೋ ಎಂಬುದು.! ಅಂಗಡಿಯವರು ಹೇಳಿದ ಕ್ಯಾರೆಟ್ ನಷ್ಟು ಶುದ್ಧತೆ ಇದೆಯೋ ಇಲ್ಲವೋ ಎಂದು ತಿಳಿಯದೆ ಅನೇಕರು ಮೋಸ ಹೋಗುತ್ತಾರೆ. ಆದರೆ ಚಿನ್ನದ ಶುದ್ಧತೆಯನ್ನು ಪತ್ತೆ ಹಚ್ಚಲು ಕೆಲವು ಸುಲಭ ವಿಧಾನಗಳಿವೆ. ಆ ಕುರಿತ ಮಾಹಿತಿ ಈ ವರದಿಯಲ್ಲಿದೆ:

ಹಾಲ್‌ಮಾರ್ಕ್ ಪರಿಶೀಲನೆ (ಅತ್ಯಂತ ನಂಬಿಕಸ್ಥ ವಿಧಾನ)

  • ಚಿನ್ನದ ಆಭರಣಗಳ ಒಳಭಾಗದಲ್ಲಿರುವ ಮುದ್ರೆಗಳನ್ನು ಗಮನಿಸಿ.

  • ಭಾರತದಲ್ಲಿ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಮೂರು ಪ್ರಮುಖ ಗುರುತುಗಳನ್ನು ಕಡ್ಡಾಯಗೊಳಿಸಿದೆ:

    • BIS ಲೋಗೋ: ತ್ರಿಕೋನಾಕಾರದ ಮುದ್ರೆ.

    • ಶುದ್ಧತೆಯ ಗ್ರೇಡ್: 22 ಕ್ಯಾರೆಟ್ ಚಿನ್ನಕ್ಕೆ 22K916, 18 ಕ್ಯಾರೆಟ್ ಚಿನ್ನಕ್ಕೆ 18K750 ಮತ್ತು 14 ಕ್ಯಾರೆಟ್ ಚಿನ್ನಕ್ಕೆ 14K585 ಎಂದು ಬರೆಯಲಾಗಿರುತ್ತದೆ.

    • HUID ಸಂಖ್ಯೆ: ಆರು ಅಕ್ಷರಗಳ ವಿಶಿಷ್ಟ ಆಲ್ಫಾನ್ಯೂಮರಿಕ್ ಕೋಡ್ (ಉದಾಹರಣೆಗೆ: A1B2C3).

  • ನೀವು 'BIS CARE' ಮೊಬೈಲ್ ಆಪ್ ಡೌನ್‌ಲೋಡ್ ಮಾಡಿ, ಈ HUID ನಂಬರ್ ಹಾಕಿದರೆ ಆ ಚಿನ್ನವನ್ನು ಎಲ್ಲಿ ತಯಾರಿಸಲಾಯಿತು ಮತ್ತು ಅದು ಎಷ್ಟು ಶುದ್ಧವಾಗಿದೆ ಎಂಬ ಸಂಪೂರ್ಣ ವಿವರ ಸಿಗುತ್ತದೆ.

ಮನೆಯಲ್ಲೇ ಮಾಡಬಹುದಾದ ಸರಳ ಪರೀಕ್ಷೆಗಳು:

  • ಕಾಂತೀಯ ಪರೀಕ್ಷೆ: ಶುದ್ಧ ಚಿನ್ನಕ್ಕೆ ಆಯಸ್ಕಾಂತೀಯ ಗುಣ ಇರುವುದಿಲ್ಲ. ಒಂದು ಬಲಿಷ್ಠವಾದ ಆಯಸ್ಕಾಂತವನ್ನು ಚಿನ್ನದ ಹತ್ತಿರ ತಂದಾಗ ಅದು ಚಿನ್ನವನ್ನು ಆಕರ್ಷಿಸಿದರೆ, ಅದರಲ್ಲಿ ಕಬ್ಬಿಣ ಅಥವಾ ಇನ್ಯಾವುದೋ ಇತರೆ ಅಶುದ್ಧ ಲೋಹಗಳು ಬೆರೆತಿವೆ ಎಂದರ್ಥ.

  • ನೀರಿನ ಪರೀಕ್ಷೆ: ಶುದ್ಧ ಚಿನ್ನವು ತುಂಬಾ ಭಾರವಾಗಿರುತ್ತದೆ. ಒಂದು ಗ್ಲಾಸ್ ನೀರಿಗೆ ಚಿನ್ನದ ಆಭರಣವನ್ನು ಹಾಕಿದಾಗ ಅದು ನೇರವಾಗಿ ತಳಕ್ಕೆ ಹೋಗಿ ಕುಳಿತುಕೊಳ್ಳಬೇಕು. ಒಂದು ವೇಳೆ ಅದು ನೀರಿನ ಮೇಲೆ ತೇಲಿದರೆ ಅಥವಾ ಅರ್ಧಕ್ಕೆ ನಿಂತರೆ ಅದು ನಕಲಿ ಚಿನ್ನವಾಗಿರಬಹುದು.

  • ವಿನೆಗರ್ ಪರೀಕ್ಷೆ: ಆಭರಣದ ಮೇಲೆ ಒಂದೆರಡು ಹನಿ ಬಿಳಿ ವಿನೆಗರ್ ಹಾಕಿ ಸ್ವಲ್ಪ ಸಮಯ ಗಮನಿಸಿ. ಚಿನ್ನದ ಬಣ್ಣ ಕಪ್ಪಾಗಿದ್ದರೆ ಅಥವಾ ಬದಲಾದರೆ ಅದು ನಕಲಿ. ಶುದ್ಧ ಚಿನ್ನದ ಬಣ್ಣ ಎಂದಿಗೂ ಬದಲಾಗುವುದಿಲ್ಲ.

  • ಸಿರಾಮಿಕ್ ಪ್ಲೇಟ್ ಪರೀಕ್ಷೆ: ಪಾಲಿಶ್ ಮಾಡದ ಸಿರಾಮಿಕ್ ಪ್ಲೇಟ್ ಅಥವಾ ಕಲ್ಲಿನ ಮೇಲೆ ಚಿನ್ನವನ್ನು ಲಘುವಾಗಿ ಉಜ್ಜಿ ನೋಡಿ. ಅದು ಪ್ಲೇಟ್ ಮೇಲೆ ಚಿನ್ನದ ಬಣ್ಣದ (ಹಳದಿ) ಗೆರೆಯನ್ನು ಮೂಡಿಸಿದರೆ ಅದು ಅಸಲಿ. ಕಪ್ಪು ಗೆರೆ ಮೂಡಿದರೆ ಅದು ನಕಲಿ.

Gold
ಬದಲಾಗುತ್ತಿದೆ ಹೂಡಿಕೆಯ ಟ್ರೆಂಡ್! ಚಿನ್ನ, ಭೂಮಿ ಅಥವಾ ಷೇರುಪೇಟೆ? ಭಾರತೀಯರ ಚಿತ್ತ ಈಗ ಎತ್ತ?

ಇದರೊಂದಿಗೆ,

  • ಆಸಿಡ್ ಪರೀಕ್ಷೆ: ಜ್ಯುವೆಲ್ಲರಿ ಅಂಗಡಿಗಳಲ್ಲಿ ನೈಟ್ರಿಕ್ ಆಸಿಡ್ ಬಳಸಿ ಚಿನ್ನವನ್ನು ಪರೀಕ್ಷಿಸುತ್ತಾರೆ. ನೈಟ್ರಿಕ್ ಆಸಿಡ್ ಹಾಕಿದಾಗ ಚಿನ್ನದ ಬಣ್ಣ ಹಸಿರಾದರೆ ಅದು ತಾಮ್ರ ಅಥವಾ ಗಿಲ್ಟ್ ಒಡವೆ ಎಂದರ್ಥ. ಬಣ್ಣ ಬದಲಾಗದಿದ್ದರೆ ಅದು ಅಪ್ಪಟ ಚಿನ್ನ.

  • ಕರಾಟ್ ಮೀಟರ್ ಪರೀಕ್ಷೆ: ದೊಡ್ಡ ದೊಡ್ಡ ಚಿನ್ನದ ಅಂಗಡಿಗಳಲ್ಲಿ ಕರಾಟ್ ಮೀಟರ್ ಯಂತ್ರಗಳಿರುತ್ತವೆ. ಇವು ಯಾವುದೇ ಹಾನಿ ಮಾಡದೆ ಎಕ್ಸ್-ರೇ ಕಿರಣಗಳ ಮೂಲಕ ಚಿನ್ನದಲ್ಲಿ ಎಷ್ಟು ಪ್ರಮಾಣದ ಶುದ್ಧ ಚಿನ್ನವಿದೆ (ಉದಾಹರಣೆಗೆ 91.6%) ಎಂಬುದನ್ನು ಕೆಲವೇ ಸೆಕೆಂಡುಗಳಲ್ಲಿ ನಿಖರವಾಗಿ ತೋರಿಸುತ್ತವೆ.

Gold
ಕಡಿಮೆ ರೇಟ್ ಅಂತ ದುಬೈನಿಂದ ಬಂಗಾರ ತರುವ ಪ್ಲಾನ್ ಇದೆಯಾ? ಇಲ್ಲಿದೆ ನೋಡಿ.. ವಿದೇಶದಿಂದ ಭಾರತಕ್ಕೆ ಎಷ್ಟು ಚಿನ್ನ ತರಬಹುದು ಎನ್ನುವುದರ ಕಂಪ್ಲೀಟ್ ಮಾಹಿತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com