

ಅಲಹಾಬಾದ್: ಲವ್ ಜಿಹಾದ್‌ಗೆ ಹಿನ್ನಡೆ ಆದಂತಾಗಿದೆ.
ಹೌದು, ಹೆಣ್ಣುಮಕ್ಕಳನ್ನು ಪ್ರೀತಿಸಿ ಮತಾಂತರ ಮಾಡಿಸಿ ವಿವಾಹವಾಗುತ್ತಿದ್ದವರಿಗೆ ನ್ಯಾಯಾಲಯ ಆಘಾತ ನೀಡಿದೆ. ಕೇವಲ ಮದುವೆಯ ಉದ್ದೇಶಕ್ಕಾಗಿ ಇಸ್ಲಾಂ ಧರ್ಮಕ್ಕೆ ಮತಾಂತರೋಗಡರೆ ಅದನ್ನು ಮಾನ್ಯ ಮಾಡಲಾಗದು ಎಂಬ ಐತಿಹಾಸಿಕ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ ನೀಡಿದೆ.
ಇಸ್ಲಾಂ ಧರ್ಮದ ಮೇಲೆ ನಂಬಿಕೆಯಿಲ್ಲದೆ, ಕೇವಲ ಮದುವೆಯಾಗುವ ಏಕೈಕ ಉದ್ದೇಶದಿಂದ ಮತಾಂತರಗೊಳ್ಳುವುದಕ್ಕೆ ಮಾನ್ಯತೆ ನೀಡಲಾಗದು. ಒಂದು ಧರ್ಮದ ಬಗ್ಗೆ, ಅದರ ಆಚರಣೆಗಳ ಬಗ್ಗೆ ಆಕರ್ಷಣೆಗೊಂಡು ಸ್ವಇಚ್ಛೆಯಿಂದ ಮತಾಂತರಗೊಳ್ಳುವುದನ್ನು ಮಾತ್ರವೇ ಒಪ್ಪಬಹುದು ಎಂದು ನ್ಯಾಯಮೂರ್ತಿ ಸೂರ್ಯಪ್ರಕಾಶ್ ಕೇಸರ್‌ವಾಣಿ ತಿಳಿಸಿದ್ದಾರೆ.
ತಮಗೆ ವಿವಾಹಿತ ದಂಪತಿ ಎಂಬ ನಿಟ್ಟಿನಲ್ಲಿ ರಕ್ಷಣೆ ನೀಡುವಂತೆ ಕೋರಿ ಉತ್ತರ ಪ್ರದೇಶದ ಐವರು ದಂಪತಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದೆ. ಈ ಪ್ರಕರಣಗಳಲ್ಲಿ ಯುವಕರೆಲ್ಲ ಮುಸ್ಲಿಮರಾಗಿದ್ದು, ಅನ್ಯ ಧರ್ಮದ ಯುವತಿಯರನ್ನು ವಿವಾಹವಾಗಿದ್ದರು. ಮದುವೆಯಾಗುವುದಕ್ಕಾಗಿ ಈ ಯುವತಿಯರು ಇಸ್ಲಾಂಗೆ ಮತಾಂತರಗೊಂಡಿದ್ದರು. ಕೋರ್ಟ್ ನೀಡಿರುವ ಈ ಆದೇಶವು ಲವ್ ಜಿಹಾದ್‌ನಂತಹ ಕೃತ್ಯಗಳಲ್ಲಿ ತೊಡಗುತ್ತಿದ್ದವರಿಗೆ ತೀವ್ರ ಹಿನ್ನೆಡೆಯಾಗಿದೆ.