ಪಾಕ್‌ನಲ್ಲಿ ಹಿಂದೂ ಬಾಲಕಿಯರ ಬಲವಂತದ ಮತಾಂತರ ಅವ್ಯಾಹತ

ಹಿಂದೂ ಬಾಲಕಿಯರನ್ನು ಬಲವಂತವಾಗಿ ಮತಾಂತರ(ಸಾಂದರ್ಭಿಕ ಚಿತ್ರ)
ಹಿಂದೂ ಬಾಲಕಿಯರನ್ನು ಬಲವಂತವಾಗಿ ಮತಾಂತರ(ಸಾಂದರ್ಭಿಕ ಚಿತ್ರ)
Updated on

ಕರಾಚಿ: ಪಾಕಿಸ್ತಾನದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ದೀನೇ ದಿನೇ ಹೆಚ್ಚುತ್ತಿದೆ. ಹಿಂದೂ ದೇವಸ್ಥಾನಗಳನ್ನು ಒಂದೊಂದಾಗಿ ಕೆಡವುತ್ತಿರುವ ಮತಾಂಧ ಪಾಕಿಗಳು, ಈಗ ಹಿಂದೂ ಬಾಲಕಿಯರನ್ನು ಬಲವಂತವಾಗಿ ಮತಾಂತರ ಮಾಡುವ ಕೆಲಸ ತೀವ್ರಗೊಳಿಸಿದ್ದಾರೆ.

ಸಿಂಧ್ ಪ್ರಾಂತ್ಯದ ಮೇಘಾವರ್, ಭೀಲ್ ಮತ್ತು ಕೊಹ್ಲಿಯಲ್ಲಿ ಈ ರೀತಿಯ ಪ್ರಕರಣಗಳು ಸಾಕಷ್ಟು ಸಂಖ್ಯೆಯಲ್ಲಿ ನಡೆಯುತ್ತಿವೆ. ಇದರ ವಿರುದ್ಧ ಹಿಂದೂ ಸಮುದಾಯದವರು ಒಂದಾಗಿ ಪ್ರತಿಭಟನೆ ನಡೆಯುತ್ತಿದ್ದರೂ ಅದಕ್ಕೆ ಕಿವಿಗೊಡುವವರೇ ಇಲ್ಲದಂತಾಗಿದೆ.

ಇತ್ತೀಚೆಗೆ ಮತಾಂಧರು ಅಂಜಲಿ ಎನ್ನುವ ಬಾಲಕಿಯನ್ನು ಅಪಹರಿಸಿದ್ದರು. ಈಕೆ 12 ವರ್ಷದ ಬಾಲಕಿ ಎನ್ನುವ ಕಾರಣಕ್ಕೆ ಈ ಪ್ರಕರಣ ದೊಡ್ಡ ಸುದ್ದಿಯಾಯಿತು. ಸದ್ಯ ಅವಳನ್ನು ರಕ್ಷಿಸಿ ನಿರಾಶ್ರಿತರ ಕೇಂದ್ರದಲ್ಲಿ ಇರಿಸಲಾಗಿದೆ. ಈಕೆಯನ್ನು ಮತಾಂಧರು ದರ್ಗಾವೊಂದಕ್ಕೆ ಕರೆದೊಯ್ದು, ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಮದುವೆ ಮಾಡಿಕೊಡಲು ಬಲವಂತವಾಗಿ ಮತಾಂತರ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com