

ಸೌದಿಅರೇಬಿಯಾ: ಮೆಕ್ಕಾ ಮತ್ತು ಮದೀನ ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ಸ್ಥಳವಾಗಿವೆ. ಇಂತ ಮೆಕ್ಕಾದಲ್ಲಿ ಮುಸ್ಲಿಂರಿಗಾಗಿ ಶೀಘ್ರದಲ್ಲೇ ಹಲಾಲ್ ಸೆಕ್ಸ್ ಶಾಪ್ ತೆರೆಯಲಾಗುತ್ತಿದೆ. ಆದರೆ ಯಾವ ದಿನ ಶಾಪ್ ಓಪನ್ ಆಗಲಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.
ಕಳೆದ ವರ್ಷವೇ ಹಲಾಲ್ ಸೆಕ್ಸ್ ಶಾಪ್ ಸಂಸ್ಥಾಪಕ ಡಚ್ ನ ಅಬ್ದೆಲ್ ಅಜೀಜ್ ಔರಾಗ್ ತಮ್ಮ ಆಶಯವನ್ನು ಘೋಷಿಸಿದ್ದರು. ಅದರಂತೆ ಮೆಕ್ಕಾದಲ್ಲಿ ಹಲಾಲ್ ಸೆಕ್ಸ್ ಶಾಪ್ ಕೆಲಸ ಬಹುತೇಕ ಪೂರ್ಣಗೊಂಡಿದ್ದು, ಓಪನ್ ಆಗಲು ರೆಡಿಯಾಗಿದೆ ಎಂದು ತಿಳಿಸಿರುವುದಾಗಿ ಮೊರೊಕ್ಕೋ ಮೂಲದ ವೆಬ್ ಸೈಟ್ ಅಲೈಯೂಮ್ 24 ವರದಿ ಮಾಡಿದೆ.
ಕಟು ಸಂಪ್ರದಾಯಿಗಳಾಗಿರುವ ಮುಸ್ಲಿಂರಲ್ಲಿ ಲೈಂಗಿಕತೆ ಎನ್ನುವುದು ಬಹಿಷ್ಕಾರದಂತೆ ಆಗಿಬಿಟ್ಟಿದೆ. ಹೀಗಾಗಿ ಸ್ಥಳೀಯ ಕಾನೂನು ಮತ್ತು ಸಂಪ್ರದಾಯದಿಂದ ತೊಂದರೆಯಾಗುವ ಸಾಧ್ಯತೆ ಇದ್ದು, ಇದರ ನಿವಾರಣೆಗೆ ಮುಸ್ಲಿಂ ಮೌಲ್ವಿ ಹಾಗೂ ಸೌದಿ ಶೇಕ್ ಸಮಾಲೋಚನೆ ವೇಳೆ ಭರವಸೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ಮೆಕ್ಕಾದಲ್ಲಿ ಹಲಾಲ್ ಸೆಕ್ಸ್ ಶಾಪ್ ಓಪನ್ ಆಗಲಿದೆ.
ಹಲಾಲ್ ಸೆಕ್ಸ್ ಶಾಪ್ ನಲ್ಲಿ ಸುಮಾರು 18 ಬಗೆಯ ಸೆಕ್ಸ್ ಟಾಯ್ಸ್ ಗಳನ್ನು ಮಾರಾಟ ಮಾಡಲಾಗುತ್ತದೆ. ಮುಸ್ಲಿಮರು ಬಹುತೇಕವಾಗಿ ಸಾಂಪ್ರದಾಯಿಕ ನೆಲೆಯಲ್ಲಿ ಲೈಂಗಿಕವಾಗಿ ತುಂಬಾ ಕ್ರಿಯಾಶೀಲರಾಗಿರುವುದಿಲ್ಲ. ಹೀಗಾಗಿ ಮನಸ್ಸಿನಲ್ಲಿರುವ ನೆಗೆಟಿವ್ ಆಲೋಚನೆ ಬದಲಾಯಿಸಲು ಈ ಹಲಾಲ್ ಸೆಕ್ಸ್ ಶಾಪ್ ಉತ್ತಮ ವೇದಿಕೆಯಾಗುತ್ತದೆ ಎಂದು ಅಬ್ದೆಲ್ ಅಜೀಜ್ ಹೇಳಿದ್ದಾರೆ.
ನಾವು ಮಾರಾಟ ಮಾಡುವ ವಸ್ತುಗಳಲ್ಲಿ ಗೊಂಬೆಯಂತಹ ಡಾಲ್ ಗಳಿಲ್ಲ. ನಮ್ಮ ಮಾರಾಟ ಮಾಡುವ ವಸ್ತುಗಳಲ್ಲಿ ದಂಪತಿಗಳ ಸೂಕ್ಷ್ಮ ಸಂವೇದನೆ ಹಾಗೂ ಲೈಂಗಿಕ ಜೀವನ ಮತ್ತಷ್ಟು ಉತ್ತಮಗೊಳಿಸಲು ಸಹಾಯಕವಾಗುತ್ತದೆ ಎಂಬುದು ಅಬ್ದೆಲ್ ಅಜೀಜ್ ವಿವರಿಸಿದ್ದಾರೆ. ಹಲಾಲ್ ಸಾಂಪ್ರದಾಯಿಕವಾಗಿ ಫುಡ್ ಮತ್ತು ಪಾನೀಯಗಳನ್ನು ಹೆಚ್ಚಾಗಿ ರೆಫರ್ ಮಾಡುತ್ತದೆ. ಇದು ಮುಸ್ಲಿಮರಿಗೆ ಉಪಯೋಗಿಸಲು ಅನುಮತಿ ಇದೆ. ಇಸ್ಲಾಮಿಕ್ ಕಾನೂನಿನಲ್ಲಿಯೂ ಇದನ್ನು ಹೇಗೆ ಉಪಯೋಗಿಸಬಹುದು.