ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಹಿನ್ನೆಲೆಯುಳ್ಳವನು ಅಲ್ ಖೈದಾ ಉಗ್ರ ಸಂಘಟನೆ ಸೇರಿದ!

ನವದೆಹಲಿ: ಅಲ್-ಖೈದಾ ಉಗ್ರ ಸಂಘಟನೆಯ ಭಾರತದ ಮುಖ್ಯಸ್ಥ ಸನಾವುಲ್ ಹಕ್ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಹಿನ್ನೆಲೆಯುಳ್ಳವನು ಎಂದು ತಿಳಿದುಬಂದಿದೆ.
ನವದೆಹಲಿಯಿಂದ 200 ಕಿಮಿ ದೂರದಲ್ಲಿರುವ ಸಂಭಾಲ್ ಮೂಲದ ಈತನ ಕುಟುಂಬದವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿರುವ ಹಿನ್ನೆಲೆಯುಳ್ಳವರಾಗಿದ್ದಾರೆ ಎಂದು ತನಿಖೆ ವೇಳೆ ಬಹಿರಂಗವಾಗಿದೆ.
ಭಾರತದಲ್ಲಿ ಅಲ್ ಖೈದಾ ಉಗ್ರ ಸಂಘಟನೆಗೆ ಯುವಕರನ್ನು ನೇಮಕಾತಿ ಮಾಡಿ ಅವರಿಗೆ ತರಬೇತಿ ನೀಡುತ್ತಿದ್ದ ಮೊಹಮ್ಮದ್ ಅಸೀಫ್ ಎಂಬುವವನನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿತ್ತು. ಈ ವೇಳೆ ಭಾರತದ ಅಲ್-ಖೈದಾ ಮುಖ್ಯಸ್ಥ ಸನಾವುಲ್ ಹಕ್ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಹಿನ್ನೆಳೆಯುಳ್ಳವನು ಎಂಬ ವಿಷಯ ಬಹಿರಂಗವಾಗಿದ್ದು ಗುಪ್ತಚರ ಇಲಾಖೆ ಅಧಿಕಾರಿಗಳು ಈ ಬಗ್ಗೆ ಅಚ್ಚರಿಗೊಂಡಿದ್ದಾರೆ.
ಸನಾವುಲ್ ಹಕ್ ಉಗ್ರ ಸಂಘಟನೆಗೆ ಸೇರಿರುವ ಬಗ್ಗೆ ಆರು ವರ್ಷಗಳ ಹಿಂದೆ ಗುಪ್ತಚರ ಇಲಾಖೆ ಮಾಹಿತಿ ನೀಡಿದ ದಿನದಿಂದಲೇ ಆತ ಮೃತಪಟ್ಟಿದ್ದಾನೆಂದುಕೊಂಡಿರುವುದಾಗಿ ಆತನ ತಾಯಿ ಹೇಳಿದ್ದಾರೆ. ಅತಿ ಹೆಚ್ಚು ಪುಸ್ತಕ ಓದುತ್ತಿದ್ದ ಸನಾವುಲ್ ಹಕ್, ತಾನು ಖುರಾನ್ ಹಾಗೂ ಅರೇಬಿಕ್ ಶಿಕ್ಷಣ ಪಡೆಯಲು ಮದರಸಾಗೆ ಸೇರುವುದಾಗಿ ತಿಳಿಸಿದ್ದ. ಅವನನ್ನು ತಡೆಯಲು ಪ್ರಯತ್ನಿಸಿದೆವಾದರೂ ಅದು ಸಾಧ್ಯವಾಗಲಿಲ್ಲ. ಇದಾದ ನಂತರ 1995 ರಲ್ಲಿ ಆತ ಮೆಕ್ಕಾಗೆ ತೆರಳಲು ಒಂದು ಲಕ್ಷರೂಪಾಯಿ ಬೇಡಿಕೆ ಇಟ್ಟ. ಮಗನ ಬೇಡಿಕೆ ತಿರಸ್ಕರಿಸಿದ ಪೋಷಕರು ಕೆಲಸಕ್ಕೆ ಸೇರಿ ಕುಟುಂಬಕ್ಕೆ ಆಸರೆಯಾಗುವಂತೆ ಕೇಳಿಕೊಂಡಿದ್ದರು. ನಮ್ಮನ್ನು ಧಿಕ್ಕರಿಸಿ ಸನಾವುಲ್ ಹಕ್ ಭಾರತವನ್ನು ತೊರೆಯಲು ಸಿದ್ಧನಾಗಿದ್ದ ಎಂದು ಸನಾವುಲ್ ಹಕ್ ನ ತಂದೆ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


