ಕಾಬೂಲ್: ಕಾಬೂಲಿವಾಲಾಗಳು ಒಂದು ದಿನ ಭಾರತಕ್ಕೆ ಬಂದು ಎಲ್ಲರ ಮನಸ್ಸು ಗೆಲ್ಲಲಿ ಎಂದು ಆಶಿಸುತ್ತಿರುವುದಾಗಿ ನರೇಂದ್ರ ಮೋದಿ ಹೇಳಿದ್ದಾರೆ. ಶುಕ್ರವಾರ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದ ಮೋದಿ ಕಾಬೂಲಿವಾಲಾಗಳು ಭಾರತಕ್ಕೆ ಬರುವಂತಾಗಲಿ ಎಂದಿದ್ದಾರೆ
ಮಧ್ಯ ಏಷ್ಯಾ ಪ್ರಗತಿ ಸಾಧಿಸುತ್ತಲೇ ಇರಲಿ. ಕಾಬೂಲಿವಾಲಾ ಭಾರತಕ್ಕೆ ಬರಲಿ ಹಾಗೆ ಅಫ್ಘಾನಿಸ್ತಾನದಿಂದ ತಂದ ಹಣ್ಣುಗಳನ್ನು ನಾವು ಸವಿಯುವಂತಾಗಲಿ. ಅಫ್ಘಾನಿಸ್ತಾನದವರು ಭಾರತದಲ್ಲಿ ತಮ್ಮ ಇಷ್ಟದ ವಸ್ತುಗಳನ್ನು ಖರೀದಿಸಲು ಹೆಚ್ಚು ಖರ್ಚು ಮಾಡದಂತಾಗಲಿ ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಅಫ್ಘಾನಿಸ್ತಾನಕ್ಕೆ ಒಂದು ದಿನದ ಭೇಟಿ ಮಾಡಿದ ಮೋದಿ, ಭಾರತ ನಿರ್ಮಿಸಿದ ಅಫ್ಘಾನ್ ಪಾರ್ಲಿಮೆಂಟನ್ನು ಉದ್ಘಾಟಿಸಿದ್ದಾರೆ. ಅದೇ ವೇಳೆ ಈ ಪಾರ್ಲಿಮೆಂಟ್ ಭಾರತ ಮತ್ತು ಅಫ್ಘಾನಿಸ್ತಾನದ ಸ್ನೇಹ ಸಂಬಂಧದ ಸಂಕೇತವಾಗಲಿ ಎಂದು ಮೋದಿ ಹಾರೈಸಿದ್ದಾರೆ.
ಯಾರಿದು ಕಾಬೂಲಿವಾಲಾ?
ರಬೀಂದ್ರನಾಥ್ ಟ್ಯಾಗೋರ್ ಬರೆದ ಪ್ರಸಿದ್ಧ ಸಣ್ಣ ಕಥೆ ಕಾಬೂಲಿವಾಲಾ. ಅಫ್ಘಾನ್‌ನಿಂದ ಬಂದ ಒಣಹಣ್ಣುಗಳ ವ್ಯಾಪಾರಿ ಮತ್ತು ಭಾರತದ ಮಿನಿ ಎಂಬ ಪುಟಾಣಿಯ ಆತ್ಮೀಯತೆಯನ್ನು ಹೇಳುವ ಕತೆಯಿದು.