ಶ್ರೀಲಂಕಾ ಅಧ್ಯಕ್ಷ ಮೈತ್ರಿ ಪಾಲ ಸಿರಿಸೇನಾ ಸಹೋದರ ಸಾವು

ಸ್ನೇಹಿತನಿಂದ ಕೊಡಲಿ ಪೆಟ್ಟು ತಿಂದು ತೀವ್ರವಾಗಿ ಗಾಯಗೊಂಡಿದ್ದ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಕಿರಿಯ ಸಹೋರದ ಪ್ರಿಯಾಂತ ಸಿರಿಸೇನಾ ಅವರು ಕೊಲಂಬೊ ಆಸ್ಪತ್ರೆಯಲ್ಲಿ ಶನಿವಾರ ಕೊನೆಯುಸಿರೆಳಿದಿದ್ದಾರೆ...
ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಸೋದರನ ಸಾವು
ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಸೋದರನ ಸಾವು
Updated on

ಕೊಲಂಬೊ: ಸ್ನೇಹಿತನಿಂದ ಕೊಡಲಿ ಪೆಟ್ಟು ತಿಂದು ತೀವ್ರವಾಗಿ ಗಾಯಗೊಂಡಿದ್ದ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಕಿರಿಯ ಸಹೋರದ ಪ್ರಿಯಾಂತ ಸಿರಿಸೇನಾ ಅವರು ಕೊಲಂಬೊ ಆಸ್ಪತ್ರೆಯಲ್ಲಿ ಶನಿವಾರ ಕೊನೆಯುಸಿರೆಳಿದಿದ್ದಾರೆ.

ಎರಡು ದಿನಗಳ ಹಿಂದಷ್ಟೇ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ  ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಕಿರಿಯ ಸಹೋದರ ಪ್ರಿಯಾಂತ ಸಿರಿಸೇನಾ ಅವರಿಗೆ ಸ್ನೇಹಿತನೊಬ್ಬ ಕೊಡಲಿಯಿಂದ ತಲೆಗೆ ಬಲವಾಗಿ ಹೊಡೆದಿದ್ದರು. ತೀವ್ರವಾಗಿ ರಕ್ತಸ್ರಾವವಾದ ಹಿನ್ನೆಲೆಯಲ್ಲಿ ವಿಮಾನದ ಮೂಲಕ ಅವರನ್ನು ಕೊಲೊಂಬೊ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಿಯಾಂತ ಸಿರಿಸೇನಾ ಅವರನ್ನು ತೀರ್ವ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.

ದುರಾದೃಷ್ಟಕರ ಸಂಗತಿ ಎಂದರೆ ಸಹೋದರನ ಸಾವಿನ ಸಂದರ್ಭದಲ್ಲಿ ಅವರ ಸಹೋದರ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಚೀನಾ ಪ್ರವಾಸದಲ್ಲಿದ್ದಾರೆ ಎಂಬುದು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪ್ರಿಯಾಂತ ಸಿರಿಸೇನಾ ಅವರ ಮೇಲೆ ಹಲ್ಲೆ ನಡೆಸಿದ ಗೆಳೆಯನನ್ನು ಈಗಾಗಲೇ ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com