ಓ ಮೈ ಗಾಡ್ ! ದೇವರ ನಾಮಕ್ಕೆ ಇಷ್ಟೊಂದು ಸಮಸ್ಯೇನಾ?

ದೇವರ ಹೆಸರನ್ನು ಮನುಷ್ಯರಿಗೆ ಇಡುವುದು ಭಾರತದಲ್ಲಿ ಮಾನೂಲು. ಮುಕ್ಕೋಟಿ ದೇವರ ಹೆಸರುಗಳೂ ಇಲ್ಲಿ ಕೋಟ್ಯಂತರ ಮನುಷ್ಯರ ಹೆಸರಾಗಿ ಜನಜನಿತವಾಗಿದೆ. ಆದರೆ ದೇವರು, ಗಾಡ್ ಅಂತಲೇ...
ಗಾಡ್ ಗ್ಯಾಜರೋವ್
ಗಾಡ್ ಗ್ಯಾಜರೋವ್
Updated on: 

ನ್ಯೂಯಾರ್ಕ್: ದೇವರ ಹೆಸರನ್ನು ಮನುಷ್ಯರಿಗೆ ಇಡುವುದು ಭಾರತದಲ್ಲಿ ಮಾನೂಲು. ಮುಕ್ಕೋಟಿ ದೇವರ ಹೆಸರುಗಳೂ ಇಲ್ಲಿ ಕೋಟ್ಯಂತರ ಮನುಷ್ಯರ ಹೆಸರಾಗಿ ಜನಜನಿತವಾಗಿದೆ. ಆದರೆ ದೇವರು, ಗಾಡ್ ಅಂತಲೇ ಹೆಸರಿಟ್ಟುಕೊಂಡಿರುವ ಉದಾಹರಣೆ ಭಾರತದಲ್ಲಿ ಮಾತ್ರವಲ್ಲ ಜಗತ್ತಿನಲ್ಲೇ ಅಪರೂಪದಲ್ಲಿ ಅಪರೂಪ. ಗಾಡ್ ಎಂದು ಹೆಸರಿಟ್ಟು ಕೊಳ್ಳಬಹುದಾ? ಹಾಗೆಂದು ಹೆಸರಿಟ್ಟುಕೊಂಡರೆ ಏನಾಗಬಹುದು? ಈ ಪ್ರಶ್ನೆಗಳಿಗೆ ಈಗ ಉತ್ತರ ದೊರೆತಿದೆ.

ರಷ್ಯಾದಲ್ಲಿ ``ಗಾಡ್'' ಎಂಬ ಹೆಸರನ್ನಿಟ್ಟುಕೊಂಡ ಕಾರಣಕ್ಕೆ ವ್ಯಕ್ತಿಯೊಬ್ಬ ನಾನಾ ಕಾನೂನು ಸಮಸ್ಯೆ ಎದುರಿಸಿದ್ದಾನೆ. ಕೊನೆಗೆ ಕೋರ್ಟ್ ಮೆಟ್ಟಿಲೇರಿ ಜಯಿಸಿಬಂದಿದ್ದಾನೆ. ಅಲ್ಲಿನ ಕೋರ್ಟ್, ಗಾಡ್ ಹೆಸರನ್ನು ಮಾನ್ಯ ಮಾಡಿದೆ.

ದೇವರಿಗೆ ಸಾಲ ಸಿಗಲಿಲ್ಲ!:

ರಷ್ಯಾದ ಚಿನ್ನದಂಗಡಿ ಮಾಲೀಕ ಗಾಡ್ ಗ್ಯಾಜರೋವ್ ರಿಗೆ ಆತನ ತಾತನ ಪ್ರಥಮನಾಮವನ್ನೇ ಇಡಲಾಗಿತ್ತು. ತನ್ನ ಹೆಸರಿನಿಂದ ತೊಡಕುಗಳಾಗಬಹುದೆಂದು ಬಹುಶಃ ಆತನ ಪೋಷಕರಿಗೂ ಗೊತ್ತಿರಲಿಲ್ಲ. ತಾತನಿಂದ ಬಂದ ಈ ಹೆಸರಿನಿಂದಾಗಿ ಗಾಡ್‍ಗೆ ಕಾರ್ ಕೊಳ್ಳಲು ಬ್ಯಾಂಕ್‍ನಲ್ಲಿ ಸಾಲ ಸಿಗಲಿಲ್ಲ. ಏಕೆಂದರೆ ಅಲ್ಲಿನ ಈಕ್ವಿಫಾಕ್ಸ್ ಸಂಸ್ಥೆ ಈತನ ಹೆಸರಿನಲ್ಲಿ ಆರ್ಥಿಕ ವರದಿಯನ್ನೇ ತಯಾರಿಸಿರಲಿಲ್ಲ.

ಈ ಹೆಸರನ್ನು ಈಕ್ವಿಫಾಕ್ಸ್ ನಿರ್ಲಕ್ಷಿಸಿದ್ದ ಕಾರಣ ಆತನ ಅಕೌಂಟಿಗೆ ಕ್ರೆಡಿಟ್ ಪಾಯಿಂಟ್‍ಗಳು ಜಮೆಯಾಗಿಯೇ ಇರಲಿಲ್ಲ. ಆಗ ಕೋರ್ಟ್ ಮೊರೆ ಹೊಕ್ಕ ಗಾಡ್‍ಗೆ ಅಲ್ಲಿ ನ್ಯಾಯ ದೊರೆತಿದೆ. ಗಾಡ್ ಹೆಸರಿಗೆ 870 ಕ್ರೆಡಿಟ್ ಪಾಯಿಂಟ್ ಬಂದು ಸೇರಿವೆ. ಇನ್ನು ಮುಂದೆ ಆ ಹೆಸರಿನ ಬಗ್ಗೆ ತಕರಾರು ಎತ್ತುವಂತಿಲ್ಲವೆಂದು ಕೋರ್ಟ್ ಹೇಳಿದೆ. ಅಲ್ಲಿಗೆ ದೇವರಿಗೆ ನ್ಯಾಯ ದೊರೆತಂತಾಗಿದೆ. ತನಗಾದ ಪರಿಸ್ಥಿತಿ ಬೇರೆಯವರಿಗೆ ಬಾರ ದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆಂದು ಗಾಡ್ ನ್ಯೂಯಾರ್ಕ್ ಟೈಮ್ಸ್ ನೊಂದಿಗೆ ಹೇಳಿಕೊಂಡಿದ್ದಾನೆ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com