

ವಿಶ್ವಸಂಸ್ಥೆ: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ವಿಚಾರವನ್ನು ಎತ್ತಿದ್ದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಪಾಕಿಸ್ತಾನವು ಎತ್ತಿರುವ ವಿಚಾರಗಳು ಆ ದೇಶಕ್ಕೆ ಸಂಬಂಧಿಸಿದ್ದೇ ಅಲ್ಲ, ಅಲ್ಲದೆ ಪಾಕ್ ನಮ್ಮ ಆಂತರಿಕ ವ್ಯವಹಾರಗಳೊಳಗೆ ಮೂಗು ತೂರಿಸಿದೆ ಎಂದು ವಿಶ್ವಸಂಸ್ಥೆಯ ಭಾರತೀಯ ಮಿಶನ್‍ನ ಕಾರ್ಯದರ್ಶಿ ಅಭಿಷೇಕ್ ಸಿಂಗ್ ಗುರುವಾರ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಕಾಶ್ಮೀರವು ಯಾವತ್ತೂ ಭಾರತದ ಅವಿಭಾಜ್ಯ ಅಂಗವಾಗಿಯೇ ಉಳಿದಿದೆ, ಮುಂದೆಯೂ ಉಳಿಯಲಿದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನವು ಪ್ರತಿಕ್ರಿಯಿಸುವ ಹಕ್ಕನ್ನು ಬಳಸುವ ಬದಲಿಗೆ, ಆತ್ಮವಿಮರ್ಶೆಯ ಹಕ್ಕನ್ನು ಬಳಸಿಕೊಂಡರೆ ಒಳ್ಳೆಯದು ಎಂದೂ ಹೇಳಿದ್ದಾರೆ ಅಭಿಷೇಕ್ ಸಿಂಗ್.