ನೇಪಾಳ ಸೇರಿದಂತೆ ಭಾರತದ ಹಲವೆಡೆ ನಡುಗಿದ ಭೂಮಿ

ನೇಪಾಳದ ರಾಜಧಾನಿ ಕಠ್ಮಂಡು ಸೇರಿದಂತೆ ಉತ್ತರ ಭಾರತದ ಹಲವೆಡೆ ಲಘು ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಭೂಂಪನದ ತೀವ್ರತೆ 4.5 ರಷ್ಟು ದಾಖಲಾಗಿದೆ..
ನೇಪಾಳದಲ್ಲಿ ನಡುಗಿದ ಭೂಮಿ (ಸಂಗ್ರಹ ಚಿತ್ರ)
ನೇಪಾಳದಲ್ಲಿ ನಡುಗಿದ ಭೂಮಿ (ಸಂಗ್ರಹ ಚಿತ್ರ)
Updated on: 

ನವದೆಹಲಿ: ನೇಪಾಳದ ರಾಜಧಾನಿ ಕಠ್ಮಂಡು ಸೇರಿದಂತೆ ಉತ್ತರ ಭಾರತದ ಹಲವೆಡೆ ಲಘು ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಭೂಂಪನದ ತೀವ್ರತೆ 4.5 ರಷ್ಟು ದಾಖಲಾಗಿದೆ.

ರಾಜಧಾನಿ ಕಠ್ಮಂಡುವಿನ ಸಮೀಪದಲ್ಲಿರುವ ಲಲಿತ್ ಪುರ್ ಎಂಬ ಪ್ರದೇಶದಲ್ಲಿ ಭೂಂಕಪನದ ಕೇಂದ್ರ ಬಿಂದು ಎಂದು ತಿಳಿದುಬಂದಿದ್ದು, ಈ ವರೆಗೂ ಯಾವುದೇ ಸಾವು ನೋವಿನ ಕುರಿತು  ವರದಿಯಾಗಿಲ್ಲ. ಇನ್ನು ಭಾರತದ ರಾಜಧಾನಿ ದೆಹಲಿ ಮತ್ತು ಹರ್ಯಾಣದಲ್ಲಿಯೂ ಭೂಮಿ ಕಂಪಿಸಿದ ಅನುಭವವಾಗಿದ್ದು, ಭಯಭೀತಗೊಂಡ ಜನ ಮನೆಗಳಿಂದ ಹೊರಗೆ ಓಡಿ ಬಂದ ದೃಶ್ಯಗಳು  ಸಾಮಾನ್ಯವಾಗಿತ್ತು.

ವರ್ಷಗಳ ಹಿಂದೆ ಇದೇ ನೇಪಾಳದಲ್ಲಿ ಸಂಭವಿಸಿದ್ದ ಪ್ರಬಲ ಭೂಕಂಪನ ಸುಮಾರು 9 ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದರು. ಈ ಕಹಿ ನೆನಪು ಜನರ ಮನಸ್ಸಿನಲ್ಲಿ ಹಸಿರಾಗಿರುವಾಗಲೇ  ಮತ್ತೆ ಭೂಮಿ ಕಂಪಿಸಿದ್ದು, ಜನರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com