ಬಿಹಾರದಲ್ಲಿ ಶಸ್ತ್ರ ಸಮೇತ ಕುಖ್ಯಾತ ನಕ್ಸಲರ ಬಂಧನ!

ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಬಿಹಾರದಲ್ಲಿ ಕುಖ್ಯಾತ ಇಬ್ಬರು ನಕ್ಸಲ್ ಮುಖಂಡರನ್ನು ಭಾನುವಾರ ರಾತ್ರಿ ಬಂಧಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಪಾಟ್ನಾ: ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಬಿಹಾರದಲ್ಲಿ ಕುಖ್ಯಾತ ಇಬ್ಬರು ನಕ್ಸಲ್ ಮುಖಂಡರನ್ನು ಭಾನುವಾರ ರಾತ್ರಿ ಬಂಧಿಸಲಾಗಿದೆ.

ಬಿಹಾರದ ಜಮುಯಿ ಜಿಲ್ಲೆಯ ಭಲುಕ ಅರಣ್ಯ ಪ್ರದೇಶದಲ್ಲಿ ಅಡಗಿದ್ದ ಕುಖ್ಯಾತ ನಕ್ಸಲ್ ಮುಂಖಂಡರಾದ ಪಂಕಜ್ ಯಾದವ್, ಭೋಲಾ ಯಾದವ್ ಅವರನ್ನು ಬಂಧಿಸಲಾಗಿದೆ. ನಕ್ಸಲರು ಅರಣ್ಯದಲ್ಲಿ ಅಡಗಿರುವ ಕುರಿತು ಖಚಿತ  ಮಾಹಿತಿ ಪಡೆದ ಸಶಸ್ತ್ರ ಸೀಮಾ ಬಲ ಸೈನಿಕರು ಭಾನುವಾರ ರಾತ್ರಿಯೇ ಕಾರ್ಯಾಚರಣೆ ನಡೆಸಿ, ಚಾಣಾಕ್ಷವಾಗಿ ನಕ್ಸಲ್ ಮುಖಂಡರನ್ನು ಬಂಧಿಸಿದ್ದಾರೆ. ಅಂತೆಯೇ ಬಂಧಿತರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ  ಸ್ಫೋಟಗಳನ್ನು ವಶಪಡಿಸಿಕೊಂಡಿದ್ದಾರೆ.

ಬಿಹಾರ ಪೊಲೀಸ್ ಮೂಲಗಳ ಪ್ರಕಾರ ಎರಡು ಬಂದೂಕುಗಳು, ಒಂದು ಸ್ವಯಂ ಚಾಲಿತ ಪಿಸ್ತೂಲು, 305 ಬುಲೆಟ್ ಗಳ ಕಾರ್ಟಿಡ್ಜ್, 2 ಗ್ರೆನೇಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಅಂತೆಯೇ 2 ಮೊಬೈಲ್  ಹಾಗೂ ಒಂದು ಬೈಕ್, ಏಳು ಜೀವಂತ ಬಾಂಬ್ ಗಳುನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಜೀವಂತ ಬಾಂಬ್ ಗಳನ್ನು ನಿಷ್ಕ್ರಿಯಗೊಳಿಸಲಾಗಿದ್ದು, ತಮ್ಮನ್ನು ಹಿಡಿಯಲು ಬರುವ ಪೊಲೀಸರು ಮತ್ತು ಸೈನಿಕರನ್ನು  ಸ್ಫೋಟಿಸಲು ಈ ಬಾಂಬ್ ಗಳನ್ನು ನೆಲದೊಳಗೆ ಹುದುಗಿಸಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಪಂಕಜ್ ಯಾದವ್ ಮುಂಗರ್ ಜಿಲ್ಲೆಯ ಅಭಯ್ ಪುರ ಗ್ರಾಮದ ನಿವಾಸಿಯಾಗಿದ್ದು, ತನ್ನನ್ನು ತಾನೇ ಸ್ಥಳೀಯ ನಕ್ಸಲ್ ಕಮಾಂಡರ್ ಎಂದು ಗುರುತಿಸಿಕೊಂಡಿದ್ದ. ಮತ್ತೋರ್ವ ಬಂಧಿತ ನಕ್ಸಲ್ ಮುಖಂಡ ಭೋಲಾ  ಯಾದವ್ ಜಮುಯಿ ಜಿಲ್ಲೆಯ ಅಮರಖ್ ಗ್ರಾಮದ ನಿವಾಸಿಯಾಗಿದ್ದು, ಹಲವು ವರ್ಷಗಳ ಹಿಂದೆಯೇ ಈತ ನಕ್ಸಲರ ಜೊತೆ ಗುರುತಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪಂಕಜ್ ಯಾದವ್, ಭೋಲಾ ಯಾದವ್ ಅವರ  ಬಂಧನದಿಂದಾಗಿ ನಕ್ಸಲ್ ವಿರುದ್ಧದ ಕಾರ್ಯಾಚರಣೆಯಲ್ಲಿ ಪೊಲೀಸರು ಮಹತ್ವದ ಸಾಧನೆ ಮಾಡಿದ್ದು, ಇವರ ಮೂಲಕ ನಕ್ಸಲ್ ಕಾರ್ಯಚಟುವಟಿಕೆಗಳ ಕುರಿತು ಮಾಹಿತ ಹಾಕಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com