ಉಗ್ರರಿಗೆ ಬೆಂಬಲ ಮುಂದುವರೆಸಿದರೆ, ವಿದೇಶಾಂಗ ನೀತಿ ಮರು ಪರಿಶೀಲನೆ: ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ

ಪಾಕಿಸ್ತಾನ ಸರ್ಕಾರ ಉಗ್ರರಿಗೆ ನೀಡುತ್ತಿರುವ ಬೆಂಬಲವನ್ನು ಮುಂದುವರೆಸಿದ್ದೇ ಆದರೆ, ಇಸ್ತಾಂಬುಲ್ ಜೊತೆಗೆ ಮಾಡಿಕೊಂಡಿರುವ ಒಪ್ಪಂದದ ಬಗ್ಗೆ ಭಾರತ ಮರು ಪರಿಶೀಲನೆ...
ಕೇಂದ್ರ ಸಚಿವ ವೆಂಕಯ್ಯ ನಾಯ್ಡು
ಕೇಂದ್ರ ಸಚಿವ ವೆಂಕಯ್ಯ ನಾಯ್ಡು
Updated on: 

ಬೆಂಗಳೂರು: ಪಾಕಿಸ್ತಾನ ಸರ್ಕಾರ ಉಗ್ರರಿಗೆ ನೀಡುತ್ತಿರುವ ಬೆಂಬಲವನ್ನು ಮುಂದುವರೆಸಿದ್ದೇ ಆದರೆ, ಇಸ್ತಾಂಬುಲ್ ಜೊತೆಗೆ ಮಾಡಿಕೊಂಡಿರುವ ಒಪ್ಪಂದದ ಬಗ್ಗೆ ಭಾರತ ಮರು ಪರಿಶೀಲನೆ ಮಾಡುತ್ತದೆ ಎಂದು  ಪಾಕಿಸ್ತಾನಕ್ಕೆ ಭಾರತ ಭಾನುವಾರ ಖಡಕ್ ಎಚ್ಚರಿಕೆ ನೀಡಿದೆ.

ಈ ಕುರಿತಂತೆ ಮಾತನಾಡಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು, ಪ್ರಸ್ತುತ ಕಂಡುಕೊಂಡಿರುವ ದಾರಿ ಮುಂದಿನ ದಿನಗಳಲ್ಲಿ ಸಹಾಯಕ್ಕೆ ಬರುವುದಿಲ್ಲ ಎಂಬುದನ್ನು ಇಸ್ಲಾಮಾಬಾದ್ ಅರ್ಥ ಮಾಡಿಕೊಳ್ಳಬೇಕಿದೆ. ಉಗ್ರರಿಗೆ ನೀಡುತ್ತಿರುವ ಬೆಂಬಲ ಎರಡು ದೇಶಗಳ ಮಧ್ಯೆಯಿರುವ ಆರೋಗ್ಯಕರ ಒಪ್ಪಂದ ಮೇಲೆ ಪರಿಣಾಮ ಬೀರಲಿದೆ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದು, ಬೆಂಬಲ ನೀಡುವುದು, ಆರ್ಥಿಕ ನೆರವು ನೀಡುವುದು ಸಹಿಸಲು ಅಸಾಧ್ಯವಾದದ್ದು. ಇಂತರ ತಂತ್ರಗಳನ್ನು ಪಾಕಿಸ್ತಾನ ಬಿಡಬೇಕು. ಇಂತಹ ಯತ್ನಗಳು ಯಶಸ್ವಿಯಾಗುವುದಿಲ್ಲ ಎಂದು ಹೇಳಿದ್ದಾರೆ.

ಪಾಕಿಸ್ತಾನದೊಂದಿಗಿನ ಸ್ನೇಹ ಹಾಗೂ ಒಪ್ಪಂದಗಳನ್ನು ದೀರ್ಘಾವಧಿ ಕಾಲದವರೆಗೂ ಮುಂದುವರೆಸುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೂಚನೆಯೊಂದನ್ನು ನೀಡಿದ್ದರು. ಆದರೆ, ಪಾಕಿಸ್ತಾನ ಉಗ್ರತ್ವಕ್ಕೆ ನೀಡುತ್ತಿರುವ ಬೆಂಬಲವನ್ನು ನಿಲ್ಲಿಸದಿದ್ದ ಪಕ್ಷದಲ್ಲಿ ಮಾಡಿಕೊಂಡಿರುವ ಒಪ್ಪಂದದ ಬಗ್ಗೆ ಭಾರತ ಮರುಪರಿಶೀಲನೆ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಕಾಶ್ಮೀರದಲ್ಲಿ ಉಂಟಾಗಿರುವ ಉದ್ವಿಗ್ನ ವಾತಾವರಣದ ಬಗ್ಗೆ ಈ ಹಿಂದೆ ಹೇಳಿಕೆ ನೀಡಿದ್ದ ಪಾಕಿಸ್ತಾನ ಸರ್ಕಾರ, ಭಾರತ ಆಕ್ರಮಿತ ಕಾಶ್ಮೀರದಲ್ಲಿ ಮುಗ್ಧ ಕಾಶ್ಮೀರಿಗಳನ್ನು ಹತ್ಯೆ ಮಾಡಲಾಗುತ್ತಿದೆ. ವಿಶ್ವಸಂಸ್ಥೆಯ ಮುಂದೆ ಸಭೆ ನಡೆಸಿ ನಿಷ್ಪಕ್ಷಪಾತ ಜನಮತ ಬೆಂಬಲ ಪಡೆಯುವ ಮೂಲಕವಷ್ಟೇ ಜಮ್ಮು-ಕಾಶ್ಮೀರ ಸಮಸ್ಯೆ ಬಗೆಹರಿಯಲು ಸಾಧ್ಯ ಎಂದು ಹೇಳಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com