

ಹೈದರಾಬಾದ್: ತಂಪು ಪಾನೀಯವೆಂದೇ ಹೆಸರು ಮಾಡಿರುವ ಫ್ರೂಟಿ ಸಾಫ್ಟ್ ಡ್ರಿಂಕ್ಸ್ ಕುಡಿದ ಮೂವರು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿರುವ ಘಟನೆ ಹೈದರಾಬಾದ್ ಹಳೆ ಸಿಟಿಯ ಕಲಪಥರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ.
ಶನಿವಾರ ರಾತ್ರಿ ಮೂವರು ಅಜಂ ಎಂಬುವವರು ತಮ್ಮ ಮೂವರು ಮಕ್ಕಳಿಗೆ ಫ್ರೂಟಿ ಜ್ಯೂಸ್ ತಂದುಕೊಟ್ಟಿದ್ದಾರೆ. ಅಜಾನ್ (4), ಫೈಜಾನ್ (2), ಮತ್ತು ಅರ್ಹಾನ್ (1) ಮೂವರು ಮಕ್ಕಳು ಫ್ರೂಟಿ ಜ್ಯೂಸ್ ನ್ನು ಕುಡಿದಿದ್ದಾರೆ. ಜ್ಯೂಸ್ ಕುಡಿದ ಕೆಲವೇ ನಿಮಿಷದಲ್ಲಿ ಮೂವರು ಮಕ್ಕಳು ವಾಂತಿ ಮಾಡಿಕೊಂಡು ಹೊಟ್ಟೆನೋವಿನಿಂದ ಬಳಲಿದ್ದಾರೆ.
ಕೂಡಲೇ ಅಜಾಂ ಅವರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಕ್ಕಳು ಅಸ್ವಸ್ಥರಾಗಿರುವುದಕ್ಕೆ ಫ್ರೂಟಿ ಜ್ಯೂಸ್ ಕಾರಣ ಎಂದು ತಿಳಿದುಬಂದಿದೆ. ನಂತರ ಅಜಾಂ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದೀಗ ಅಂಗಡಿಯಲ್ಲಿದ್ದ ಫ್ರೂಟಿ ಜ್ಯೂಸ್ ಗಳನ್ನು ಜಪ್ತಿ ಮಾಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.