ಪಾಕಿಸ್ತಾನದ ಶೇ.50ರಷ್ಟು ವೀಸಾ ಅರ್ಜಿ ನಿರಾಕರಿಸಿದ ಭಾರತ

ಪಠಾಣ್‍ಕೋಟ್ ವಾಯುನೆಲೆ ಮೇಲಿನ ಉಗ್ರ ದಾಳಿ ಪ್ರಕರಣದ ಬಳಿಕ ಎಚ್ಚೆತ್ತಿರುವ ಭಾರತ ಸರ್ಕಾರ ಪಾಕಿಸ್ತಾನ ಪ್ರಜೆಗಳಿಗೆ ವೀಸಾ ನೀಡಲು ಹಿಂದೆ-ಮುಂದೆ ನೋಡುತ್ತಿದ್ದು, ಕಳೆದ ಮೇ ತಿಂಗಳಿಂದ ಈ ವರೆಗೂ ಶೇ.50ರಷ್ಟು ವೀಸಾ ಅರ್ಜಿಗಳನ್ನು ತಿರಸ್ಕರಿಸಿದೆ.
ಪಾಕಿಸ್ತಾನಕ್ಕೆ ಭಾರತ ವೀಸಾ ನಿರಾಕರಣೆ ಪ್ರಮಾಣ ಹೆಚ್ಚಳ (ಸಂಗ್ರಹ ಚಿತ್ರ)
ಪಾಕಿಸ್ತಾನಕ್ಕೆ ಭಾರತ ವೀಸಾ ನಿರಾಕರಣೆ ಪ್ರಮಾಣ ಹೆಚ್ಚಳ (ಸಂಗ್ರಹ ಚಿತ್ರ)
Updated on: 

ನವದೆಹಲಿ: ಪಠಾಣ್‍ಕೋಟ್ ವಾಯುನೆಲೆ ಮೇಲಿನ ಉಗ್ರ ದಾಳಿ ಪ್ರಕರಣದ ಬಳಿಕ ಎಚ್ಚೆತ್ತಿರುವ ಭಾರತ ಸರ್ಕಾರ ಪಾಕಿಸ್ತಾನ ಪ್ರಜೆಗಳಿಗೆ ವೀಸಾ ನೀಡಲು ಹಿಂದೆ-ಮುಂದೆ ನೋಡುತ್ತಿದ್ದು, ಕಳೆದ  ಮೇ ತಿಂಗಳಿಂದ ಈ ವರೆಗೂ ಶೇ.50ರಷ್ಟು ವೀಸಾ ಅರ್ಜಿಗಳನ್ನು ತಿರಸ್ಕರಿಸಿದೆ.

ಮೂಲಗಳ ಪ್ರಕಾರ ಕಳೆದ ಮೇ ತಿ೦ಗಳೊ೦ದರಲ್ಲೇ ಶೇ.50 ಪಾಕಿಸ್ತಾನೀಯರ ವೀಸಾ ಅಜಿ೯ ತಿರಸ್ಕಾರ ಮಾಡಲಾಗಿದೆ ಎಂದು ತಿಳಿದುಬಂದಿದೆ. ಸಕಾ೯ರಿ ಅ೦ಕಿಅ೦ಶಗಳ ಪ್ರಕಾರ ಮೇ  ತಿ೦ಗಳಲ್ಲಿ 35,021 ಪಾಕಿಸ್ತಾನ ನಾಗರಿಕರು ಭಾರತೀಯ ವೀಸಾ ಕೋರಿ ಅಜಿ೯ ಸಲ್ಲಿಸಿದ್ದು, ಈ ಪೈಕಿ 17,481 ಅಜಿ೯ ಸ್ವೀಕರಿಸಲಾಗಿದ್ದು, ಬರೊಬ್ಬರಿ 17,540 ಅಜಿ೯ಗಳನ್ನು ವಿವಿಧ ಕಾರಣಗಳನ್ನು  ನೀಡಿ ತಿರಸ್ಕರಿಸಲಾಗಿದೆ ಎಂದು ತಿಳಿದುಬಂದಿದೆ.

ಭದ್ರತಾ ದೃಷ್ಟಿಯಿ೦ದ ವೀಸಾ ಅಜಿ೯ ಪರಿಶೀಲನೆ ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಹೀಗಾಗಿ ಹೆಚ್ಚಿನ ವೀಸಾ ಅಜಿ೯ಗಳು ತಿರಸ್ಕಾರಗೊ೦ಡಿವೆ ಎ೦ದು ಅಧಿಕಾರಿಗಳು  ತಿಳಿಸಿದ್ದಾರೆ. ಎಲೆಕ್ಟ್ರಾನಿಕ್ ಪ್ರವಾಸಿ ವೀಸಾಕ್ಕೆ ಅಜಿ೯ ಸಲ್ಲಿಸುವವರು ಅಜಿ೯ ಪ್ರಕ್ರಿಯೆಯನ್ನು ನಿಗದಿತ ಸಮಯಕ್ಕಿ೦ತ ಮೊದಲೇ ಮುಗಿಸಲು ಯತ್ನಿಸುವುದು ಪ್ರಮುಖ ಕಾರಣ ಎ೦ದು  ಅಧಿಕಾರಿಗಳು ತಿಳಿಸಿದ್ದಾರೆ.

2015ರ ಮೇ ತಿ೦ಗಳಲ್ಲಿ ವೀಸಾ ಕೋರಿ 31,000 ಜನರು ಅಜಿ೯ ಸಲ್ಲಿಸಿದ್ದು, ಇವುಗಳಲ್ಲಿ ಕೇವಲ 8,800 ಅಜಿ೯ ಮಾತ್ರ ತಿರಸ್ಕಾರಗೊ೦ಡಿದ್ದವು. ಈ ಅಂಕಿ ಅಂಶಗಳ ಪ್ರಕಾರ 2014ರಲ್ಲಿ  ಶೇ.17ರಷ್ಟು ಪಾಕಿಸ್ತಾನದ ವೀಸಾ ಅರ್ಜಿಗಳನ್ನು ಭಾರತ ತಿರಸ್ಕರಿಸಿದ್ದರೆ, 2015ರಲ್ಲಿ ಈ ಪ್ರಮಾಣ ಶೇ.24ಕ್ಕೇ ಏರಿಕೆಯಾಗಿತ್ತು. ಪಠಾಣ್ ಕೋಟ್ ಉಗ್ರ ದಾಳಿ ಬಳಿಕ ಅಂದರೆ 2016 ರಲ್ಲಿ ಈ  ಪ್ರಮಾಣ ಶೇ.53ಕ್ಕೇರಿದೆ.

ವಿಸಾ ನಿರಾಕರಣೆ ಪ್ರಶ್ನಿಸಿದ ಪಾಕಿಸ್ತಾನ ರಾಯಭಾರ ಕಚೇರಿ
ಇನ್ನು ಪಾಕಿಸ್ತಾನ ಪ್ರಜೆಗಳಿಗೆ ಭಾರತ ಸರ್ಕಾರ ವೀಸಾ ನಿರಾಕರಿಸುತ್ತಿರುವ ಸಂಬಂಧ ಭಾರತದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ  ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವ ರಾಯಭಾರ ಕಚೇರಿ ಅಧಿಕಾರಿಗಳು, 2014 ಮತ್ತು 2015ರ ಅವಧಿಯಲ್ಲಿ ಕಡಿಮೆ ಪ್ರಮಾಣದಲ್ಲಿ ವೀಸಾ ನಿರಾಕರಣೆಯಾಗಿತ್ತು. ಆದರೆ 2016ರಲ್ಲಿ ಈ  ಪ್ರಮಾಣ ಶೇ.50ಕ್ಕೇರಿದ್ದು ಈ ಬಗ್ಗೆ ತಮ್ಮ ನಿಲುವು ತಿಳಿಸುವಂತೆ ಪತ್ರ ಬರೆಯಲಾಗಿದೆ.

2016ರ ಜನವರಿ 2ರಂದು ಪಾಕಿಸ್ತಾನ ಮೂಲದ ಉಗ್ರರು ಪಂಜಾಬ್ ಗಡಿಯಲ್ಲಿರುವ ಪಠಾಣ್ ಕೋಟ್ ವಾಯುನೆಲೆ ಮೇಲೆ ದಾಳಿ ಮಾಡಿದ್ದರು. ಸತತ ಮೂರು ದಿನಗಳ ಕಾಲ ನಡೆದ  ಕಾರ್ಯಾಚರಣೆಯಲ್ಲಿ ಓರ್ವ ನಾಗರೀಕ, 7 ಮಂದಿ ಭದ್ರತಾ ಸಿಬ್ಬಂದಿಗಳು ಸಾವನ್ನಪ್ಪಿದ್ದರು. ಅಂತೆಯೇ ದಾಳಿ ನಡೆಸಿದ್ದ 6 ಉಗ್ರರನ್ನು ಭಾರತೀಯ ಸೇನೆ ಕೊಲ್ಲುವಲ್ಲಿ ಯಶಸ್ವಿಯಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com