ಲಾಲೂ ಅಕೌಂಟ್ ಹ್ಯಾಕ್: ಅಶ್ಲೀಲ ಫೋಟೋ ಪ್ರದರ್ಶಿಸಿದ ಕ್ರಿಮಿನಲ್'ಗಳು

ಆರ್ ಜೆಡಿ ಮುಖ್ಯಸ್ಥ ಹಾಗೂ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾವದ್ ಅವರ ಫೇಸ್ ಬುಕ್ ಅಕೌಂಟ್'ನ್ನು ಹ್ಯಾಕ್ ಮಾಡಿರುವ ದುಷ್ಕರ್ಮಿಗಳು ನಂತರ...
ಆರ್ ಜೆಡಿ ಮುಖ್ಯಸ್ಥ ಹಾಗೂ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾವದ್
ಆರ್ ಜೆಡಿ ಮುಖ್ಯಸ್ಥ ಹಾಗೂ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾವದ್
Updated on

ಪಾಟ್ನ: ಆರ್ ಜೆಡಿ ಮುಖ್ಯಸ್ಥ ಹಾಗೂ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾವದ್ ಅವರ ಫೇಸ್ ಬುಕ್ ಅಕೌಂಟ್'ನ್ನು ಹ್ಯಾಕ್ ಮಾಡಿರುವ ದುಷ್ಕರ್ಮಿಗಳು ನಂತರ ಅಕೌಂಟ್ ನಲ್ಲಿ ಅಶ್ಲೀಲ ಫೋಟೋ ಹಾಗೂ ಬರಹಗಳನ್ನು ಹಾಕಿದ್ದಾರೆ ಎಂದು ತಿಳಿದುಬಂದಿದೆ.

ಸೈಬರ್ ಅಪರಾಧಿಗಳು ಲಾಲೂ ಅವರ ಫೇಸ್ ಬುಕ್ ಅಕೌಂಟ್ ನ್ನು 4 ದಿನದ ಹಿಂದೆ ಹ್ಯಾಕ್ ಮಾಡಿದ್ದಾರೆಂದು ಹೇಳಲಾಗುತ್ತಿದ್ದು, ಲಾಲೂ ಹೆಸರಿನಲ್ಲಿರುವ ಫೇಸ್ ಬುಕ್ ನಲ್ಲಿ ಅಶ್ಲೀಲ ಫೋಟೋ ಹಾಗೂ ಬರಹಗಳನ್ನು ಹಾಕಿ ಶೇರ್ ಮಾಡಿದ್ದಾರೆಂದು ಹೇಳಲಾಗುತ್ತಿದೆ.

ಇದೀಗ ವಿಷಯದ ತಿಳಿದಿರುವ ಲಾಲು ಪ್ರಸಾದ್ ಅವರ ಪುತ್ರ ಹಾಗೂ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಸೈಬರ್ ಪೊಲೀಸರ ಬಳಿ ದೂರು ದಾಖಲಿಸಿದ್ದಾರೆಂದು ತಿಳಿದುಬಂದಿದೆ. ದೂರಿನಲ್ಲಿ ಫೇಸ್ ಬುಕ್ ಅಕೌಂಟ್ ಹ್ಯಾಕ್ ಆಗಿರುವಂತೆ ತಿಳಿಸಿರುವ ಅವರು ಶೀಘ್ರವಾಗಿ ವಿಚಾರಣೆ ನಡೆಸಿ, ಆರೋಪಿಗಳನ್ನು ಬಂಧಿಸುವಂತೆ ತಿಳಿಸಿದ್ದಾರೆ.

ಪ್ರಸ್ತುತ ಸೈಬರ್ ಪೊಲೀಸರ ಸಹಾಯದಿಂದ ಖಾತೆಯನ್ನು ಸ್ಥಗಿತಗೊಳಿಸಲಾಗಿದ್ದು, ಲಾಲೂ ಹೆಸರಿನಲ್ಲಿ ಮತ್ತೊಂದು ಖಾತೆಯನ್ನು ತೆರೆಯಲಾಗಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com