ಭಾರತ ಪರಮಾಣು ಶಸ್ತ್ರಾಸ್ತ್ರಗಳನ್ನು ಮೊದಲು ಬಳಸುವುದಿಲ್ಲ ಎನ್ನುವುದು ಯಾಕೆ?: ಪರಿಕ್ಕರ್

ಭಾರತ ಪರಮಾಣು ಶಸ್ತ್ರಾಸ್ತ್ರಗಳನ್ನು ಮೊದಲು ಬಳಸುವುದಿಲ್ಲ ಎನ್ನುವುದು ಏತಕ್ಕೆ? ಎಂದು ಹೇಳುವ ಬದಲು ಭಾರತ ಜವಾಬ್ದಾರಿಯುತ ಪರಣಾಣು ಶಕ್ತಿ ರಾಷ್ಟ್ರವಾಗಿದೆ ಎಂದು ಹೇಳಬೇಕಿದೆ...
ಮನೋಹರ್ ಪರಿಕ್ಕರ್, ರಕ್ಷಣಾ ಸಚಿವ
ಮನೋಹರ್ ಪರಿಕ್ಕರ್, ರಕ್ಷಣಾ ಸಚಿವ
Updated on: 

ನವದೆಹಲಿ: ಭಾರತ ಪರಮಾಣು ಶಸ್ತ್ರಾಸ್ತ್ರಗಳನ್ನು ಮೊದಲು ಬಳಸುವುದಿಲ್ಲ ಎನ್ನುವುದು ಏತಕ್ಕೆ? ಎಂದು ಹೇಳುವ ಬದಲು ಭಾರತ ಜವಾಬ್ದಾರಿಯುತ ಪರಣಾಣು ಶಕ್ತಿ ರಾಷ್ಟ್ರವಾಗಿದೆ ಎಂದು ಹೇಳಬೇಕಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಗುರುವಾರ ಹೇಳಿದ್ದಾರೆ.

ಈ ಕುರಿತಂತೆ ಖಾಸಗಿ ಮಾಧ್ಯಮವೊಂದರ ಜೊತೆ ಮಾತನಾಡಿರುವ ಅವರು, ಪರಮಾಣು ಪರಿಕಲ್ಪನೆಯನ್ನು ಭಾರತ ಮೊದಲು ಬಳಸಿಲ್ಲ ಎಂದು ಜನರು ಹೇಳುತ್ತಾರೆ. ಆದರೆ, ಭಾರತ ರಾಷ್ಟ್ರ ಒಂದು ಜವಾಬ್ದಾರಿಯುತ ಪರಣಾಣು ಶಕ್ತಿ ಬಳಕೆದಾರನಾಗಿದ್ದು, ಪರಮಾಣು ಶಕ್ತಿಯನ್ನು ಭಾರತ ಎಂದಿಗೂ ಬೇಜವಾಬ್ದಾರಿಯುತವಾಗಿ ಬಳಸುವುದಿಲ್ಲ ಎಂದು ಹೇಳಿದ್ದಾರೆ.

ಹಾಗೆಂದ ಮಾತ್ರಕ್ಕೆ ಭಾರತ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುತ್ತದೆ ಎಂಬ ಅರ್ಥವಲ್ಲ. ಪರಮಾಣು ವಿಷಯದ ಮೇಲೆ ನಿರ್ಧಾರ ತೆಗೆದುಕೊಂಡಲ್ಲಿ, ನಮ್ಮ ಎಲ್ಲ ಸಾಮರ್ಥ್ಯವನ್ನು ಪರಮಾಣು ಶಕ್ತಿಗೆ ಬಳಸಿದಂತೆ ಆಗುತ್ತದೆ. ಭಾರತ ಪರಮಾಣು ಪರಿಕಲ್ಪನೆಯನ್ನು ಪ್ರಥಮವಾಗಿ ಬಳಸಿಲ್ಲ ಎಂದು ಎಲ್ಲರೂ ಹೇಳುತ್ತಾರೆ. ಭಾರತದ ಜವಾಬ್ದಾರಿಯುತ ಪರಮಾಣು ಶಕ್ತಿಯನ್ನು ಹೊಂದಿರುವ ರಾಷ್ಟ್ರವಾಗಿದ್ದು, ಎಂದಿಗೂ ತನ್ನ ಪರಮಾಣು ಶಕ್ತಿಯನ್ನು ಬೇಜವಾಬ್ದಾರಿತನವಾಗಿ ಬಳಕೆ ಮಾಡುವುದಿಲ್ಲ.

ಇದು ನನ್ನ ಸಿದ್ದಾಂತವಾಗಿದ್ದು, ನನ್ನ ಆಲೋಚನೆಯಾಗಿದೆ. ಈ ಹೇಳಿಕೆ ವೈಯಕ್ತಿಕವಾಗಿದ್ದು, ಇದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ. ಕೆಲವರು ಪರಿಕ್ಕರ್ ಅವರು ಪರಮಾಣು ಸಿದ್ಧಾಂತವನ್ನು ಬದಲಾಯಿಸಿದ್ದಾರೆಂದು ಹೇಳುತ್ತಾರೆ, ಅಂತಹ ಜನರಿಗೆ ಸ್ಪಷ್ಟವಾಗಿ ಹೇಳಲು ಇಚ್ಛಿಸುತ್ತೇನೆ. ಪರಮಾಣು ಸಿದ್ಧಾಂತ ಎಂದಿಗೂ, ಯಾವುದೇ ಸರ್ಕಾರದ ನೀತಿಯಲ್ಲಿಯೂ ಬದಲಾಗಿಲ್ಲ. ಈಗಲೂ ಬದಲಾಗಿಲ್ಲ ಎಂದು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನದ ಅಧಿಕಾರಿಗಳು ಭಾರತದ ಮೇಲೆ ಪರಮಾಣು ಅಸ್ತ್ರವನ್ನು ಬಳಸಲು ಪಾಕಿಸ್ತಾನ ಹಿಂಜರಿಯುವುದಿಲ್ಲ ಎಂದು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com