ನಕಲಿ ನೋಟುಗಳ ಹಾವಳಿ: ಪರೀಕ್ಷಿಸಿ ತೆಗೆದುಕೊಳ್ಳುವಂತೆ ಆರ್ ಬಿಐ ಜನತೆಗೆ ಮನವಿ

500 ರೂಪಾಯಿ ಮತ್ತು ಸಾವಿರ ರೂಪಾಯಿ ಮುಖಬೆಲೆಯ ನಕಲಿ ನೋಟುಗಳು ಹರಿದಾಡುತ್ತಿರುವುದರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಮುಂಬೈ: 500 ರೂಪಾಯಿ ಮತ್ತು ಸಾವಿರ ರೂಪಾಯಿ ಮುಖಬೆಲೆಯ ನಕಲಿ ನೋಟುಗಳು ಹರಿದಾಡುತ್ತಿರುವುದರ ಬಗ್ಗೆ ಕಳವಳಗೊಂಡಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಸಾರ್ವಜನಿಕರು ಆ ನೋಟುಗಳನ್ನು ಸ್ವೀಕರಿಸುವ ಮುನ್ನ ಪರಿಶೀಲಿಸಿ ತೆಗೆದುಕೊಳ್ಳಬೇಕೆಂದು ಹೇಳಿದೆ.
ಜನರ ಪ್ರತಿನಿತ್ಯದ ವ್ಯವಹಾರಗಳಲ್ಲಿ ಹೆಚ್ಚಿನ ಮೊತ್ತದ ಮುಖಬೆಲೆಯ ನಕಲಿ ನೋಟುಗಳು ಚಲಾವಣೆಯಾಗುತ್ತಿದ್ದು, ಇದರ ಲಾಭವನ್ನು ಮಾಡಿಕೊಳ್ಳಲು ಕೆಲವರು ನೋಡಿಕೊಳ್ಳುತ್ತಿದ್ದಾರೆ ಎಂದು ಆರ್ ಬಿಐ ಹೇಳಿದೆ.
ನಕಲಿ ನೋಟುಗಳನ್ನು ಹತ್ತಿರದಿಂದ ನೋಡಿದರೆ ಅದು ಅಸಲಿಯೊ, ನಕಲಿಯೊ ಎಂದು ಗೊತ್ತಾಗುತ್ತದೆ.ನೋಟುಗಳ ಭದ್ರತಾ ಲಕ್ಷಣಗಳ ಬಗ್ಗೆ ಆರ್ ಬಿಐಯ ವೆಬ್ ಸೈಟ್ ನಲ್ಲಿ ಕೂಡ ಸಿಗುತ್ತದೆ. 
ನಕಲಿ ನೋಟುಗಳೆಂದು ಕಂಡುಬಂದ ತಕ್ಷಣ ಅದನ್ನು ಚಲಾವಣೆ ಮಾಡದಂತೆ, ಕೂಡಲೇ ಬ್ಯಾಂಕಿನ ಗಮನಕ್ಕೆ ತರುವಂತೆ ರಿಸರ್ವ್ ಬ್ಯಾಂಕ್ ಜನತೆಯಲ್ಲಿ ಮನವಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com